ಪಿ.ಚಿದಂಬರಂ ಕಸ್ಟಡಿ ವಿಸ್ತರಣೆ

Team Udayavani, Nov 14, 2019, 1:27 AM IST

ಹೊಸದಿಲ್ಲಿ: ಮಾಜಿ ಸಚಿವ ಪಿ.ಚಿದಂಬರಂ ಅವರ ನ್ಯಾಯಾಂಗ ಬಂಧನವನ್ನು ಹೊಸದಿಲ್ಲಿಯ ಸ್ಥಳೀಯ ಕೋರ್ಟ್‌ ನ.27ರ ವರೆಗೆ ವಿಸ್ತರಿಸಿದೆ. ಐಎನ್‌ಎಕ್ಸ್‌ ಮಾಧ್ಯಮ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬಂಧಿಸಿತ್ತು.

ಜಿಲ್ಲಾ ಕೋರ್ಟ್‌ಗಳ ವಕೀಲರು ಮುಷ್ಕರ ನಿರತವಾಗಿರುವುದರಿಂದ ಚಿದು ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಸಲಾಗಿತ್ತು. ಕಾಂಗ್ರೆಸ್‌ನ ಹಿರಿಯ ನಾಯಕನನ್ನು ಆ.21ರಂದು ಬಂಧಿಸಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ