ಯೋಜನೆಗಳ ಮೇಲೆ ಮೋದಿ ಡ್ರೋನ್ ಕಣ್ಣು; ಯೋಜನೆಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲ
"ಭಾರತ ಡ್ರೋನ್ ಮಹೋತ್ಸವ'ದಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ
Team Udayavani, May 28, 2022, 7:10 AM IST
ಹೊಸದಿಲ್ಲಿ: ಸರಕಾರಿ ಯೋಜನೆಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಅಗತ್ಯ. ನಾನೀಗ ಸ್ಥಳಕ್ಕೆ ಭೇಟಿ ನೀಡುವ ಬದಲು ಡ್ರೋನ್ ರವಾನಿಸಿ ಹಠಾತ್ ಸಮೀಕ್ಷೆ ನಡೆಸುತ್ತೇನೆ…
– ಹೀಗೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹೊಸದಿಲ್ಲಿ ಯಲ್ಲಿ “ಭಾರತ ಡ್ರೋನ್ ಮಹೋತ್ಸವ’ ಉದ್ಘಾಟಿಸಿ ಮಾತನಾಡಿ, ಡ್ರೋನ್ ಬಳಕೆ ಮಾಡುವುದರಿಂದ ಸರಕಾರಿ ಯೋಜನೆಗಳ ಗುಣಮಟ್ಟ ಪರಿಶೀಲಿಸುವುದು ಈಗ ಸುಲಭವಾಗಿದೆ ಎಂದಿದ್ದಾರೆ. ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಲಿದ್ದೇನೆ ಎಂದು ಅಧಿಕಾರಿಗಳಿಗೆ ಹೇಳುವ ಅಗತ್ಯವಿಲ್ಲ. ಏಕೆಂದರೆ ಹಾಗೆ ಹೇಳಿದರೆ ಎಲ್ಲವೂ ಸುಸೂತ್ರವಾಗಿರುತ್ತದೆ. ಡ್ರೋನ್ ಕಳುಹಿಸಿದರೆ ಯಾವ ಕೆಲಸ ಎಷ್ಟು ಪ್ರಮಾಣದಲ್ಲಿ ಆಗಿದೆ ಎಂಬುದು ನನಗೆ ತಿಳಿಯುತ್ತದೆ ಮತ್ತು ಸಮೀಕ್ಷೆ ನಡೆಸಲಾಗಿದೆ ಎಂಬ ವಿಚಾರ ಅಧಿಕಾರಿಗಳಿಗೆ ಗೊತ್ತೇ ಆಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೇಂದ್ರ ಸರಕಾರವು ತಂತ್ರಜ್ಞಾನ ಬಳಕೆಯ ಮೂಲಕ ದೇಶದ ಕೊನೆಯ ನಾಗರಿಕನಿಗೂ ಉತ್ತಮ ಆಡಳಿತ ಮತ್ತು ಸೇವೆಯನ್ನು ಒದಗಿಸುವ ಗುರಿ ಹೊಂದಿದೆ ಎಂದು ಮೋದಿ ಹೇಳಿದರು. ಡ್ರೋನ್ ತಂತ್ರಜ್ಞಾನದ ಮಹತ್ವ
ವನ್ನು ಸಾರಿದ ಅವರು, ಕೇದಾರನಾಥದಲ್ಲಿ ಕೈಗೊಳ್ಳಲಾಗಿದ್ದ ಅಭಿವೃದ್ಧಿ ಯೋಜನೆಗಳ ಸ್ಥಿತಿಗತಿಯನ್ನು ಡ್ರೋನ್ ಮೂಲಕವೇ ಪರಿಶೀಲಿಸಿದ್ದೆ. ಪ್ರತೀ ಬಾರಿ ಅಲ್ಲಿಗೆ ತೆರಳುವ ಬದಲು ಇದು ಸುಲಭವಾಗಿತ್ತು ಎಂದರು.
ಅನ್ಯಾಯವಾಗಿತ್ತು ಹಿಂದಿನ ಸರಕಾರಗಳ ಅವಧಿ ಯಲ್ಲಿ ತಂತ್ರಜ್ಞಾನಗಳನ್ನು ಸೂಕ್ತ ರೀತಿಯಲ್ಲಿ ಬಳಸಲು ಹಿಂದೇಟು ಹಾಕಲಾಗುತ್ತಿತ್ತು. ತಂತ್ರಜ್ಞಾನ ವನ್ನು ಸಮಸ್ಯೆಯ ಭಾಗ ಮತ್ತು ಬಡವರ ವಿರೋಧಿ ಎಂದು ಪರಿಗಣಿಸಲಾಗುತ್ತಿತ್ತು. ಹೀಗಾ ಗಿಯೇ 2014ಕ್ಕಿಂತ ಹಿಂದೆ ಅಧಿ ಕಾರ ದಲ್ಲಿದ್ದ ಸರಕಾರಗಳು ಆಡಳಿತದಲ್ಲಿ ತಂತ್ರಜ್ಞಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಲ್ಲ. ಇದರಿಂದ ಮಧ್ಯಮ ಮತ್ತು ಬಡ ವರ್ಗಕ್ಕೆ ಅನ್ಯಾಯವಾಯಿತು ಎಂದು ಮೋದಿ ಹೇಳಿದ್ದಾರೆ.
ಬೆಂಗಳೂರು ಸ್ಟಾರ್ಟ್ ಅಪ್
ಡ್ರೋನ್ ಹಾರಿಸಿದ ಪ್ರಧಾನಿ
ಪ್ರಧಾನಿ ಬೆಂಗಳೂರಿನ ಆ್ಯಸ್ಟೀರಿಯಾ ಏರೋ ಸ್ಪೇಸ್‌ಪ್ರೈ.ಲಿ. ಸಂಸ್ಥೆಯು ಕಾವಲು, ಭದ್ರತೆಗಾಗಿ ಅಭಿವೃದ್ಧಿಪಡಿಸಿ ರುವ ಡ್ರೋನ್ ಹಾರಿಸಿದರು. ಆ್ಯಸ್ಟೀರಿಯಾ ಸಂಸ್ಥೆ ಕೌÉಡ್ ಆಧಾರಿತ ಡ್ರೋನ್ ನಿರ್ವಹಣ ವ್ಯವಸ್ಥೆ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾಳೆ ಮಹಾ ಬಹುಮತ: ಇಂದು ಸುಪ್ರೀಂನಲ್ಲಿ ತುರ್ತು ಅರ್ಜಿ ವಿಚಾರಣೆ
Update: ರಾಜಸ್ಥಾನ ಶಿರಚ್ಛೇದ ಪ್ರಕರಣ-ಕರ್ಫ್ಯೂ ಜಾರಿ, ಆರೋಪಿಗಳ ಬಂಧನ; ಎನ್ ಐಎ ತನಿಖೆ
ಶೀಘ್ರ ಸರಕಾರಿ ಬ್ಯಾಂಕ್ ಪೂರ್ಣ ಖಾಸಗೀಕರಣ? ಪಿಎಸ್ಬಿಗಳಿಂದ ನಿರ್ಗಮಿಸಲು ಸರಕಾರ ಸಿದ್ಧತೆ
ವಿನಾಯಿತಿಗೆ ಎಳ್ಳುನೀರು: ಹೊಟೇಲ್ ವಾಸ್ತವ್ಯ,ಆಸ್ಪತ್ರೆ ಕೊಠಡಿ,ಅಂಚೆ ಸೇವೆ ಇನ್ನು ದುಬಾರಿ
8 ಆಸನದ ವಾಹನಗಳಲ್ಲಿ 6 ಏರ್ಬ್ಯಾಗ್ ಕಡ್ಡಾಯ! ಶೀಘ್ರದಲ್ಲೇ ನಿಯಮ ಜಾರಿ: ಸಚಿವ ಗಡ್ಕರಿ ಘೋಷಣೆ