ಸರ್ಜಿಕಲ್ ದಾಳಿಗೆ ನಿಜವಾದ ಕಾರಣ ಗೊತ್ತಾ? ಸತ್ಯ ಬಿಚ್ಚಿಟ್ಟ ಪರ್ರೀಕರ್
Team Udayavani, Jul 1, 2017, 2:08 PM IST
ಪಣಜಿ:ದೇಶ, ವಿದೇಶದಲ್ಲಿ ಸುದ್ದಿಯಾಗಿದ್ದ ಸರ್ಜಿಕಲ್ ದಾಳಿಗೆ ನಿಜವಾದ ಕಾರಣ ಏನು ಎಂಬುದನ್ನು ಕೇಂದ್ರದ ಮಾಜಿ ರಕ್ಷಣಾ ಸಚಿವ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಶುಕ್ರವಾರ ಬಯಲುಗೊಳಿಸಿದ್ದಾರೆ. ಪಾಕಿಸ್ತಾನ ಆಕ್ರಮಿತ (ಪಿಒಕೆ) ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿಗೆ ಟಿವಿ ಆಂಕರ್ ಪ್ರಶ್ನೆ ಕೇಳಿ ಅವಮಾನಿಸಿದ್ದೇ ಕಾರಣ ಎಂದು ತಿಳಿಸಿದ್ದಾರೆ.
2015ರಲ್ಲಿ ಮ್ಯಾನ್ಮಾರ್ ಗಡಿಯೊಳಗೆ ನುಗ್ಗಿ ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿ ಬಗ್ಗೆ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಟಿವಿ ಆಂಕರ್ ಗೆ ಮಾಹಿತಿ ನೀಡುತ್ತಿದ್ದ ವೇಳೆ, ಮ್ಯಾನ್ಮಾರ್ ಗಡಿಯೊಳಗೆ ತೋರಿದ ಧೈರ್ಯ ನೆರೆಯ ದೇಶದ ಮೇಲೆ ತೋರಲು ಸಾಧ್ಯವೆ ಎಂಬ ಪ್ರಶ್ನೆ ಕೇಳಿ ಅವಮಾನಿಸಿದ್ದರು.
ಹಾಗಾಗಿ ಟಿವಿ ಆಂಕರ್ ಆ ಪ್ರಶ್ನೆ ಕೇಳಿದ್ದ ದಿನವೇ ಪಿಒಕೆ ಮೇಲೆ ಸರ್ಜಿಕಲ್ ದಾಳಿ ನಡೆಸಲು ನಿರ್ಧರಿಸಿದ್ದೆ ಎಂದು ಪರ್ರೀಕರ್ ಪಣಜಿಯಲ್ಲಿ ಕೈಗಾರಿಕೋದ್ಯಮಿಗಳ ಸಭೆಗೂ ಮುನ್ನ ಮಾತನಾಡುತ್ತ ಈ ವಿಷಯವನ್ನು ಬಿಚ್ಚಿಟ್ಟಿದ್ದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗೆ ಸರ್ಜಿಕಲ್ ದಾಳಿ ನಡೆಸಲು 15 ತಿಂಗಳ ಮುಂಚಿತವಾಗಿಯೇ ಸಿದ್ಧತೆ ನಡೆಸಲಾಗಿತ್ತು ಎಂದು ಪರ್ರೀಕರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಭಟ್ ಹತ್ಯೆ ಖಂಡಿಸಿ ಮುಂದುವರೆದ ಕಾಶ್ಮೀರಿ ಪಂಡಿತರ ಪ್ರತಿಭಟನೆ
‘ವಾಟ್ಸಾಪ್’ ಮೂಲಕ ಪ್ರಕರಣ ಇತ್ಯರ್ಥ ಗೊಳಿಸಿದ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ
ಗಂಗಾ ನದಿಯಲ್ಲಿ ತೇಲುತ್ತಿದ್ದ ಶವಗಳ ಸಂಖ್ಯೆ ತಿಳಿಸಲು ಯುಪಿ, ಬಿಹಾರಕ್ಕೆ ಎನ್ಜಿಟಿ ಸೂಚನೆ
ದೇಶದಲ್ಲಿನ ಕೋಮು ಘರ್ಷಣೆಗಳ ಬಗ್ಗೆ ಪ್ರಧಾನಿ ಮೌನವೇಕೆ?: ಅಶೋಕ್ ಗೆಹ್ಲೋಟ್ ಪ್ರಶ್ನೆ
‘ದುಃಸ್ವಪ್ನ’ ಬಿದ್ದ ಮೇಲೆ ಕದ್ದ ದೇವಸ್ಥಾನದ 14 ವಿಗ್ರಹಗಳನ್ನು ಹಿಂದಿರುಗಿಸಿದ ಕಳ್ಳರು