ಹತ್ಯೆ ಕೇಸ್; ಜನಪ್ರಿಯ ಕ್ರೈಂ ಶೋ ಟಿವಿ ನಿರೂಪಕನಿಗೆ ಜೀವಾವಧಿ ಶಿಕ್ಷೆ
Team Udayavani, Dec 20, 2017, 5:37 PM IST
ನವದೆಹಲಿ: ಸುಮಾರು 17 ವರ್ಷಗಳ ಹಿಂದೆ ನಡೆದಿದ್ದ ಪತ್ನಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯಾಸ್ ಮೋಸ್ಟ್ ವಾಂಟೆಡ್ ಜನಪ್ರಿಯ ಕ್ರೈಂ ಶೋನ ಮಾಜಿ ಟಿವಿ ನಿರೂಪಕ ಸುಹೈಬ್ ಇಲ್ಯಾಸಿ(51ವರ್ಷ)ಗೆ ದೆಹಲಿ ಕೋರ್ಟ್ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಪತ್ನಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಶನಿವಾರ ಇಲ್ಯಾಸಿಯನ್ನು ದೋಷಿ ಎಂದು ಪ್ರಕಟಿಸಿತ್ತು.
ಜನವರಿ 11, 2000ನೇ ಇಸವಿಯಲ್ಲಿ ಅಂಜು ಇಲ್ಯಾಸಿ(30ವರ್ಷ) ಪಶ್ಚಿಮ ದೆಹಲಿಯ ಮನೆಯಲ್ಲಿ ಚೂರಿ ಇರಿತದಿಂದ ಹತ್ಯೆಗೊಳಗಾಗಿದ್ದರು. ತನ್ನ ಪತ್ನಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ಸುಹೈಬ್ ಪೊಲೀಸರಿಗೆ ತಿಳಿಸಿದ್ದ. ಸುಮಾರು 3 ತಿಂಗಳ ಬಳಿಕ ವರದಕ್ಷಿಣೆ ಕಿರುಕುಳ ಆರೋಪದಡಿ ಪೊಲೀಸರು ಇಲ್ಯಾಸಿಯನ್ನು ಬಂಧಿಸಿದ್ದರು.
ಅಂಜು ಹತ್ಯೆಗೆ ಸುಹೈಬ್ ಇಲ್ಯಾಸಿಯೇ ಕಾರಣ ಎಂದು ಅತ್ತೆ ಮತ್ತು ಅಂಜು ಸಹೋದರಿ ಆರೋಪಿಸಿದ್ದರು. ಪ್ರಾಸಿಕ್ಯೂಷನ್ ಕಲೆ ಹಾಕಿರುವ ಮಾಹಿತಿ ಪ್ರಕಾರ ಮೇಲ್ನೋಟಕ್ಕೆ ಕೊಲೆ ಆರೋಪ ಸಾಬೀತುಪಡಿಸುತ್ತದೆ(ಐಪಿಸಿ 302) ಎಂದು ಜಸ್ಟೀಸ್ ಇಂದರ್ ಮೀತ್ ಕೌರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ