ಜೈಪುರ : ಐಆರ್ಎಸ್ ಮಹಿಳಾ ಅಧಿಕಾರಿ ಆತ್ಮಹತ್ಯೆ; ಪತಿ, ಅತ್ತೆ ಕಾರಣ ?
Team Udayavani, Aug 7, 2018, 6:19 PM IST
ಜೈಪುರ : ಭಾರತೀಯ ಕಂದಾಯ ಸೇವೆಯ (ಐಆರ್ಎಸ್) 35ರ ಹರೆಯದ ಮಹಿಳಾ ಅಧಿಕಾರಿ ಬಿನ್ನಿ ಶರ್ಮಾ ಎಂಬವರು ಇಲ್ಲಿನ ಎಜಿ ಕಾಲನಿಯಲ್ಲಿನ ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎರಡು ಮಕ್ಕಳ ತಾಯಿಯಾಗಿರುವ ಬಿನ್ನಿ ಶರ್ಮಾ ಅವರ ಮೃತ ದೇಹವನ್ನು ಇಂದು ಬೆಳಗ್ಗೆ ಕಂಡ ಆಕೆಯ ತಾಯಿ ಪೊಲೀಸರಿಗೆ ವಿಷಯ ತಿಳಿಸಿದರು. ಶರ್ಮಾ ಅವರು ನಿನ್ನೆ ಸೋಮವಾರ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.
ಶರ್ಮಾ ಅವರು ಬರೆದಿಟ್ಟಿರುವ ಡೆತ್ ನೋಟ್ ನಲ್ಲಿ “ಪತಿ ಗುರುಪ್ರೀತ್ ವಾಲಿಯಾ ಮತ್ತು ಅತ್ತೆ ನನ್ನ ಬದುಕನ್ನು ಸರ್ವನಾಶ ಮಾಡಿದ್ದಾರೆ’ ಎಂದು ಆರೋಪಿಸಿದ್ದು ಅದು ಪೊಲೀಸರಿಗೆ ಸಿಕ್ಕಿದೆ.
ಬಿನ್ನಿ ಶರ್ಮಾ ಅವರ ಪತಿ ವಾಲಿಯಾ ಅವರು ಇಂಡಿಯನ್ ಅಕೌಂಟ್ಸ್ ಮತ್ತು ಆಡಿಟ್ ಸೇವೆಗಳ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು ಚಂಡೀಗಢದಲ್ಲಿ ನಿಯೋಜಿತರಾಗಿದ್ದಾರೆ ಎಂದು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಬಜಾಜ್ ನಗರ ಪೊಲೀಸ್ ಠಾಣಾ ಎಸ್ಎಚ್ಓ ರೈಸಾಲ್ ಸಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್