ಪಾಕ್ ಸ್ವಾತಂತ್ರ್ಯ ದಿನ ಭಾರತೀಯ ಹ್ಯಾಕರ್ಗಳಿಂದ ವೆಬ್ಸೈಟ್ ಹ್ಯಾಕ್
Team Udayavani, Aug 15, 2017, 11:19 AM IST
ಹೊಸದಿಲ್ಲಿ : ಪಾಕಿಸ್ಥಾನದ ಸ್ವಾತಂತ್ರ್ಯ ದಿನವಾದ ಆ.14ರಂದು ಭಾರತೀಯ ಹ್ಯಾಕರ್ಗಳು ಪಾಕ್ ಸರಕಾರದ ಕೆಲವೊಂದು ಪ್ರಮುಖ ವೆಬ್ಸೈಟ್ಗಳು ಸೇರಿದಂತೆ ಸುಮಾರು 500ಕ್ಕೂ ಅಧಿಕ ವೆಬ್ ಸೈಟ್ಗಳನ್ನು ಹ್ಯಾಕ್ ಮಾಡಿ, ವಿರೂಪ ಗೊಳಿಸಿ ಭಾರತ ಪರ ವಿಷಯಗಳನ್ನು ಅವುಗಳಲ್ಲಿ ತುಂಬಿದ್ದಾರೆ.
ಪಾಕ್ ಸರಕಾರದ ಮುಖ್ಯ ವೆಬ್ಸೈಟ್ಗಳಲ್ಲಿ ರಕ್ಷಣಾ ಸಚಿವಾಲಯ, ಹವಾಮಾನ ಬದಲಾವಣೆ ಸಚಿವಾಲಯ, ಅಂತರ್ ಪ್ರಾಂತೀಯ ಸಂಚಾಲನ ಸಚಿವಾಲಯ, ನೀರು ಮತ್ತು ವಿದ್ಯುತ್ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಇನ್ನೂ ಕೆಲವು ವೆಬ್ ಸೈಟ್ಗಳು ಭಾರತೀಯ ಹ್ಯಾಕರ್ಗಳ ಕೃತ್ಯದಿಂದ ತೀವ್ರವಾಗಿ ಬಾಧಿತವಾಗಿವೆ ಎಂದು ವರದಿಯಾಗಿದೆ.
ಕೆಲವೊಂದು ವೆಬ್ ಸೈಟ್ಗಳು ಇನ್ನೂ ಹ್ಯಾಕ್ ಆದ ಸ್ಥಿತಿಯಲ್ಲೇ ಇದ್ದು ಅವುಗಳಲ್ಲಿ “ವೆಬ್ಸೈಟ್ ದುರಸ್ತಿಯಲ್ಲಿದೆ; ಬೇಗನೆ ಮರಳುತ್ತೇವೆ; ಅನನುಕೂಲತೆಗೆ ಕ್ಷಮೆ ಇರಲಿ’ ಎಂಬ ಬರಹ ಕಾಣಿಸಿಕೊಳ್ಳುತ್ತಿದೆ.
“ಲೂಲುಸೆಕ್ ಇಂಡಿಯಾ’ ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಿರುವ ಹ್ಯಾಕರ್ ಸಮೂಹ ಈ ಕೃತ್ಯ ಎಸಗಿರುವುದಾಗಿ ಪಾಕ್ ಮಾಹಿತಿ ತಂತ್ರಜ್ಞಾನದ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಾಕ್ ಸರಕಾರ ಈಗಿನ್ನೂ ಈ ಹ್ಯಾಕಿಂಗ್ ಬಗ್ಗೆ ಅಧಿಕೃತ ಹೇಳಿಕೆಯನ್ನು ಕೊಡಬೇಕಾಗಿದೆ.
ಭಾರತೀಯ ಹ್ಯಾಕರ್ಗಳು ಪಾಕ್ ಸರಕಾರದ ವೆಬ್ಸೈಟ್ಗಳನ್ನು ಹ್ಯಾಕ್ ಮಾಡುತ್ತಿರುವುದು ಇದೇ ಮೊದಲ ಸಲ ಅಲ್ಲ. 2016ರ ಅಕ್ಟೋಬರ್ನಲ್ಲಿ ಭಾರತೀಯ ಹ್ಯಾಕರ್ಗಳು ಪಾಕ್ ಸರಕಾರದ ಕಂಪ್ಯೂಟರ್ ಜಾಲದ ಕೆಲವೊಂದು ಮುಖ್ಯ ಕಂಪ್ಯೂಟರ್ಗಳನ್ನು ಹ್ಯಾಕ್ ಮಾಡಿದ್ದರು. ಅದೇ ರೀತಿ ಈ ವರ್ಷದ ಆದಿಯಲ್ಲಿ ಪಾಕ್ ಹ್ಯಾಕರ್ಗಳು ಭಾರತದ ಕೆಲವೊಂದು ಉನ್ನತ ಶಿಕ್ಷಣ ಸಂಸ್ಥೆಗಳ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
MUST WATCH
ಹೊಸ ಸೇರ್ಪಡೆ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ