ಇನ್ನು ಒಂದೇ ತಿಂಗಳಲ್ಲಿ ಭಾರತಕ್ಕೆ ಬರಲಿದೆ ರಫೇಲ್ ಯುದ್ಧ ವಿಮಾನ
ಸೆ.20ರಂದು ಮೊದಲ ವಿಮಾನ ಹಸ್ತಾಂತರ
Team Udayavani, Aug 21, 2019, 7:30 PM IST
ಹೊಸದಿಲ್ಲಿ: ದೇಶದ ಬಹುನಿರೀಕ್ಷಿತ ಅತ್ಯಾಧುನಿಕ ಯುದ್ಧ ವಿಮಾನ, ಫ್ರಾನ್ಸ್ನ ಡಸ್ಸಾಲ್ಟ್ ಏವಿಯೇಷನ್ ನಿರ್ಮಾಣದ ರಫೇಲ್, ಪ್ರಥಮವಾಗಿ ಸೆ.20ರಂದು ಹಸ್ತಾಂತರವಾಗಲಿದೆ.
ಇದಕ್ಕಾಗಿ ಭಾರತದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಅವರು ಫ್ರಾನ್ಸ್ಗೆ ತೆರಳಲಿದ್ದಾರೆ. ಒಪ್ಪಂದ ಪ್ರಕಾರ ಮೊದಲ ವಿಮಾನ ಹಸ್ತಾಂತರವಾದ ಬಳಿಕ ಮುಂದಿನ ವರ್ಷ ಮೇ ತಿಂಗಳಿಂದ ಹಂತ ಹಂತವಾಗಿ 36 ಯುದ್ಧ ವಿಮಾನಗಳು ಭಾರತಕ್ಕೆ ಸಿಗಲಿವೆ. ಸಚಿವ ರಾಜನಾಥ್ ಮತ್ತು ಧನೋವಾ ಅವರಿಗೆ ಫ್ರಾನ್ಸ್ನಲ್ಲಿರುವ ರಫೇಲ್ ತಯಾರಿಕಾ ಘಟಕ ಬೋರ್ಡೆಕ್ಸ್ ಎಂಬಲ್ಲಿ ವಿಮಾನ ಹಸ್ತಾಂತರಿಸಲಾಗುವುದು.
ಇನ್ನು ರಫೇಲ್ ಯುದ್ಧ ವಿಮಾನ ಚಾಲನೆ ಕುರಿತಾಗಿ ವಾಯುಪಡೆಯ 24 ಪೈಲೆಟ್ಗಳಿಗೆ ಮೂರು ಬ್ಯಾಚ್ಗಳಲ್ಲಿ ತರಬೇತಿ ನೀಡಲಾಗುತ್ತದೆ. ಮುಂದಿನ ವರ್ಷ ಮೇ ವರೆಗೆ ಈ ತರಬೇತಿ ನಡೆಯಲಿದೆ. ರಫೇಲ್ ಸ್ಕ್ವಾಡ್ರನ್ ಅನ್ನು ಅಂಬಾಲಾ, ಹರಿಯಾಣಾ, ಹಶಿಮರಾ, ಬಂಗಾಲಗಳಲ್ಲಿ ನಿಯೋಜಿಸಲಾಗುತ್ತದೆ. 2016ರಲ್ಲಿ ಭಾರತ ಫ್ರಾನ್ಸ್ ಜತೆ ರಫೇಲ್ ಪೂರೈಕೆಗೆ ಒಪ್ಪಂದ ಮಾಡಿಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ