ಇಂಡಿಗೋ ಹೊಸ ವಿಮಾನದಲ್ಲಿ ತಾಂತ್ರಿಕ ದೋಷ; ಮರಳಿ ಫ್ರಾನ್ಸ್ಗೆ
Team Udayavani, Mar 16, 2018, 3:43 PM IST
ಹೊಸದಿಲ್ಲಿ : ಹೊಚ್ಚ ಹೊಸ ಪ್ಯಾಟ್ ಆ್ಯಂಡ್ ವಿಟ್ನೆ ಇಂಜಿನ್ ಹೊಂದಿರುವ ಇಂಡಿಗೋ ಏರ್ಲೈನ್ಸ್ನ ಎಟಿಆರ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಫ್ರಾನ್ಸ್ ತೌಲೋಸ್ನಿಂದ ಹೊರಟ ವಿಮಾನ ಟೇಕಾಫ್ ಆದ ಒಂದು ತಾಸಿನ ಒಳಗೆ ವಿಮಾನ ನಿಲ್ದಾಣಕ್ಕೆ ಮರಳಿದ ಘಟನೆ ನಡೆದಿದೆ.
ಇಂಜಿನ್ನಲ್ಲಿ ತೈಲ ಒತ್ತಡ ಅತೀ ಕಡಿಮೆ ಇದ್ದುದರ ಪರಿಣಾಮವಾಗಿ ಉಂಟಾದ ತಾಂತ್ರಿಕ ದೋಷ ಕಂಡು ಬಂತೆಂದು ಇಂಡಿಗೋ ಮೂಲ ತಿಳಿಸಿದೆ.
ವಿಶೇಷವೆಂದರೆ ಹೊಚ್ಚ ಹೊಸ ಇಂಜಿನ್ ಅಳವಡಿಸಲ್ಪಟ್ಟ ಇಂಡಿಗೋ ವಿಮಾನದ ಈ ಹಾರಾಟವು ತೌಲೋಸ್ ಮತ್ತು ಹೊಸದಿಲ್ಲಿಯ ನಡುವಿನ ಮೊತ್ತ ಮೊದಲ ಹಾರಾಟವಾಗಿತ್ತು. ತೌಲೋಸ್ನಿಂದ ಹೊಸದಿಲ್ಲಿಯಯಲ್ಲಿನ ಇಂಡಿಗೋ ಹಬ್ಗ ಬರಲಿದ್ದ ಈ ವಿಮಾನದಲ್ಲಿ ಹಣ ತೆತ್ತ ಪ್ರಯಾಣಿಕರು ಯಾರೂ ಇರಲಿಲ್ಲ.
ಈ ವಿದ್ಯಮಾನವನ್ನು ದೃಢೀಕರಿಸಿ ತನ್ನ ಅಧಿಕೃತ ಹೇಳಿಕೆ ಹೊರಡಿಸಿರುವ ಇಂಡಿಗೋ ವಿಮಾನ ಯಾನ ಸಂಸ್ಥೆಯು, “ತಾಂತ್ರಿಕ ಕಾರಣಗಳಿಗಾಗಿ ತೌಲೋಸ್ಗೆ ಮರಳಿರುವ ವಿಮಾನವನ್ನು ನಿಯಮಗಳ ಪ್ರಕಾರ ಮತ್ತೆ ಪುನಃ ಎಲ್ಲ ರೀತಿಯ ಪರೀಕ್ಷೆಗಳಿಗೆ ಒಳಪಡಿಸಿ ಸುರಕ್ಷೆತೆ ಮತು ಕ್ಷಮತೆಯು ಖಚಿತವಾದ ಅನಂತರವೇ ದಿಲ್ಲಿಗೆ ಡೆಲಿವರಿ ನೀಡಲಾಗುತ್ತದೆ’ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ