ಮ್ಯಾನ್ಮಾರ್ ಗಡಿ: ನಾಗಾ ಉಗ್ರ ಶಿಬಿರಗಳ ಮೇಲೆ ಭಾರತೀಯ ಸೇನೆ ದಾಳಿ
Team Udayavani, Sep 27, 2017, 3:05 PM IST
ಹೊಸದಿಲ್ಲಿ : ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಸೇನೆ ಮ್ಯಾನ್ಮಾರ್ ಗಡಿಯಲ್ಲಿರುವ ನಾಗಾ ಬಂಡುಕೋರರ ಶಿಬಿರಗಳ ಮೇಲೆ ಹಠಾತ್ ದಾಳಿ ನಡೆಸಿದೆ. ಭಾರತೀಯ ಸೇನೆಯ ಈ ಬಿರುಸಿನ ದಾಳಿಯ ಪರಿಣಾಮವಾಗಿ ಹಲವಾರು ನಾಗಾ ಬಂಡುಕೋರರು ಹತರಾಗಿರುವುದಾಗಿ ವರದಿಯಾಗಿದೆ.
ಸುಮಾರು 70 ಪ್ಯಾರಾ ಕಮಾಂಡೋಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದು ಇಂದು ಬುಧವಾರ ನಸುಕಿನ 4.45ರ ಹೊತ್ತಿಗೆ ಈ ದಾಳಿಗಳು ನಡೆದಿರುವುದಾಗಿ ಸೇನಾ ಮೂಲಗಳು ತಿಳಿಸಿವೆ.
ಭಾರತೀಯ ಸೇನೆ ನಾಗಾ ಉಗ್ರರ ಶಿಬಿರಗಳ ಮೇಲೆ ನಡೆಸಿರುವ ದಾಳಿಯ ನಿಖರ ವರದಿಗಳನ್ನು ಎದುರು ನೋಡಲಾಗುತ್ತಿದೆ.