ಮುಂಬಯಿಗೆ ಮತ್ತಷ್ಟು ಕಳಂಕ?

ಸೋಂಕು: ಜಗತ್ತಿನ ನಗರಗಳ ಮೀರಿಸುವ ಸಾಧ್ಯತೆಯ ಬಗ್ಗೆ ಆತಂಕ

Team Udayavani, May 26, 2020, 7:30 AM IST

ಮುಂಬಯಿಗೆ ಮತ್ತಷ್ಟು ಕಳಂಕ?

ಮುಂಬಯಿಯ ಮಹಾಲಕ್ಷ್ಮೀ ಕೇಂದ್ರದಲ್ಲಿ ಸಿದ್ಧಪಡಿಸಲಾಗುತ್ತಿರುವ ಕ್ವಾರಂಟೈನ್‌ ಕೇಂದ್ರದಲ್ಲಿ ಅಂತಿಮ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿರುವ ಸಿಬಂದಿ.

ಹೊಸದಿಲ್ಲಿ: ಭಾರತದ ವಾಣಿಜ್ಯ ನಗರಿ ಮುಂಬಯಿ ವಿಶ್ವದಲ್ಲಿ ಹೊಸ ಕೋವಿಡ್ ಹಾಟ್‌ಸ್ಪಾಟ್‌ ಆಗಲಿದೆಯೇ ಎಂಬ ಅನುಮಾನ ಈಗ ದಟ್ಟವಾಗಿ ಆವರಿಸಿದೆ. ದಿನಂಪ್ರತಿ ಅಲ್ಲಿ ಸೋಂಕಿತರ ಲೆಕ್ಕ ಗಣನೀಯವಾಗಿ ಹೆಚ್ಚುತ್ತಾ ಹೋಗುತ್ತಿದೆ. ಕೆಲ ದಿನಗಳ ಹಿಂದಷ್ಟೇ, ಪ್ರತಿದಿನಕ್ಕೆ ದಾಖಲಾಗುವ ಪ್ರಕರಣಗಳ ಸಂಖ್ಯೆ ಹೆಚ್ಚಾದದ್ದು ಮಾಸ್ಕೋದಲ್ಲಿ. ಆದರೆ, ಆ ಕುಖ್ಯಾತಿ ಮುಂಬಯಿಗೆ ಬರುವ ಸಾಧ್ಯತೆಗಳಿವೆ ಎನ್ನುತ್ತಾರೆ ತಜ್ಞರು.

ಭಾರತದಲ್ಲಿ ಈವರೆಗೆ ದಾಖಲಾಗಿರುವ ಪ್ರಕರಣಗಳಲ್ಲಿ ಐದನೇ ಒಂದರಷ್ಟು ಪ್ರಕರಣಗಳಿರುವುದು ಮುಂಬಯಿನಲ್ಲಿ. ಆ ನಗರದ ಜನಸಂಖ್ಯೆಯಲ್ಲಿ ಶೇ. 0.22ರಷ್ಟು ಮಂದಿ ಈಗಾಗಲೇ ಸೋಂಕಿಗೆ ತುತ್ತಾಗಿದ್ದಾರೆ. ಹಾಗಾಗಿ, ಮುಂಬಯಿ ಈಗಾಗಲೇ ದೇಶದ ಹಾಟ್‌ಸ್ಪಾಟ್‌ ಎಂದು ಗುರುತಿಸಲ್ಪಟ್ಟಿದೆ. ಜೊತೆಗೆ, ದಿನದಿನಕ್ಕೆ ಅಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ವಿಶ್ವದ ಬೇರ್ಯಾವುದೇ ನಗರಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳಿಗಿಂತ ಹೆಚ್ಚಾಗಿದೆ.

ಮಾಸ್ಕೋಗಿಂತ ಹೆಚ್ಚು: ಈ ತಿಂಗಳ ಆರಂಭದಿಂದ ಇಲ್ಲಿಯವರೆಗೆ ಮುಂಬಯಿಯಲ್ಲಿ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ತಿಂಗಳ ಮಧ್ಯಭಾಗದಲ್ಲಿ ಅಲ್ಲಿನ ಪ್ರಕರಣಗಳು ನ್ಯೂಯಾರ್ಕ್‌ ನಗರವನ್ನೇ ಮೀರಿಸಿತ್ತು. ನ್ಯೂಯಾರ್ಕ್‌ ನಗರದ ಜನಸಂಖ್ಯೆ ಮುಂಬಯಿ ಜನಸಂಖ್ಯೆಯ ಮೂರು ಪಟ್ಟು ಹೆಚ್ಚಾಗಿದೆ.

ಇನ್ನು, ಬ್ರೆಜಿಲ್‌ನ ಸಾವೊ ಪೌಲೋ, ರಷ್ಯಾದ ಮಾಸ್ಕೋ ನಗರಗಳು ಮುಂಬಯಿಯ ಜನಸಂಖ್ಯೆಗೆ (1.2 ಕೋಟಿ) ಸಮವಾಗಿವೆ.  ಮಾಸ್ಕೋ, ಮುಂಬಯಿ, ಸಾವೋಪೌಲೋ ನಗರಗಳು ಕೋವಿಡ್ ಪ್ರಕರಣಗಳಲ್ಲಿ ಸ್ಪರ್ಧೆಗಿಳಿದಿದ್ದವು. ಈಗ, ಆ ಸ್ಪರ್ಧೆ ಮುಂಬಯಿ ಹಾಗೂ ಸಾವೋ ಪೌಲೋ ನಡುವೆ ಮಾತ್ರ ಇದೆ.

ಸಾವೋ ಪೌಲೋ ಜತೆಗೆ ಸ್ಪರ್ಧೆ: ಕಳೆದ 7 ದಿನಗಳಲ್ಲಿ ಸಾವೋ ಪೌಲೋದಲ್ಲಿ ಕೊರೊನಾ ಸೋಂಕಿಗೆ ಒಳಗಾದವರ ಸಂಖ್ಯೆ 1,867 ಇದ್ದು, ಅಲ್ಲಿ ಮರಣ ಹೊಂದಿದವರ ಸಂಖ್ಯೆ 509 ಇತ್ತು, ಮುಂಬಯಿಯಲ್ಲಿ ಕಳೆದ 7 ದಿನದ ಅವಧಿಯಲ್ಲಿ 900ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 250ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

ವೈರಾಣು ಪರೀಕ್ಷೆಗೆ ಹೊಸ ಬಗೆಯ ವ್ಯವಸ್ಥೆ
ವೈರಾಣುಗಳನ್ನು ಕರಾರುವಾಕ್‌ ಆಗಿ ಪರೀಕ್ಷಿಸುವ ಹೊಸತೊಂದು ಇಂಟಲಿಜೆನ್ಸ್‌ ಟೆಸ್ಟಿಂಗ್‌ ಎಂಬ ಹೊಸ ರೀತಿಯ ಪರೀಕ್ಷಾ ವ್ಯವಸ್ಥೆಯೊಂದನ್ನು ರೂಪುಗೊಳಿಸಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ತಿಳಿಸಿದೆ. ದೇಶದಲ್ಲಿ ವೈರಾಣುಗಳ ಪರೀಕ್ಷೆಗಾಗಿ ಒಟ್ಟು 610 ಪ್ರಯೋಗಾಲಯಗಳು ಇವೆ. ಅವುಗಳಲ್ಲಿ 432 ಪ್ರಯೋಗಾಲಯಗಳು ಸರ್ಕಾರದ ಸ್ವಾಮ್ಯದಲ್ಲಿದ್ದು, 178 ಪ್ರಯೋಗಾಲಯಗಳು ಖಾಸಗಿ ಸಂಸ್ಥೆಗಳದ್ದಾಗಿವೆ. ಇವುಗಳಲ್ಲಿ ದಿನವೊಂದಕ್ಕೆ 1.1 ಲಕ್ಷ ಜನರನ್ನು ಪರೀಕ್ಷೆಗೊಳಪಡಿಸಲಾಗುತ್ತಿತ್ತು. ಈಗ, ಕೋವಿಡ್ ಸೋಂಕು ಕಾಣಿಸಿಕೊಂಡ ಮೇಲೆ ಇವುಗಳ ಸಾಮರ್ಥಯವನ್ನು ಹೆಚ್ಚಿಸಲಾಗಿದ್ದು, ದಿನ ವೊಂದಕ್ಕೆ 1.4 ಲಕ್ಷ ಜನರನ್ನು ಪರೀಕ್ಷೆಗೊಳಿಸಲಾಗುತ್ತಿದೆ. ಹೊಸ ವ್ಯವಸ್ಥೆಯಡಿ ದಿನವೊಂದಕ್ಕೆ 2 ಲಕ್ಷ ಜನರನ್ನು ತಪಾಸಣೆಗೊಳಪಡಿಸಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಪಿಪಿಇ, ಮಾಸ್ಕ್ ತಯಾರಿಕೆಗೆ ವೇಗ
ದೇಶದಲ್ಲಿ ಪಿಪಿಇ (ವೈಯಕ್ತಿಕ ಸುರಕ್ಷಾ ಉಡುಗೆ) ಮತ್ತು ಎನ್‌95 ಮಾಸ್ಕ್ ತಯಾರಿಕೆ ಪ್ರಕ್ರಿಯೆ ವೇಗ ಪಡೆದಿದೆ. ಪ್ರತಿ ದಿನ ತಲಾ 3 ಲಕ್ಷ ಪಿಪಿಇ ಮತ್ತು ಮಾಸ್ಕ್ಗಳನ್ನು ತಯಾರಿಸಲಾಗುತ್ತಿದೆ. ಅಲ್ಲದೆ, ಕಠಿಣ ಶಿಷ್ಟಾಚಾರಗಳ ಮೂಲಕ ಅವುಗಳ ಗುಣಮಟ್ಟವನ್ನೂ ದೃಢಪಡಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಪಿಪಿಇ ಗುಣಮಟ್ಟ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳಿಗೆ ಸಂಬಂಧಿಸಿದಂತೆ ಈ ಸ್ಪಷ್ಟನೆ ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ವ್ಯಾಪ್ತಿಯಲ್ಲಿ ಆಸ್ಪತ್ರೆಗಳು ಹಾಗೂ ಆರೋಗ್ಯಸೇವಾ ಸಂಸ್ಥೆಗಳಿಗೆ ಪಿಪಿಇಗಳನ್ನು ಖರೀದಿಸುವ ಸಂಸ್ಥೆ ಎಚ್‌ಎಲ್ ಎಲ್‌ ಲೈಫ್ ಕೇರ್‌ ಜವಳಿ ಸಚಿವಾಲಯವು ಸೂಚಿಸಿರುವ 8 ಲ್ಯಾಬ್‌ ಗಳ ಪೈಕಿ ಒಂದರಿಂದ ಪರೀಕ್ಷೆಗೆ ಒಳಪಡಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಅದರ ಒಪ್ಪಿಗೆ ದೊರೆತ ಬಳಿಕವೇ ಉತ್ಪಾದಕರು ಅಥವಾ ಪೂರೈಕೆದಾರರಿಂದ ಪಿಪಿಇಗಳನ್ನು ಪಡೆಯಲಾಗುತ್ತದೆ. ತದನಂತರವೂ ಸಚಿವಾಲಯದ ತಾಂತ್ರಿಕ ಸಮಿತಿಯು ಉತ್ಪನ್ನದ ಗುಣಮಟ್ಟದ ಪರೀಕ್ಷೆ ನಡೆಸುತ್ತದೆ ಎಂದು ಸರಕಾರ ತಿಳಿಸಿದೆ. ಯಾವುದಾದರೂ ಲೋಪಗಳು ಕಂಡುಬಂದರೆ ಕೂಡಲೇ ಆ ಕಂಪನಿಯನ್ನು ಅನರ್ಹ ಎಂದು ಘೋಷಿಸಲಾಗುತ್ತದೆ ಎಂದೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜತೆಗೆ, ಈವರೆಗೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸುಮಾರು 111 ಲಕ್ಷ ಎನ್‌ 95 ಮಾಸ್ಕ್ ಗಳು ಮತ್ತು 74.48 ಲಕ್ಷ ಪಿಪಿಇಗಳನ್ನು ಪೂರೈಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

rain

IMD; ದೇಶದಲ್ಲಿ ಈ ಬಾರಿ ಮುಂಗಾರಿನಲ್ಲಿ ಹೆಚ್ಚು ಮಳೆ: ಹವಾಮಾನ ಇಲಾಖೆ

amarnath

150 Rs.ನೀಡಿ ಪವಿತ್ರ ಅಮರನಾಥ ಯಾತ್ರೆಗೆ ನೋಂದಣಿ ಮಾಡಿಸಿ!

Ram Ayodhya

Ayodhya ರಾಮನವಮಿ ಹಿನ್ನೆಲೆ: ರಾಮಮಂದಿರದಲ್ಲಿ ವಿಐಪಿ ದರ್ಶನ ರದ್ದು

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.