
ಪಿಒಕೆಯಲ್ಲಿ ಉಗ್ರ ಅಟಾಟೋಪ
ಲೆ| ಜ| ಬಗ್ಗವಳ್ಳಿ ಸೋಮಶೇಖರ ರಾಜು ಅಭಿಮತ
Team Udayavani, Jun 1, 2020, 6:45 AM IST

ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ವಲಯಾದ್ಯಂತ ಉಗ್ರರ ಶಿಬಿರಗಳು, ಭಯೋತ್ಪಾದಕರ 15ಕ್ಕೂ ಹೆಚ್ಚು ಲಾಂಚ್‌ಪ್ಯಾಡ್‌ಗಳೇ ತುಂಬಿವೆ. ಈ ಬೇಸಗೆಯಲ್ಲಿ ಉಗ್ರರ ನುಸುಳುವಿಕೆ ಹೆಚ್ಚುವ ಸಾಧ್ಯತೆ ಇದ್ದು, ಅವರನ್ನು ಬಗ್ಗುಬಡಿಯಲು ಸೇನೆ ಸಜ್ಜಾಗಿದೆ ಎಂದು ಭಾರತೀಯ ಸೇನೆಯಲ್ಲಿ ಉನ್ನತ ಸ್ಥಾನದಲ್ಲಿರುವ ಕನ್ನಡಿಗ ಲೆ| ಜ| ಬಗ್ಗವಳ್ಳಿ ಸೋಮಶೇಖರ ರಾಜು ಹೇಳಿದ್ದಾರೆ.
ಕಾಶ್ಮೀರದ ಒಳನಾಡಿನಲ್ಲಿ ಉಗ್ರರ ನಿರ್ಮೂಲನೆ ಯಶಸ್ವಿಯಾಗಿದೆ. ಕಾಶ್ಮೀರದ ಜನರು ಶಾಂತಿ ಮತ್ತು ಸುಧಾರಿತ ಬದುಕನ್ನು ಅನುಭವಿಸುತ್ತಿದ್ದಾರೆ ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಅವರು ವಿವರಿಸಿದ್ದಾರೆ.
ಭಾರತ ಸುಮ್ಮನೆ ಕುಳಿತಿಲ್ಲ
ಲಡಾಖ್ ಬುಡದಲ್ಲಿ ಗಟ್ಟಿ ಮಿಲಿಟರಿ ನೆಲೆ ಸ್ಥಾಪನೆಗೆ ಕೇಂದ್ರ ಸರಕಾರ ಒತ್ತುಕೊಟ್ಟಿದೆ. ಸಮರ್ಥ ಯೋಧರನ್ನು ಪೂರ್ವ ಲಡಾಖ್‌ನಲ್ಲಿ ನಿಯೋಜಿಸಲಾಗಿದೆ. ಚೀನದ ಸೈನಿಕರಿಗೆ ಒಂದು ಹೆಜ್ಜೆ ಮುಂದೆ ಬರಲೂ ಸಾಧ್ಯವಾಗಿಲ್ಲ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಚೀನ ಹಸಿ ಸುಳ್ಳು
ಅತ್ತ ಪಾಕಿಸ್ಥಾನ ಉಗ್ರರ ಮೂಲಕ ತನ್ನ ಅಟಾಟೋಪ ಮುಂದುವರಿಸಿದ್ದರೆ, ಇತ್ತ ಚೀನವು ಪೂರ್ವ ಲಡಾಖ್ ಗಡಿ ಯಿಂದ ಯೋಧ ರನ್ನು ವಾಪಸ್ ಕರೆಸಿಕೊಂಡೇ ಇಲ್ಲ. ಭಾರತೀಯ ಗಡಿಯಿಂದ ಒಂದೆರಡು ತಾಸು ಪ್ರಯಾಣದಷ್ಟು ದೂರದಲ್ಲಿ ಚೀನವು ಕ್ಷಿಪ್ರವಾಗಿ ವ್ಯವಸ್ಥಿತ ಏರ್‌ಪೋರ್ಟ್, ಮಿಲಿಟರಿ ನೆಲೆಗಳನ್ನು ಸ್ಥಾಪಿಸಿದೆ. ಶಸ್ತ್ರಸಜ್ಜಿತ ಘಟಕಗಳನ್ನು ತೆರೆದಿದೆ. 5 ಸಾವಿರ ಸೈನಿಕರನ್ನು ಗಲ್ವಾನ್ ನದಿಯ ತೀರದಲ್ಲಿ ಶಾಶ್ವತವಾಗಿ ಸ್ಥಾಪಿಸಲು ಸಿದ್ಧತೆ ನಡೆಸಿರುವಂತೆ ಕಾಣುತ್ತಿದೆ.
ರಸ್ತೆ ಮತ್ತು ಸರೋವರದ ಜಲಮಾರ್ಗ ಬಳಸಿ ಕೊಂಡು, ನಾಲ್ಕು ಆಯಕಟ್ಟಿನ ಪ್ರದೇಶಗಳಲ್ಲಿ ಚೀನೀ ಸೈನಿಕರು ಜಮಾಯಿಸಿದ್ದಾರೆ. ಈ 26 ದಿನಗಳಲ್ಲಿ ಹಲವು ಬಾರಿ ಉಭಯ ರಾಷ್ಟ್ರಗಳ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
