ರಜೌರಿಯಲ್ಲಿ ಉಗ್ರರ ಅಡಗುದಾಣ ಪತ್ತೆ ; ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ
ಪೊಲೀಸರು, ಸೇನೆ ಕಾರ್ಯಾಚರಣೆ
Team Udayavani, Jul 23, 2020, 6:00 AM IST
ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಬುಧವಾರ ಉಗ್ರರ ಅಡಗುದಾಣ ಪತ್ತೆ ಮಾಡಿದ ಭದ್ರತಾ ಪಡೆಗಳು ವಶಪಡಿಸಿಕೊಂಡ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು.
ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಉಗ್ರರ ಅಡಗುದಾಣವೊಂದನ್ನು ಭದ್ರತಾ ಪಡೆಗಳು ಬುಧವಾರ ಪತ್ತೆಹಚ್ಚಿದ್ದು, ಅಲ್ಲಿದ್ದ ಪೀಕಾ ಗನ್ ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ಮತ್ತು ಸೇನೆಯ 38 ರಾಷ್ಟ್ರೀಯ ರೈಫಲ್ಸ್ನ ತಂಡವು ಮನ್ಯಾಲ್ ಪ್ರದೇಶದಲ್ಲಿ ಜಂಟಿಯಾಗಿ ನಡೆಸಿದ ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಈ ಅಡಗುತಾಣ ಪತ್ತೆಯಾಗಿದೆ.
ದಟ್ಟ ಪೊದೆಯೊಳಗೆ ಈ ಅಡಗುದಾಣ ಪತ್ತೆಯಾಗಿದ್ದು, ಅಲ್ಲಿ ಪೀಕಾ ರೈಫಲ್, ಚೈನೀಸ್ ಪಿಸ್ತೂಲು, ಸ್ಥಳೀಯ ಪಿಸ್ತೂಲು, ಒಂದು ಎಕೆ ಮ್ಯಾಗಜಿನ್, 2 ಪಿಸ್ತೂಲು ಮ್ಯಾಗಜಿನ್, 168 ಪೀಕಾ ರೌಂಡ್, 47 ಎಕೆ ರೌಂಡ್ಸ್, 4 ಪಿಸ್ತೂಲು ರೌಂಡ್ಸ್, 2 ಯುಬಿಜಿಎಲ್ ಗ್ರೆನೇಡ್ಗಳು ಮತ್ತು 8 ಶಸ್ತ್ರಾಸ್ತ್ರ ಬೆಲ್ಟ್ ಗಳು ಸಿಕ್ಕಿದೆ ಎಂದು ರಜೌರಿಯ ಹಿರಿಯ ಪೊಲೀಸ್ ಅಧಿಕಾರಿ ಚಂದನ್ ಕೊಹ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್