ಫೇಸ್ಬುಕ್ ಲೈವ್ ಆ್ಯಕ್ಸಿಡೆಂಟ್;3 ಯುವಕರು ಸಾವು
Team Udayavani, Aug 31, 2017, 2:01 PM IST
ಶ್ರೀನಗರ: ಇದು ದೇಶದ ಮೊದಲ ಫೇಸ್ಬುಕ್ ಲೈವ್ ಅಪಘಾತ ಎಂದು ವರದಿಯಾಗಿದೆ. ಶ್ರೀನಗರದಲ್ಲಿ ಫೇಸ್ಬುಕ್ ಲೈವ್ ವಿಡಿಯೋ ಮಾಡುತ್ತಾ ಕಾರಿನಲ್ಲಿ ವೇಗವಾಗಿ ಪ್ರಯಾಣಿಸುತ್ತಿದ್ದ ಮೂವರು ಯುವಕರು ದಾರುಣವಾಗಿ ಸಾವನ್ನಪ್ಪಿರುವ ಅವಘಡದ ವಿಡಿಯೋ ಇದೀಗ ವೈರಲ್ ಆಗಿದೆ.
ರಸ್ತೆಯಲ್ಲಿ ಎದುರಿನಿಂನ ಕಾರೊಂದು ಬಂದಿದ್ದು ಈ ವೇಳೆ ಕಾರಿನಲ್ಲಿದ್ದ ನಾಲ್ವರು ಯುವಕರ ಪೈಕಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಅಗಸ್ಟ್ 15 ರಂದು ಘಟನೆ ನಡೆದಿದೆ ಎನ್ನಲಾಗಿದ್ದು ವಿಡಿಯೋ ಇದೀಗ ವೈರಲ್ ಆಗಿದೆ.