ಮಸೀದಿ ಪ್ರವೇಶಕ್ಕೆ ಮಹಿಳೆಯರಿಗೆ ನಿಷೇಧ ಹೇರಿಲ್ಲ: ಸುಪ್ರೀಂಗೆ ಅರಿಕೆ
Team Udayavani, Jan 30, 2020, 7:25 AM IST
ಹೊಸದಿಲ್ಲಿ: ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಮಸೀದಿ ಪ್ರವೇಶ ಮತ್ತು ಪ್ರಾರ್ಥನೆ ಸಲ್ಲಿಸುವ ಬಗ್ಗೆ ಯಾವುದೇ ರೀತಿಯಲ್ಲಿ ನಿಷೇಧ ಹೇರಿಲ್ಲ. ಅವರು ಮಸೀದಿ ಪ್ರವೇಶ ಮಾಡಿ ಪ್ರಾರ್ಥನೆ ಸಲ್ಲಿಸಲು ಮುಕ್ತ ಅವಕಾಶ ಇದೆ ಎಂದು ಬುಧವಾರ ಸುಪ್ರೀಂಕೋರ್ಟ್ಗೆ ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಪ್ರಮಾಣ ಪತ್ರ ಸಲ್ಲಿಕೆ ಮಾಡಿದೆ.
ಆದರೆ ಮಹಿಳೆಯರು ಅಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುವ ವಿಚಾರವನ್ನು ಕೇವಲ ಆಯ್ಕೆಯ ವಿಚಾರವನ್ನಾಗಿಸಲಾಗಿದೆ. ಆದರೆ ಮುಸ್ಲಿಂ ಸಮುದಾಯದ ಪುರುಷರಿಗೆ ಕಡ್ಡಾಯಗೊಳಿಸಲಾಗಿದೆ ಎಂದು ಮಂಡಳಿ ಹೇಳಿದೆ ಎಂದು ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ. ಮಸೀದಿ ಪ್ರವೇಶದ ವಿಚಾರ ನಿಟ್ಟಿನಲ್ಲಿ ಮಹಿಳೆಯರಿಗೆ ಯಾವುದೇ ರೀತಿಯಲ್ಲಿ ಫತ್ವ ಹೊರಡಿಸಲಾಗಿಲ್ಲ ಎಂದು ಅಫಿದಾವಿತ್ನಲ್ಲಿ ಹೇಳಿಕೊಡಿದೆ.
ಮಹಾರಾಷ್ಟ್ರ ಮೂಲದ ಮುಸ್ಲಿಂ ಸಮುದಾಯದ ದಂಪತಿ, ‘ಜಮಾತ್-ಎ-ಇಸ್ಲಾಮಿ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ಇದೆ. ಮುಜಾಹಿದ್ ಗುಂಪಿನಲ್ಲಿ ಅವಕಾಶ ಇಲ್ಲ. ಒಂದು ವೇಳೆ ಅವಕಾಶ ನೀಡಿದರೂ ಮಹಿಳೆಯರ ಪ್ರಾರ್ಥನೆಗೆ ಪ್ರತ್ಯೇಕ ಸ್ಥಳ ಮತ್ತು ಅಲ್ಲಿಗೆ ಪ್ರವೇಶ ಪ್ರವೇಶಕ್ಕೆ ಪ್ರತ್ಯೇಕ ದ್ವಾರ ಇರುತ್ತದೆ. ಇದೊಂದು ತಾರತಮ್ಯದಿಂದ ಕೂಡಿದೆ. ಇದು ಮೂಲ ಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರು ವಾದಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
Netizens; 10ನೇ ತರಗತಿ ಪರೀಕ್ಷೆ ಟಾಪರ್ ಟ್ರೋಲ್: ನೆಟ್ಟಿಗರಿಂದ ತರಾಟೆ
Hong Kong ಎವರೆಸ್ಟ್, ಎಂಡಿಎಚ್ ಮಸಾಲೆ ಬ್ಯಾನ್
MUST WATCH
ಹೊಸ ಸೇರ್ಪಡೆ
Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ
Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
Police Raid: 346 ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು