ಐಎನ್‌ಎಕ್ಸ್‌ ಪ್ರಕರಣ: ಇಂದು ಚಿದಂಬರಂ ತೀರ್ಪು ಪ್ರಕಟ

Team Udayavani, Sep 13, 2019, 12:15 AM IST

ನವದೆಹಲಿ: ಐಎನ್‌ಎಕ್ಸ್‌ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ಶರಣಾಗುವ ವಿಚಾರಕ್ಕೆ ಸಂಬಂಧಿಸಿದ ತೀರ್ಪನ್ನು ನವದೆಹಲಿಯ ವಿಶೇಷ ಕೋರ್ಟ್‌ ಶುಕ್ರವಾರ ಪ್ರಕಟಿಸಲಿದೆ. ಸದ್ಯ ಅವರು ತಿಹಾರ್‌ ಜೈಲಿನಲ್ಲಿದ್ದಾರೆ. ಇ.ಡಿ. ಪರವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಮಾಜಿ ಸಚಿವರ ಬಂಧನ ಅಗತ್ಯವಾಗಿದೆ ಎಂದು ಅರಿಕೆ ಮಾಡಿದರು. ಸದ್ಯ ಅವರು ಸಿಬಿಐ ದಾಖಲಿಸಿದ ಕೇಸಿನಲ್ಲಿ ನ್ಯಾಯಾಂಗ ವಶದಲ್ಲಿದ್ದಾರೆ. ಹೀಗಾಗಿ ಅವರು ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇಲ್ಲವೆಂದರು.

ಚಿದು ಪರ ವಾದಿಸಿದ ಕಪಿಲ್‌ ಸಿಬಲ್‌ “ನನ್ನ ಕಕ್ಷಿದಾರ ನರಳುವಂತೆ ಮಾಡಬೇಕು ಎನ್ನುವುದೇ ಜಾರಿ ನಿರ್ದೇಶನಾಲಯದ ದುರುದ್ದೇಶ’ ಎಂದು ದೂರಿದ್ದಾರೆ.

ಮನೆ ಊಟಕ್ಕೆ ನಕಾರ:
ಇದೇ ವೇಳೆ, ಸಿಬಲ್‌ ಜೈಲಿನಲ್ಲಿ ಚಿದುಗೆ ಮನೆಯೂಟ ಒದಗಿಸಲು ಅನುಮತಿ ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶ “ಜೈಲಿನಲ್ಲಿ ಎಲ್ಲರಿಗೆ ನೀಡುವ ಆಹಾರವನ್ನೇ ನಿಮಗೂ ನೀಡಲಾಗುತ್ತದೆ’ ಎಂದರು. ಅದಕ್ಕೆ ವಕೀಲ ಕಪಿಲ್‌ ಸಿಬಲ್‌ “ಅವರಿಗೆ 74 ವರ್ಷ ವಯಸ್ಸಾಗಿದೆ’ ಎಂದರು. ಅದಕ್ಕೆ ಉತ್ತರಿಸಿದ ಸಾಲಿಸಿಟರ್‌ ಜನರಲ್‌ “ಐಎನ್‌ಎಲ್‌ಡಿ ನಾಯಕ ಓಂ ಪ್ರಕಾಶ್‌ ಚೌಟಾಲಾಗೆ ಕೂಡ ವಯಸ್ಸಾಗಿದೆ. ಅವರೂ ಕೈದಿಯೇ. ಯಾರಿಗೂ ತಾರತಮ್ಯ ಮಾಡಲಾಗದು’ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಜಗಳೂರು: ಸಾರ್ವಜನಿಕ ಉದ್ಯಾನವನ ಮತ್ತು ರಸ್ತೆ ಮಧ್ಯೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ತೆರವು ಕಾರ್ಯಾಚರಣೆಯನ್ನು ಭಾನುವಾರ...

  • ಕುಷ್ಟಗಿ: ಮಾರುಕಟ್ಟೆಯಲ್ಲಿ ವಿವಿಧ ಕಂಪನಿ, ಬ್ರ್ಯಾಂಡ್‌ಗಳ ಪೊರಕೆಗಳ ಅಬ್ಬರಕ್ಕೆ ಈಚಲು ಗರಿಯಿಂದ ತಯಾರಿಸಿದ ಈಚಲು, ಹುಲ್ಲಿನ ಪೊರಕೆ ಬೇಡಿಕೆ ಕ್ರಮೇಣ ಮಂಕಾಗುತ್ತಿದೆ....

  • ಶಹಾಪುರ: ಶಾಲಾ ದಿನಗಳಲ್ಲಿ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ರಾಷ್ಟ್ರ ಪ್ರಜ್ಞೆ ಅರಿವು ಮಾಡಿಕೊಡುವ ಕರ್ನಾಟಕ ಪೊಲೀಸ್‌ ಇಲಾಖೆ ಯೋಜನೆಯೇ ಎಸ್‌ಪಿಸಿ ತುಂಬಾ ಉಪಯುಕ್ತವಾದದು...

  • ಕಲಬುರಗಿ: ನಮಗೆ ಪೆಟ್ಟು ಬಿದ್ದ ತಕ್ಷಣ "ಅಮ್ಮ' ಎನ್ನುತ್ತೇವೆ ಹೊರತು, "ಅಂಟಿ' ಅನ್ನಲ್ಲ. ಅಮ್ಮ ಎನ್ನುವ ಪದ ಹೃದಯದಿಂದ ಬರುವಂತದ್ದು, ಹಾಗೆ ಕನ್ನಡ ಭಾಷೆ ಕಣ- ಕಣದಲ್ಲಿ...

  • ಹನುಮಸಾಗರ: ಕೊಪ್ಪಳ ಜಿಲ್ಲೆಯ ಅತಿ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹನುಮಸಾಗರ ಗ್ರಾಮದ ಪ್ರವಾಸಿ ಮಂದಿರ(ಐಬಿ) ಕುಡಿಯುವ ನೀರು ಹಾಗೂ ಸಿಬ್ಬಂದಿ...