‘ದಿ ರೈಸ್‌ ಆಫ್ ಫೈನಾನ್ಸ್‌’ ಬುಕ್‌ ಅನಾವರಣ ; ಆರ್ಥಿಕ ಕುಸಿತಕ್ಕೆ ಉತ್ತರ ನೀಡುವ ಪ್ರಯತ್ನ 

Team Udayavani, Nov 11, 2019, 11:06 PM IST

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಜಾಗತಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ‘ದಿ ರೈಸ್‌ ಆಫ್ ಫೈನಾನ್ಸ್‌’ ಆರ್ಥಿಕ ಕ್ಷೇತ್ರದ ಕುಸಿತಕ್ಕೆ ಕಾರಣಗಳು, ಪರಿಣಾಮಗಳು ಮತ್ತು ಪರಿಹಾರಗಳು’ ಎಂಬ ಪುಸ್ತಕವೊಂದನ್ನು ಇಂದು ಬಿಡುಗಡೆಗೊಳಿಸಿದ್ದಾರೆ. ಪ್ರಸ್ತುತ ದೇಶದ ಆರ್ಥಿಕತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಈ ಪುಸ್ತಕದಲ್ಲಿ ಸೂಕ್ತ ಪರಿಹಾರಗಳನ್ನು ಸೂಚಿಸಲಾಗಿದೆ.

ಈ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಚಿವೆ ಸೀತಾರಾಮನ್‌ ಅವರು, ಆರ್ಥಿಕ ಕ್ಷೇತ್ರದಲ್ಲಾಗುತ್ತಿರುವ ಏರಿಳಿತವನ್ನು ಪ್ರಶ್ನೆ ಮಾಡುವವರಿಗೆ ಈ ಪುಸ್ತಕ ಉತ್ತರ ರೂಪದಲ್ಲಿ ಮೂಡಿಬಂದಿದೆ ಎಂದು ತಿಳಿಸಿದರು.

ಜಗತ್ತಿನ ಆರ್ಥಿಕತೆಯ ಮೇಲೆ ಯಾವೆಲ್ಲಾ  ಅಂಶಗಳು ಪರಿಣಾಮ ಬೀರುತ್ತಿವೆ ಹಾಗೂ ನಮ್ಮ ದೇಶದ ಆರ್ಥಿಕತೆ ಯಾಕೆ ಮಂದಗತಿಯಲ್ಲಿ ಸಾಗುತ್ತಿದೆ ಎಂಬೆಲ್ಲಾ ಹಲವಾರು ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಪರಿಹಾರವನ್ನು ಸೂಚಿಸಲಾಗಿದೆ ಎಂದು ಸಚಿವೆ ನಿರ್ಮಲಾ ಅವರು ಪುಸ್ತಕದ ಕುರಿತಾಗಿ ಮಾತನಾಡುತ್ತಾ ವಿವರಿಸಿದರು.

ಈ ಪುಸ್ತಕ ಉಲ್ಲೇಖ ಮಾಡಿರುವ ಹಲವಾರು ಪರಿಹಾರ ಮಾರ್ಗಗಳು ವಿಶ್ವ ಮತ್ತು ದೇಶೀಯ ಆರ್ಥಿಕತೆಯು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಮಾರ್ಗಸೂಚಿಯಾಗಿದೆ ಎಂದು ಅವರು ಪುಸ್ತಕದ ಕುರಿತಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ