ಐಸೋಲೇಶನ್ ವಾರ್ಡ್ಗಳಾಗಿ ರೈಲ್ವೆ ಬೋಗಿಗಳು!
Team Udayavani, Mar 29, 2020, 8:15 AM IST
ಕೋವಿಡ್ 19 ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರೈಲು ಬೋಗಿಗಳನ್ನು ಐಸೋಲೇಷನ್ ವಾರ್ಡ್ ಗಳನ್ನಾಗಿ ಪರಿವರ್ತಿಸಲಾಗಿದೆ. ಅದಕ್ಕೆ ಪೂರಕವಾಗಿ ಹೊಸದಿಲ್ಲಿಯಲ್ಲಿರುವ ರೈಲ್ವೆ ಇಲಾಖೆಯ ವರ್ಕ್ ಶಾಪ್ನಲ್ಲಿ ಸ್ಲೀಪರ್ ಕೋಚ್ಗಳನ್ನು, ಐಸೋಲೇಶನ್ ವಾರ್ಡ್ಗಳನ್ನಾಗಿ ಮಾರ್ಪಡಿಸಲಾಗಿದೆ.
ಅವುಗಳಲ್ಲಿ ಬಾತ್ರೂಮ್ ಜತೆಗೆ ಮರುವಿನ್ಯಾಸಗೊಂಡ ಟಾಯ್ಲೆಟ್ಗಳಿವೆ. ಅಗತ್ಯ ಕ್ವಾರಂಟೈನ್ ಸೌಲಭ್ಯಗಳನ್ನು ನೀಡಲಾಗಿದೆ. ವಾರಕ್ಕೆ ಒಂದು ವಿಭಾಗದಂತೆ, ಶೀಘ್ರದಲ್ಲಿ ದೇಶಾದ್ಯಂತ ಈ ಯೋಜನೆಯನ್ನು ವಿಸ್ತರಿಸಲು ಇಲಾಖೆ ಚಿಂತಿಸಿದೆ. ರೈಲ್ವೆ ಇಲಾಖೆಯ ಸಿಬ್ಬಂದಿಗಳ ಉಸ್ತುವಾರಿಯಲ್ಲಿ, ಪ್ಯಾರಾ ಮೆಡಿಕಲ್ ಸ್ಟಾಫ್, ರೋಗಿಯ ಆರೈಕೆ ನೋಡಿಕೊಳ್ಳಲಿದ್ದಾರೆ.
‘ರೈಲುಗಳನ್ನು ಸ್ಯಾನಿಟೈಸರ್ನಿಂದ ಸ್ವಚ್ಛಗೊಳಿಸಲಾಗುತ್ತಿದೆ. ರೋಗಿಗಳು ಗುಣಮುಖರಾಗಲು ಅಗತ್ಯ ವಾತಾವರಣ ನಿರ್ಮಿಸುವುದು ಇಲಾಖೆಯ ಉದ್ದೇಶ’ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಕೊಚ್ಚಿ ಮೂಲದ ಕಂಪನಿ, ಈ ಯೋಜನೆಯನ್ನು ಕೇಂದ್ರ ಸರಕಾರದ ಮುಂದಿಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು