ಐಎಡಿ ತಂತ್ರಜ್ಞಾನದ ಪರೀಕ್ಷೆ; ಯಶಸ್ವಿಯಾಯಿತು ಇಸ್ರೋ ಪ್ರಯೋಗ
Team Udayavani, Sep 4, 2022, 10:00 PM IST
ನವದೆಹಲಿ: ಭವಿಷ್ಯದ ಯೋಜನೆಗಳ ವೇಳೆ ಮಂಗಳ ಅಥವಾ ಶುಕ್ರ ಗ್ರಹದ ಅಂಗಳದಲ್ಲಿ ಪೇಲೋಡ್ಗಳನ್ನು ಇಳಿಸಲು ಬಳಸುವಂಥ ಇನ್ಫ್ಲೇಟೇಬಲ್ ಏರೋಡೈನಾಮಿಕ್ ಡಿಸೆಲೆರೇಟರ್(ಐಎಡಿ)ನ ಪ್ರಾಯೋಗಿಕ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನೆರವೇರಿಸಿದೆ.
ಮಂಗಳ ಅಥವಾ ಶುಕ್ರ ಗ್ರಹದ ವಾತಾವರಣಕ್ಕೆ ಒಂದು ವಸ್ತುವನ್ನು ವಾಯುಬಲ ವಿಜ್ಞಾನದ ಅನ್ವಯ ಇಳಿಸುವ ಉದ್ದೇಶದಿಂದ ಐಎಡಿಯನ್ನು ಅಭಿವೃದ್ಧಿಪಡಿಸಲಾಗಿದೆ.
ಪ್ರಾಯೋಗಿಕ ಪರೀಕ್ಷೆ ವೇಳೆ ರಾಕೆಟ್ನ ಪೇಲೋಡ್ ಬೇಯೊಳಗೆ ಐಎಡಿಯನ್ನು ಮಡಚಿ ಇಟ್ಟು, ತಿರುವನಂತಪುರದ ಥುಂಬಾದಿಂದ ರಾಕೆಟ್ ಉಡಾವಣೆ ಮಾಡಲಾಯಿತು. ಈ ರಾಕೆಟ್ ಐಎಡಿಯನ್ನು 84 ಕಿ.ಮೀ. ಎತ್ತರಕ್ಕೆ ಸಾಗಿಸಿತು.
ಐಎಡಿ ಅಲ್ಲೇ ಉಬ್ಬಿಕೊಂಡ ಪರಿಣಾಮ, ಪೇಲೋಡ್ ನಿಧಾನವಾಗಿ ರಾಕೆಟ್ನಿಂದ ಹೊರಬಂದು ವಾತಾವರಣಕ್ಕೆ ಇಳಿಯಿತು. ಈ ಮೂಲಕ ಯೋಜನೆಯ ಎಲ್ಲ ಗುರಿಯನ್ನೂ ನಿಖರವಾಗಿ ಸಾಧಿಸಿದಂತಾಯಿತು ಎಂದು ಇಸ್ರೋ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್