
Women, Sex, Love and Lust! ರೈಲ್ವೆ ನಿಲ್ದಾಣದಲ್ಲಿ ಖುಷ್ವಂತ್ ಕಾದಂಬರಿ ಮಾರಾಟಕ್ಕೆ ನಿಷೇಧ
ಅಶ್ಲೀಲ ಸಾಹಿತ್ಯದ ಪುಸ್ತಕ ಮಾರಾಟ ಮಾಡಲು ಅನುಮತಿ ನೀಡಬೇಡಿ: ರೈಲ್ವೆ ಸಮಿತಿ
Team Udayavani, Nov 21, 2019, 1:24 PM IST

ಭೋಪಾಲ್: ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಖ್ಯಾತ ಅಂಕಣಕಾರ, ಕಾದಂಬರಿಕಾರ ದಿ.ಖುಷ್ವಂತ್ ಸಿಂಗ್ ಅವರ “ವುಮೆನ್, ಸೆಕ್ಸ್, ಲವ್ ಆ್ಯಂಡ್ ಲಸ್ಟ್ “ ಕಾದಂಬರಿಯನ್ನು ಮಾರಾಟ ಮಾಡದಂತೆ ಪುಸ್ತಕ ಮಾರಾಟಗಾರರಿಗೆ ಭಾರತೀಯ ರೈಲ್ವೆ ಮಂಡಳಿಯ ಪ್ರಯಾಣಿಕ ಸೇವಾ ಸಮಿತಿ (ಪಿಎಸ್ ಸಿ) ನಿರ್ದೇಶನ ನೀಡಿದೆ.
ಇಂತಹ ಅಶ್ಲೀಲ ಸಾಹಿತ್ಯದ ಕಾದಂಬರಿ ಮಾರಾಟದಿಂದ ಯುವ ಪೀಳಿಗೆ ಹಾಳಾಗಲಿದೆ ಎಂದು ಪಿಎಸ್ ಸಿ ಆರೋಪಿಸಿದೆ. ಅಲ್ಲದೇ ರೈಲ್ವೆ ನಿಲ್ದಾಣದಲ್ಲಿರುವ ಪುಸ್ತಕ ಮಳಿಗೆಯಲ್ಲಿ ಇಂತಹ ಅಶ್ಲೀಲ ಸಾಹಿತ್ಯದ ಪುಸ್ತಕ ಮಾರಾಟ ಮಾಡಲು ಅನುಮತಿ ನೀಡದಂತೆ ಅಧಿಕಾರಿಗಳಿಗೆ ಸಮಿತಿ ನಿರ್ದೇಶನ ನೀಡಿರುವುದಾಗಿ ವರದಿ ವಿವರಿಸಿದೆ.
ಖುಷ್ವಂತ್ ಸಿಂಗ್ ಅವರ ಪುಸ್ತಕವನ್ನು ಮಾರಾಟಗಾರರು ಕೂಡಲೇ ಮಾರಾಟ ನಿಲ್ಲಿಸಿ, ಅಂತಹ ಪುಸ್ತಕಗಳನ್ನು ಮೂಲೆಗೆ ಹಾಕುವಂತೆ ಸಮಿತಿ ಸೂಚನೆ ನೀಡಿದೆ. ಈ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತವಾದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
