ಏಪ್ರಿಲ್‌ನಲ್ಲಿ ಚಂದ್ರಯಾನ-2 ಜಾರಿ
Team Udayavani, Feb 18, 2018, 8:15 AM IST
ಹೊಸದಿಲ್ಲಿ: ಬರೋಬ್ಬರಿ ಒಂಭತ್ತು ವರ್ಷಗಳ ಬಳಿಕ ಇದೇ ಏಪ್ರಿಲ್‌ನಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಚಂದ್ರಯಾನದ ಎರಡನೇ ಆವೃತ್ತಿ ಕೈಗೆತ್ತಿಕೊಳ್ಳಲಿದೆ. ಈ ಯೋಜನೆ ಜಾರಿ ಮಾಡಲು ಕೇಂದ್ರ ಸರಕಾರಕ್ಕೆ 800 ಕೋಟಿ ರೂ. ವೆಚ್ಚವಾಗಲಿದೆ ಎಂದು ಪ್ರಧಾನಮಂತ್ರಿಗಳ ಕಚೇರಿಯಲ್ಲಿ ಸಹಾಯಕ ಸಚಿವರಾಗಿರುವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಪ್ರತಿಕೂಲ ಹವಾಮಾನದಿಂದಾಗಿ ಬಾಹ್ಯಾಕಾಶ ನೌಕೆ ಉಡಾವಣೆ ಸಾಧ್ಯವಾಗದಿದ್ದರೆ ನವೆಂಬರ್‌ನಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.ಈ ಹಿಂದೆ ಯೋಚಿಸಿದ್ದಂತೆ ಮಾರ್ಚ್ ನಲ್ಲಿ ಅದನ್ನು ಕೈಗೆತ್ತಿಕೊಳ್ಳಬೇಕಿತ್ತು. ಈ ಬಾರಿ ಚಂದ್ರನ ದಕ್ಷಿಣ ತುದಿಯಲ್ಲಿ ಗಗನನೌಕೆ ಇಳಿಸುವ ಗುರಿ ಹೊಂದಲಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.
ಈ ನಡುವೆ ಇಸ್ರೋದಲ್ಲಿ ಗೌರವ ಪ್ರಾಧ್ಯಾಪಕರಾಗಿರುವ ಬಿ.ಎನ್.ಸುರೇಶ್ ಮಾತನಾಡಿ, ಬಾಹ್ಯಾಕಾಶಕ್ಕೆ ಮಾನವರನ್ನು ಒಯ್ಯಲು ಸಂಸ್ಥೆ ಸಿದ್ಧವಾಗಿದೆ. ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನ ಕೂಡ ಸಿದ್ಧಗೊಂಡಿದೆ. ಸರಕಾರದ ವತಿಯಿಂದ ಅನುಮತಿಯಷ್ಟೇ ಬೇಕಾಗಿದೆ ಎಂದಿದ್ದಾರೆ.
ಏಪ್ರಿಲ್ 2018- ಸಂಭಾವ್ಯ ಉಡಾವಣೆ
ಜಿಎಸ್‌ಎಲ್‌ವಿ- ಎಫ್10- ಉಡಾವಣಾ ವಾಹನ
800 ಕೋಟಿ ರೂ.- ಸಂಭಾವ್ಯ ವೆಚ್ಚ
ಆರ್ಬಿಟರ್- 100 ಕಿಮೀ ಕಕ್ಷೆಯ ವ್ಯಾಪ್ತಿಯಲ್ಲಿ ಉಡಾಯಿಸಲಾಗುತ್ತದೆ
ಪೇಲೋಡ್-6
ಲ್ಯಾಂಡರ್- ನಿಯೋಜಿತ ಸ್ಥಳದಲ್ಲಿ ಗಗನನೌಕೆಯನ್ನು ಇಳಿಸುವಂತೆ ಮಾಡುತ್ತದೆ. ಪೇಲೋಡ್-3
ರೋವರ್- ಗಗನ ನೌಕೆಯನ್ನು ಚಲಿಸುವಂತೆ ಮಾಡುತ್ತದೆ
ಪೇಲೋಡ್-2
ಉದ್ದೇಶ- ಚಂದ್ರನ ಮೇಲ್ಮೆ„ ಭಾಗದಲ್ಲಿರುವ ಖನಿಜಯುಕ್ತ ಅಂಶ, ವಾತಾವರಣ, ಮೂಲಭೂತ ಅಂಶಗಳು, ಘನೀಕರಿಸಿರುವ ಮಂಜುಗಡ್ಡೆ ಅಧ್ಯಯನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್