ಮಾರುಕಟ್ಟೆಗೆ ಇಸ್ರೋ ಪ್ರವೇಶ
Team Udayavani, Jan 20, 2021, 7:42 AM IST
ಹೊಸದಿಲ್ಲಿ: ಅಮೆರಿಕದ ನಾಸಾದಂತೆ ಇಸ್ರೋ ಕೂಡ “ವಾಣಿಜ್ಯ ಸರಕು ಮಾರುಕಟ್ಟೆ’ಗೆ ಕಾಲಿಡಲು ಮಾಸ್ಟರ್ ಪ್ಲ್ರಾನ್ ರೂಪಿಸಿದೆ. ಅದರಂತೆ ಇಸ್ರೋ ಪರಿಕಲ್ಪನೆ- ಲೋಗೊ ಒಳಗೊಂಡ ಟಿ-ಶರ್ಟ್ಸ್, ಪೋಸ್ಟರ್, ಕಾಫಿ ಮಗ್, ಕೀ ಚೈನ್… ಇತ್ಯಾದಿಗಳನ್ನು ಮಾರಲು ನಿರ್ದಿಷ್ಟ ಸಂಸ್ಥೆಗಳಿಗೆ ಒಪ್ಪಿಗೆ ನೀಡಲಾಗಿದೆ.
“ವಿದ್ಯಾರ್ಥಿಗಳು, ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಇಸ್ರೋ ಸಾಧನೆ, ಸಂಶೋಧನೆ ಕುರಿತಾಗಿ ಜಾಗೃತಿ ಮೂಡಿಸಲು ಈ ಯೋಜನೆ ನೆರವಾಗಲಿವೆ. ಭಾರತಕ್ಕೆ ಇಸ್ರೋ ನೀಡಿದ ಕೊಡುಗೆಗಳೂ ಇದರಿಂದ ಜನರಿಗೆ ತಿಳಿಯಲಿದೆ’ ಎಂದು ಇಸ್ರೋ ತಿಳಿಸಿದೆ.
ಬ್ರ್ಯಾಂಡ್ ಶುಲ್ಕವಿಲ್ಲ: ಈಗಾಗಲೇ ಹಲವು ಏಜೆನ್ಸಿಗಳ ಜತೆ ಮಾತುಕತೆ ನಡೆಸಲಾಗಿದೆ. ಏಜೆನ್ಸಿಗಳು ಇಸ್ರೋ ಪರಿಕಲ್ಪನೆಯಲ್ಲಿ ಉತ್ಪನ್ನಗ ಳನ್ನು, ಕರಕುಶಲ ವಸ್ತುಗಳನ್ನು ತಯಾರಿಸಲು, ಮಾರಲು ಆಸಕ್ತಿ ತೋರಿವೆ. ಏಜೆನ್ಸಿಯ ಉತ್ಪನ್ನ ಗಳಿಗೆ ಇಸ್ರೋ ಯಾವುದೇ ರೀತಿಯ ಬ್ರ್ಯಾಂಡ್ ಶುಲ್ಕ ವಿಧಿಸುವುದಿಲ್ಲ. ಹೀಗಾಗಿ ಕೈಗೆಟಕುವ ದರದಲ್ಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಧ್ಯತೆ ಇದೆ.
1 ಲಕ್ಷ ರೂ. ಠೇವಣಿ!: ಆಸಕ್ತ ಉತ್ಪಾದಕರು ಇಸ್ರೋ ವೆಬ್ಸೈಟ್ನಲ್ಲಿ ತಮ್ಮ ಸಂಸ್ಥೆಯ ಹೆಸರನ್ನುನೋಂದಾಯಿಸಿ ಕೊಳ್ಳಬೇಕಾಗುತ್ತದೆ. ಆಯ್ಕೆಯಾದ ಏಜೆನ್ಸಿಗಳು 1 ಲಕ್ಷ ರೂ. ಮರುಪಾವತಿಸದ ಠೇವಣಿ ಇಡಬೇಕಾಗುತ್ತದೆ. 2 ವರ್ಷಗಳ ಅವಧಿಗೆ ಇಸ್ರೋ ಮಾರುಕಟ್ಟೆ ಹಕ್ಕು ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ