ಅಮ್ಮನ ಸೀರೆಯೇ ಬೇಕು!

Team Udayavani, Dec 14, 2018, 8:00 AM IST

ಮುಂಬಯಿ: ಉದ್ಯಮಿ ಮುಕೇಶ್‌ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಬುಧವಾರವಷ್ಟೇ ದಾಂಪತ್ಯ ಜೀವನ ಪ್ರವೇಶಿಸಿದ್ದು, ಅವರು ತಮ್ಮ ಮದುವೆಯ ದಿನ ಉಟ್ಟಿದ್ದ ಸೀರೆಯಲ್ಲಿನ ವಿಶೇಷತೆ ಗುರುವಾರ ಬಹಿರಂಗವಾಗಿದೆ. ಅಂಥದ್ದೇನಿದೆ ಆ ಸೀರೆಯಲ್ಲಿ ಎಂದು ಕೇಳುತ್ತಿದ್ದೀರಾ ಅಥವಾ ಕೋಟಿಗಟ್ಟಲೆ ಬೆಲೆಬಾಳುವ ಸೀರೆಯಿರಬಹುದೇ ಎಂದು ಭಾವಿಸುತ್ತಿದ್ದೀರಾ? ನಿಮ್ಮ ಊಹೆ ತಪ್ಪು. ಇಶಾ ಅಂಬಾನಿ ತಮ್ಮ ಮದುವೆಯ ದಿನ ಉಟ್ಟಿದ್ದು ಬರೋಬ್ಬರಿ 35 ವರ್ಷಗಳಷ್ಟು ಹಳೆಯ ಸೀರೆಯನ್ನು!

ಅಚ್ಚರಿಯಾದರೂ ಇದು ಸತ್ಯ. 35 ವರ್ಷಗಳ ಹಿಂದೆ ತಾಯಿ ನೀತಾ ಅಂಬಾನಿ ತಮ್ಮ ಮದುವೆಯಲ್ಲಿ ಉಟ್ಟಿದ್ದ ಸೀರೆಯನ್ನೇ ಈಗ ಮಗಳು ಇಶಾ ಆಕೆಯ ಮದುವೆಯಲ್ಲಿ ಉಟ್ಟಿದ್ದಾರೆ. ಅಮ್ಮನ ಸೀರೆಯನ್ನೇ ಉಡುತ್ತೇನೆ ಎಂದು ಸ್ವತಃ ಇಶಾ ಅಂಬಾನಿಯೇ ಈ ಸೀರೆಯನ್ನು ಆಯ್ದುಕೊಂಡಿದ್ದರಂತೆ. ಅದರಂತೆ, ವಿವಾಹದ ದಿನ ಇಶಾ ಬಿಳಿ ಮತ್ತು ಚಿನ್ನದ ಬಣ್ಣದ ಘಾಘ್ರಾ ಹಾಗೂ ಕೆಂಪು ಬಣ್ಣದ ಶಾಲು ಧರಿಸಿ ಮಿಂಚಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ