ಜೈಲು ಕೋಣೆಯಲ್ಲಿ 400ಲೀ. ನೀರು ತುಂಬಿಟ್ಟ ಇಂದ್ರಾಣಿ

Team Udayavani, Nov 19, 2019, 10:38 PM IST

ಮುಂಬಯಿ: ಬೈಕುಲ್ಲಾ ಜೈಲಿನಲ್ಲಿರುವ ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ತಮ್ಮ ಜೈಲು ಕೊಠಡಿಯಲ್ಲಿ ಬರೋಬ್ಬರಿ 400 ಲೀಟರ್‌ ನೀರು ಸಂಗ್ರಹಿಸಿ ಇಟ್ಟಿರುವುದು ಜೈಲಧಿಕಾರಿಗಳ ಅಚ್ಚರಿಗೆ ಕಾರಣವಾಗಿದೆ. ಪ್ರತಿ ವಾರ ಇಂದ್ರಾಣಿ 20 ಲೀಟರ್‌ನ ನೀರಿನ ಬಾಟಲಿಗಳನ್ನು ಜೈಲಿನ ಕ್ಯಾಂಟೀನಿನಲ್ಲಿ ಕೊಳ್ಳುತ್ತಿದ್ದಾರೆ. ಈವರೆಗೂ ಸುಮಾರು 4,000ರೂ.ಗಳನ್ನು ನೀರು ಖರೀದಿಸುವುದಕ್ಕೆಂದೇ ವ್ಯಯಿಸಿದ್ದಾರೆ.

ಏಕೆ ನೀರು ಸಂಗ್ರಹಿಸುತ್ತಿದ್ದಾರೆ ಎಂದು ಪ್ರಶ್ನಿಸಿದರೆ ‘ನನಗೆ ಅವುಗಳ ಅಗತ್ಯವಿದೆ’ ಎಂದಷ್ಟೇ ಉತ್ತರಿಸುತ್ತಾರೆ ಎಂದಿದ್ದಾರೆ. ಜೈಲಧಿಕಾರಿ ಗಳು. ಕೆಲ ದಿನಗಳ ಹಿಂದಷ್ಟೇ ಇಂದ್ರಾಣಿ ಪರ ವಕೀಲರು, ಇಂದ್ರಾ ಣಿಯ ಮಾನಸಿಕ ಆರೋಗ್ಯ ಕ್ಷೀಣಿಸುತ್ತಿದೆ ಎಂದಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ