Covid-19 ಅಟ್ಟಹಾಸ: ಭಾರತದ ಸಂಖ್ಯೆ 223ಕ್ಕೆ ಏರಿಕೆ, ಇರಾನ್ ನಲ್ಲಿ ಸಾವಿನ ಸಂಖ್ಯೆ 1,433!
ಕೋವಿಡ್ 19 ಸೋಂಕು ಮಾರಿ ಬಗ್ಗೆ ಒಂದು ವೇಳೆ ಯಾವುದೇ ಪ್ರಶ್ನೆಗಳಿದ್ದರೆ ಜನರು 1075 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ
Team Udayavani, Mar 20, 2020, 6:40 PM IST
Representative Image
ನವದೆಹಲಿ/ಇರಾನ್: ಕೋವಿಡ್-19 ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9ಗಂಟೆವರೆಗೆ ಮನೆಯಿಂದ ಹೊರ ಬರದಿಂದ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ಏತನ್ಮಧ್ಯೆ ದೇಶದಲ್ಲಿ ಕೋವಿಡ್-19 ಪೀಡಿತರ ಸಂಖ್ಯೆ 223ಕ್ಕೆ ಏರಿದೆ. ಇದರಲ್ಲಿ ವಿದೇಶಿ ಪ್ರಜೆಗಳ ಸಂಖ್ಯೆ 32 ಎಂದು ವರದಿ ತಿಳಿಸಿದೆ.
ವಾರದ ಹಿಂದಷ್ಟೇ ಭಾರತದಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿತ್ತು. ಈವರೆಗೆ ಕೋವಿಡ್ 19 ಸೋಂಕಿಗೆ ಸಾವಿಗೀಡಾದವರ ಸಂಖ್ಯೆ 5ಕ್ಕೆ ಏರಿದೆ. ಈ ನಿಟ್ಟಿನಲ್ಲಿ ಭಾನುವಾರದ ಜನತಾ ಕರ್ಫ್ಯೂಗೆ ಕೈಜೋಡಿಸುವಂತೆ ಆರೋಗ್ಯ ಸಚಿವಾಲಯ ಮನವಿ ಮಾಡಿಕೊಂಡಿದೆ.
ಕೋವಿಡ್ 19 ಸೋಂಕು ಮಾರಿ ಬಗ್ಗೆ ಒಂದು ವೇಳೆ ಯಾವುದೇ ಪ್ರಶ್ನೆಗಳಿದ್ದರೆ ಜನರು 1075 ಟೋಲ್ ಫ್ರೀ ನಂಬರ್ ಗೆ ಕರೆ ಮಾಡುವಂತೆ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. ವಿಶ್ವಾದ್ಯಂತ ಕೋವಿಡ್ 19ಗೆ ಸಾವನ್ನಪ್ಪಿದವರ ಸಂಖ್ಯೆ 9,800ಕ್ಕೆ ಏರಿದೆ. ಸೋಂಕಿತರ ಸಂಖ್ಯೆ 2,20,000ಕ್ಕೆ ಏರಿಕೆಯಾಗಿದೆ.
ಇರಾನ್:
ಇರಾನ್ ನಲ್ಲಿ ಕೋವಿಡ್ 19 ಮಹಾಮಾರಿಗೆ ಸಾವನ್ನಪ್ಪಿದ್ದವರ ಸಂಖ್ಯೆ 1,433ಕ್ಕೆ ಏರಿದೆ. ಶುಕ್ರವಾರ ದಿನದಂದು ಸಾವನ್ನಪ್ಪಿದ್ದವರ ಸಂಖ್ಯೆ 149 ಮಂದಿ ಎಂದು ಎಎಫ್ ಪಿ ವರದಿ ಮಾಡಿದೆ.
ಜರ್ಮನಿಯ ಬವಾರಿಯಾ ಲಾಕ್ ಡೌನ್:
ಜರ್ಮಿನಿಯ ಬವಾರಿಯಾ ರಾಜ್ಯವನ್ನು ಲಾಕ್ ಡೌನ್ ಮಾಡಲಾಗಿದ್ದು, ದೇಶದಲ್ಲಿ ಲಾಕ್ ಡೌನ್ ಆದ ಮೊದಲ ರಾಜ್ಯ ಇದಾಗಿದೆ. ಕೋವಿಡ್ 19 ವೈರಸ್ ತಡೆಗೆ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಮದು ತಿಳಿಸಿದೆ.
ಸ್ಪೇನ್ ನಲ್ಲಿ ಸಾವಿನ ಸಂಖ್ಯೆ 1000ಕ್ಕೆ ಏರಿಕೆ:
ಸ್ಪೇನ್ ನಲ್ಲಿ ಕೋವಿಡ್ 19 ಸೋಂಕು ಮಾರಿಗೆ ಸಾವಿನ್ನಪ್ಪಿದ್ದವರ ಸಂಖ್ಯೆ 1002ಕ್ಕೆ ಏರಿಕೆಯಾಗಿದೆ. ಗುರುವಾರ, ಶುಕ್ರವಾರದಂದು ಸಾವನ್ನಪ್ಪಿದ್ದವರ ಸಂಖ್ಯೆ 767 ಎಂದು ಫೆರ್ನಾಂಡೋ ಸಿಮೋನ್ ತಿಳಿಸಿದ್ದಾರೆ.