ಭಾರತ-ಅಮೆರಿಕ ನಿಕಟ ; ಮಹತ್ವದ 5 ಒಪ್ಪಂದಗಳಿಗೆ ಉಭಯ ದೇಶಗಳ ಸಹಿ

Team Udayavani, Oct 28, 2020, 6:00 AM IST

ಭಾರತ-ಅಮೆರಿಕ ನಿಕಟ ; ಮಹತ್ವದ 5 ಒಪ್ಪಂದಗಳಿಗೆ ಉಭಯ ದೇಶಗಳ ಸಹಿ

ಹೊಸದಿಲ್ಲಿ: ರಾಜನಾಥ್‌ ಸಿಂಗ್‌ ಮತ್ತು ಮೈಕ್‌ ಪೊಂಪ್ಯೋ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಹೊಸದಿಲ್ಲಿ: ನೆರೆಯ ಚೀನ “ಹೊರೆ’ಯಾಗಿರುವಂತೆಯೇ ಭಾರತ ಮತ್ತು ಅಮೆರಿಕ ಐದು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ. ಇದರಲ್ಲಿ ಬೇಸಿಕ್‌ ಎಕ್ಸ್‌ಚೇಂಜ್‌ ಆ್ಯಂಡ್‌ ಕೋ-ಆಪ ರೇಶನ್‌ ಅಗ್ರಿಮೆಂಟ್‌ (ಬಿಇಸಿಎ) ಕೂಡ ಸೇರಿದೆ.

ಚೀನವು ಭಾರತಕ್ಕಷ್ಟೇ ಅಲ್ಲ, ಅಮೆರಿಕಕ್ಕೂ ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿರುವುದು ಮಹತ್ವದ ಬೆಳವಣಿಗೆ. ಮೂರನೇ ಆವೃತ್ತಿಯ 2+2 ಮಾತುಕತೆಗಾಗಿ ಭಾರತಕ್ಕೆ ಬಂದಿರುವ ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪೊಂಪ್ಯೋ ಮತ್ತು ರಕ್ಷಣ ಸಚಿವ ಮಾರ್ಕ್‌ ಟಿ. ಇಸ್ಪಾರ್‌ ಹಾಗೂ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮತ್ತು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರ ಉಪಸ್ಥಿತಿಯಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ವಿಶೇಷವೆಂದರೆ ಈ ಒಪ್ಪಂದದಿಂದ ನೆರೆ ರಾಷ್ಟ್ರಗಳ ಮಿಲಿಟರಿ ಮತ್ತು ಮಿಲಿಟೆಂಟ್‌ ಗುರಿಗಳನ್ನು ನಿಖರವಾಗಿ ಪತ್ತೆಹಚ್ಚಬಹುದು.

ಬಿಇಸಿಎ ಲಾಭವೇನು?
ಬೇಸಿಕ್‌ ಎಕ್ಸ್‌ಚೇಂಜ್‌ ಆ್ಯಂಡ್‌ ಕೋ-ಆಪರೇಶನ್‌ ಅಗ್ರಿಮೆಂಟ್‌ನಿಂದಾಗಿ ಎರಡೂ ದೇಶಗಳಿಗೆ ಪ್ರಯೋಜನವಿದೆ. ಇದರಡಿ ಭಾರತ ಮತ್ತು ಅಮೆರಿಕ ನಕಾಶೆಗಳು, ವಾಣಿಜ್ಯ ಮತ್ತು ಇತರ ಅನ್‌ಕ್ಲಾಸಿಫೈಡ್‌ (ಗೌಪ್ಯ) ಚಿತ್ರಗಳು, ಜಿಯೋಡೇಟಿಕ್‌, ಜಿಯೋಫಿಸಿಕಲ್‌, ಜಿಯೋಮ್ಯಾಗ್ನೆಟಿಕ್‌ ಮತ್ತು ಗ್ರ್ಯಾವಿಟಿ ಡಾಟಾಗಳನ್ನೂ ಹಂಚಿಕೊಳ್ಳಲಿವೆ.

ನಿಖರವಾಗಲಿದೆ ಕ್ಷಿಪಣಿ ಗುರಿ!
ಚೀನ, ಪಾಕ್‌ ಭಾರತಕ್ಕೆ ತಲೆನೋವಾಗಿರುವ ಸಂದರ್ಭದಲ್ಲೇ ಒಪ್ಪಂದಕ್ಕೆ ಸಹಿ ಹಾಕಿರುವುದು ಮಹತ್ವ ಪಡೆದಿದೆ. ಭಾರತದ ಕ್ಷಿಪಣಿ ವ್ಯವಸ್ಥೆಗೆ ಅತ್ಯಂತ ನಿಖರವಾಗಿ ಟಾರ್ಗೆಟ್‌ ಗುರುತಿಸಬಲ್ಲ ವ್ಯವಸ್ಥೆಯೊಂದು ಬೇಕಾಗಿದೆ. ಅಮೆರಿಕದ ನಿಖರ ಸ್ಯಾಟಲೈಟ್‌ ದತ್ತಾಂಶಗಳು ಸಿಗಲಿರುವುದು ಕ್ಷಿಪಣಿ ವ್ಯವಸ್ಥೆಗೆ ಇನ್ನಷ್ಟು ಬಲ ತುಂಬಿದಂತೆ ಎಂದು ರಕ್ಷಣ ತಜ್ಞರು ಹೇಳಿದ್ದಾರೆ. ಪಾಕ್‌ ಗಡಿಯಲ್ಲಿ ಅಡಗಿರುವ ಉಗ್ರರ ನೆಲೆಗಳನ್ನೂ ಗುರುತಿಸಿ ನೇರವಾಗಿ ದಾಳಿ ಮಾಡಬಲ್ಲ ಶಕ್ತಿಯೂ ಹೆಚ್ಚಾಗಲಿದೆ.

ಬಿಇಸಿಎ ಮುಖ್ಯಾಂಶ
– ಅಮೆರಿಕದ ಅತ್ಯಂತ ನಿಖರವಾದ ಸ್ಯಾಟಲೈಟ್‌ ಮಾಹಿತಿ ಭಾರತಕ್ಕೆ ಲಭ್ಯ
– ಶತ್ರುಗಳ ಮಿಲಿಟರಿ ತಾಣಗಳ ಬಗ್ಗೆ ಕರಾರುವಾಕ್‌ ಮಾಹಿತಿ ಸಿಗಲಿದೆ
– ಕ್ಲಾಸಿಫೈಡ್‌ (ಗೌಪ್ಯ) ಮಾಹಿತಿಹಂಚಿಕೊಳ್ಳಲು ಅವಕಾಶ
– ಮೂರನೇ ದೇಶದೊಂದಿಗೆ ಈ ಮಾಹಿತಿ ಹಂಚಿಕೊಳ್ಳುವಂತಿಲ್ಲ

5 ಒಪ್ಪಂದಗಳಿಗೆ ಸಹಿ
1 ಬೇಸಿಕ್‌ ಎಕ್ಸ್‌ಚೇಂಜ್‌ ಆ್ಯಂಡ್‌ ಕೋ-ಆಪರೇಶನ್‌ ಅಗ್ರಿಮೆಂಟ್‌(ಬಿಇಸಿಎ)
2 ಭೂ ವಿಜ್ಞಾನಗಳ ಬಗೆಗಿನ ತಾಂತ್ರಿಕ ಸಹಕಾರ ಒಪ್ಪಂದ
3 ವಿತ್ತೀಯ ಸಹಕಾರದ ವ್ಯವಸ್ಥೆ ಮೇಲಿನ ನಿರ್ವಹಣ ವಿಸ್ತರಣೆ ಒಪ್ಪಂದ
4 ಅಂಚೆ ಸೇವೆಗಳ ಒಪ್ಪಂದ
5 ಕ್ಯಾನ್ಸರ್‌ ಸಂಶೋಧನೆ, ಆಯುರ್ವೇದ ಸಹಕಾರ

ಟಾಪ್ ನ್ಯೂಸ್

ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ ವಿರಾಟ್‌ ಕೊಹ್ಲಿ, ಪಂತ್‌, ಬುಮ್ರಾ

ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ ವಿರಾಟ್‌ ಕೊಹ್ಲಿ, ಪಂತ್‌, ಬುಮ್ರಾ

ನೌಕರಶಾಹಿಯ ದಕ್ಷತೆಗೆ ಸರಕಾರದ ಪ್ರೋತ್ಸಾಹ ಅಗತ್ಯ

ನೌಕರಶಾಹಿಯ ದಕ್ಷತೆಗೆ ಸರಕಾರದ ಪ್ರೋತ್ಸಾಹ ಅಗತ್ಯ

ಗುಪ್ತಚರ ದಳದ ಮುನ್ನೆಚ್ಚರಿಕೆಯ ನಿರ್ಲಕ್ಷ್ಯ  ಬೇಡ

ಗುಪ್ತಚರ ದಳದ ಮುನ್ನೆಚ್ಚರಿಕೆಯ ನಿರ್ಲಕ್ಷ್ಯ  ಬೇಡ

ಕಾಶೀ ಮಠಾಧೀಶರಿಂದ ನೂತನ ಬ್ರಹ್ಮರಥ ವೀಕ್ಷಣೆ

ಕಾಶೀ ಮಠಾಧೀಶರಿಂದ ನೂತನ ಬ್ರಹ್ಮರಥ ವೀಕ್ಷಣೆ

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ದ್ವಿತೀಯ ಸುತ್ತಿಗೆ ಏರಿದ ಸಿಂಧು

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ದ್ವಿತೀಯ ಸುತ್ತಿಗೆ ಏರಿದ ಸಿಂಧು

ಪರ್ಯಾಯ ಕಳೆದರೂ ಜಾತ್ರೆಯ ಕಳೆ: ಶ್ರೀಕೃಷ್ಣನ ದರ್ಶನಕ್ಕೆ ಭಕ್ತ ಸಮೂಹ

ಪರ್ಯಾಯ ಕಳೆದರೂ ಜಾತ್ರೆಯ ಕಳೆ: ಶ್ರೀಕೃಷ್ಣನ ದರ್ಶನಕ್ಕೆ ಭಕ್ತ ಸಮೂಹ

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌: ಇಂಗ್ಲೆಂಡ್‌ಗೆ ಸತತ ಎರಡನೇ ಗೆಲುವು

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌: ಇಂಗ್ಲೆಂಡ್‌ಗೆ ಸತತ ಎರಡನೇ ಗೆಲುವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಪೆಕ್ಟ್ರಂ ಬಾಕಿ 30,791 ಕೋಟಿ ಕೊಟ್ಟ ರಿಲಯನ್ಸ್‌ ಜಿಯೋ

ಸ್ಪೆಕ್ಟ್ರಂ ಬಾಕಿ 30,791 ಕೋಟಿ ಕೊಟ್ಟ ರಿಲಯನ್ಸ್‌ ಜಿಯೋ

ಹೆಚ್ಚಿನ ಅವಧಿಗೆ ಶಾಸಕರ ಅಮಾನತು ಅಸಾಂವಿಧಾನಿಕ: ಸುಪ್ರೀಂಕೋರ್ಟ್‌

ಹೆಚ್ಚಿನ ಅವಧಿಗೆ ಶಾಸಕರ ಅಮಾನತು ಅಸಾಂವಿಧಾನಿಕ: ಸುಪ್ರೀಂಕೋರ್ಟ್‌

1-asewewewe

ಗೋವಾ ಮಹಾಘಟಬಂಧನ : ಮೈತ್ರಿ ಘೋಷಿಸಿದ ಶಿವಸೇನೆ ಮತ್ತು ಎನ್‍ಸಿಪಿ; ಕಾಂಗ್ರೆಸ್ ಇಲ್ಲ

1-sdsad

ಗೋವಾ ಸಿಎಂ ಅಭ್ಯರ್ಥಿ: ಭಂಡಾರಿ ಸಮುದಾಯಯಕ್ಕೆ ಮಣೆ ಹಾಕಿದ ಆಪ್

1-adasd

ಅಪರ್ಣಾ ಯಾದವ್ ಬಿಜೆಪಿ ಸೇರ್ಪಡೆ: ಸಚಿವೆ ಶೋಭಾ ಮಹತ್ವದ ಪಾತ್ರ

MUST WATCH

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

ಹೊಸ ಸೇರ್ಪಡೆ

ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ ವಿರಾಟ್‌ ಕೊಹ್ಲಿ, ಪಂತ್‌, ಬುಮ್ರಾ

ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ ವಿರಾಟ್‌ ಕೊಹ್ಲಿ, ಪಂತ್‌, ಬುಮ್ರಾ

ನೌಕರಶಾಹಿಯ ದಕ್ಷತೆಗೆ ಸರಕಾರದ ಪ್ರೋತ್ಸಾಹ ಅಗತ್ಯ

ನೌಕರಶಾಹಿಯ ದಕ್ಷತೆಗೆ ಸರಕಾರದ ಪ್ರೋತ್ಸಾಹ ಅಗತ್ಯ

ಗುಪ್ತಚರ ದಳದ ಮುನ್ನೆಚ್ಚರಿಕೆಯ ನಿರ್ಲಕ್ಷ್ಯ  ಬೇಡ

ಗುಪ್ತಚರ ದಳದ ಮುನ್ನೆಚ್ಚರಿಕೆಯ ನಿರ್ಲಕ್ಷ್ಯ  ಬೇಡ

ಕಾಶೀ ಮಠಾಧೀಶರಿಂದ ನೂತನ ಬ್ರಹ್ಮರಥ ವೀಕ್ಷಣೆ

ಕಾಶೀ ಮಠಾಧೀಶರಿಂದ ನೂತನ ಬ್ರಹ್ಮರಥ ವೀಕ್ಷಣೆ

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ದ್ವಿತೀಯ ಸುತ್ತಿಗೆ ಏರಿದ ಸಿಂಧು

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ದ್ವಿತೀಯ ಸುತ್ತಿಗೆ ಏರಿದ ಸಿಂಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.