ಇಶಾಗೆ 450 ಕೋಟಿ ರೂ. ಮನೆ ಗಿಫ್ಟ್!
Team Udayavani, Nov 16, 2018, 10:41 AM IST
ಮುಂಬಯಿ: ಮುಕೇಶ್ ಅಂಬಾನಿ ಪುತ್ರಿ ಇಶಾ ಹಾಗೂ ಅಜಯ್ ಪಿರಾಮಲ್ ಪುತ್ರ ಆನಂದ್ ಪಿರಾಮಲ್ ಡಿ.12ಕ್ಕೆ ವಿವಾಹವಾಗುತ್ತಿದ್ದು, ಈ ಜೋಡಿ ಮುಂಬಯಿಯಲ್ಲಿ 450 ಕೋಟಿ ರೂ. ಮೌಲ್ಯದ ಅದ್ದೂರಿ ಬಂಗಲೆಯಲ್ಲಿ ವಾಸಿಸಲಿದೆ. ಈ ಬಂಗಲೆಯನ್ನು ಅಜಯ್ ಪಿರಾಮಲ್ ಉಡುಗೊರೆಯಾಗಿ ನೀಡಿದ್ದಾರೆ. ಹಿಂದೆ ಹಿಂದುಸ್ತಾನ್ ಯುನಿಲಿವರ್ ಕಂಪನಿಯ ತರಬೇತಿ ಕೇಂದ್ರವಾಗಿದ್ದ ಈ ಕಟ್ಟಡವನ್ನು 2012ರಲ್ಲಿ ಅಜಯ್ ಪಿರಾಮಲ್ 450 ಕೋಟಿ ರೂ.ಗೆ ಖರೀದಿಸಿದ್ದರು. ಈಗ ಈ ಕಟ್ಟಡವನ್ನು ಆಮೂಲಾಗ್ರವಾಗಿ ಬದಲಿಸಲಾಗುತ್ತಿದ್ದು, 1 ಸಾವಿರ ಕೆಲಸಗಾರರು ಹಗಲಿರುಳೂ ಶ್ರಮಿಸುತ್ತಿದ್ದಾರೆ.
ಈ ಮನೆಯಲ್ಲಿ ಬೃಹತ್ ಈಜುಕೊಳ, ವಜ್ರದಿಂದ ಅಲಂಕರಿಸಿದ ಕೋಣೆ, ಬೃಹತ್ ದೇವರ ಕೋಣೆ, ವಿಶಾಲವಾದ ಹಾಲ್ ಕೂಡ ಇರಲಿದೆ. ಒಟ್ಟು 50 ಸಾವಿರ ಚದರಡಿ ಇರುವ ಈ ಮನೆ, ಐದು ಮಹಡಿ ಹೊಂದಿದೆ. ಮನೆಯಿಂದ ಅರಬಿ ಸಮುದ್ರ ಕಾಣಿಸುತ್ತದೆ.