ಅನಾರೋಗ್ಯದ ನೆಪವೊಡ್ಡಿ ಏರ್ ಇಂಡಿಯಾ ಸಂದರ್ಶನಕ್ಕೆ ತೆರಳಿದ ಇಂಡಿಗೋ ಉದ್ಯೋಗಿಗಳು
ಶನಿವಾರ ಶೇ.55ರಷ್ಟು ವಿಮಾನಯಾನ ಅಸ್ತವ್ಯಸ್ತ: ಕಾರಣ ಕೇಳಿ ಡಿಜಿಸಿಎಯಿಂದ ನೋಟಿಸ್
Team Udayavani, Jul 3, 2022, 7:30 PM IST
ನವದೆಹಲಿ:“ಅನಾರೋಗ್ಯದ ಕಾರಣದಿಂದ ನಾನು ಇವತ್ತು ಕರ್ತವ್ಯಕ್ಕೆ ಬರುವುದಿಲ್ಲ’ ಹೀಗೆಂದು ಇಂಡಿಗೋ ವಿಮಾನಯಾನ ಸಂಸ್ಥೆಯ ಪೈಲೆಟ್, ಸಿಬ್ಬಂದಿ ಶನಿವಾರ ರಜೆ ಹಾಕಿದ್ದರು.
ಹೀಗಾಗಿ, ಆ ಸಂಸ್ಥೆಯ ಶೇ.55ರಷ್ಟು ವಿಮಾನಯಾನ ಅಸ್ತವ್ಯಸ್ತಗೊಂಡಿತ್ತು. ಅಸಲು ವಿಚಾರ ಏನೆಂದರೆ, ಟಾಟಾ ಗ್ರೂಪ್ ಮಾಲೀಕತ್ವದ ಏರ್ ಇಂಡಿಯಾ ಎರಡನೇ ಹಂತದಲ್ಲಿ ವಿವಿಧ ಹಂತಗಳ ಹುದ್ದೆಗಳಿಗೆ ನೇಮಕ ಮಾಡುತ್ತಿದೆ.
ಹೀಗಾಗಿ, ಇಂಡಿಗೋ ವಿಮಾನ ಕಂಪನಿಯ ಸಿಬ್ಬಂದಿ ಸಂದರ್ಶನಕ್ಕೆ ತೆರಳಿದ್ದರು. ಹೀಗಾಗಿ, ಗೈರುಹಾಜರಾಗಿದ್ದವರು ಅನಾರೋಗ್ಯದ ಕಾರಣ ನೀಡಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.
ಇಂಡಿಗೋ ವಿಮಾನ ಸಂಸ್ಥೆ 1,600 ವಿಮಾನ ಸಂಚಾರವನ್ನು ನಡೆಸುತ್ತದೆ. ಸಿಬ್ಬಂದಿ ಸಂದರ್ಶನಕ್ಕೆ ತೆರಳಿದ್ದರಿಂದ ಈ ಸಮಸ್ಯೆ ಉಂಟಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮುಖ್ಯಸ್ಥ ಅರುಣ್ ಕುಮಾರ್ “ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಮತ್ತು ಸಂಸ್ಥೆಯ ಬಳಿ ವಿಮಾನಯಾನ ವ್ಯತ್ಯಯ ಉಂಟಾಗಿದ್ದಕ್ಕೆ ಇಂಡಿಗೋ ಬಳಿ ಕಾರಣ ಕೇಳಲಾಗಿದೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಾಣಿಗಳೂ ಈ ಆಹಾರ ತಿನ್ನಲ್ಲ..: ಮೆಸ್ ಫುಡ್ ಬಗ್ಗೆ ಆಕ್ರೋಶ ಹೊರಹಾಕಿದ ಉ.ಪ್ರದೇಶ ಪೊಲೀಸ್
ಮೀನು ಮಾರಾಟ ಮಾಡುತ್ತಿದ್ದ ಮಮತಾ ಆಪ್ತ ಮಂಡಲ್ ಇಂದು ಸಾವಿರ ಕೋಟಿ ಆಸ್ತಿ ಒಡೆಯ!
ರಾಜಕೀಯ ಪಕ್ಷಗಳ ಉಚಿತ ಕೊಡುಗೆ ದೇಶದ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿದೆ: ಸುಪ್ರೀಂಕೋರ್ಟ್
ಭಾರತದಲ್ಲಿ ಕಳೆದ 24ಗಂಟೆಯಲ್ಲಿ 16,299 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಇಳಿಕೆ
ದೇಶದ 14ನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧನ್ಕರ್ ಪ್ರಮಾಣವಚನ ಸ್ವೀಕಾರ