ಏರ್ಪೋರ್ಟಲ್ಲಿ ಸಂಶಯಾಸ್ಪದ ವಸ್ತು: ತನಿಖೆ
Team Udayavani, Sep 22, 2017, 8:00 AM IST
ಹೊಸದಿಲ್ಲಿ: ಮಂಗಳೂರು ಮತ್ತು ದಿಲ್ಲಿ ಏರ್ಪೋರ್ಟಲ್ಲಿ ಮೊಬೈಲ್ ಪವರ್ ಬ್ಯಾಂಕ್ನಲ್ಲಿ ಸ್ಫೋಟಕಗಳು ಪತ್ತೆಯಾಗಿವೆ ಎಂಬ ಬೆಳವಣಿಗೆ ಬಗ್ಗೆ ಹೆಚ್ಚಿನ ತನಿಖೆಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮುಂದಾಗಿದೆ. ಅದಕ್ಕಾಗಿ ಎನ್ಐಎ ಮತ್ತು ಇಂಟೆಲಿಜೆನ್ಸ್ ಬ್ಯೂರೋ ಪ್ರಕರಣ ಕೈಗೆತ್ತಿಕೊಳ್ಳಬೇಕೆಂದು ಎರಡೂ ತನಿಖಾ ಸಂಸ್ಥೆಗಳಿಗೆ ಪತ್ರ ಬರೆದಿದೆ.