ಬುಕಿಂಗ್ ಲೋಪ ಪತ್ತೆ ಹಚ್ಚಿದ ಬಾಲಕ!
Team Udayavani, Sep 22, 2021, 7:01 AM IST
ಚೆನ್ನೈ: ರೈಲ್ವೇ ಟಿಕೆಟ್ಗಳನ್ನು ಅಂತರ್ಜಾಲದ ಮೂಲಕ ಬುಕಿಂಗ್ ಮಾಡುವ ವ್ಯವಸ್ಥೆಯಲ್ಲಿ ಇದ್ದ ಲೋಪವನ್ನು ಸರಿಪಡಿಸಲಾಗಿದೆ ಎಂದು ಐಆರ್ಸಿಟಿಸಿ ತಿಳಿಸಿದೆ.
ಐಆರ್ಟಿಸಿ ವೆಬ್ಸೈಟ್ಗೆ ಪ್ರವೇಶ ಪಡೆಯುವ ಗ್ರಾಹಕರು ಅದರಲ್ಲಿನ ಇನ್ಸೆಕ್ಯೂರ್ ಡೈರೆಕ್ಟ್ ಆಬ್ಜೆಕ್ಟ್ ರೆಫರೆನ್ಸ್ (ಐಡಿಒಆರ್) ಹಂತವು ಸುಲಭ ಭೇದ್ಯ ವ್ಯವಸ್ಥೆಯಾಗಿದ್ದು, ಅದು ಹ್ಯಾಕರ್ಗಳಿಗೆ ಅನಧಿಕೃತವಾಗಿ ವೆಬ್ಸೈಟ್ ಪ್ರವೇಶಿಸುವ ಎಲ್ಲ ಸಾಧ್ಯತೆಗಳನ್ನು ಒಳಗೊಂಡಿದೆ ಎಂದು 12ನೇ ತರಗತಿ ಬಾಲಕನೊಬ್ಬ ಪತ್ತೆ ಹಚ್ಚಿದ್ದ.
ತತ್ಕ್ಷಣವೇ ಜಾಗೃತರಾದ ಐಆರ್ಸಿಟಿಸಿಯ ಮಾಹಿತಿ ತಂತ್ರಜ್ಞಾನ ವಿಭಾಗದ ತಜ್ಞರು ಸಮಸ್ಯೆ ಯನ್ನು ಸರಿಪಡಿಸಿದ್ದಾರೆ ಎಂದು ಐಆರ್ಟಿಸಿ ತಿಳಿಸಿದೆ.