ಮಾಯಾವತಿ ಸಹೋದರನಿಗೆ ಸೇರಿದ 400 ಕೋಟಿ ಮೌಲ್ಯದ ಆಸ್ತಿ ಜಪ್ತಿ

ನೋಯ್ಡಾ ಪ್ರದೇಶದಲ್ಲಿರುವ ಏಳು ಎಕರೆ ಬೇನಾಮಿ ಆಸ್ತಿ ಐಟಿ ವಶಕ್ಕೆ

Team Udayavani, Jul 18, 2019, 3:34 PM IST

ಲಕ್ನೋ: ಉತ್ತರ ಪ್ರದೇಶದ ಮಾಜೀ ಮುಖ್ಯಮಂತ್ರಿ ಹಾಗೂ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ಸಹೋದರನಿಗೆ ಸೇರಿದ ಸುಮಾರು 400 ಕೋಟಿ ರೂಪಾಯಿಗಳ ಮೌಲ್ಯದ ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆಯು ಇಂದು ಜಪ್ತಿ ಮಾಡಿದೆ.

ದೆಹಲಿ ಮೂಲದ ಆದಾಯ ತೆರಿಗೆ ಇಲಾಖೆಯ ಬೇನಾಮಿ ತಡೆ ಘಟಕವು ಈ ಬೇನಾಮಿ ಆಸ್ತಿಯ ಜಪ್ತಿಗೆ ನಿರ್ದೇಶನವನ್ನು ನೀಡಿ ಜುಲೈ 16ರಂದು ತಾತ್ಕಾಲಿಕ ಆದೇಶವನ್ನು ಹೊರಡಿಸಿತ್ತು. ಉತ್ತರಪ್ರದೇಶದ ನೋಯ್ಡಾದಲ್ಲಿ ಸುಮಾರು ಏಳು ಎಕರೆಗಳಷ್ಟು ಭೂಮಿಯನ್ನು ಮಾಯಾವತಿ ಅವರ ಸಹೋದರ ಆನಂದ್ ಕುಮಾರ್ ಮತ್ತು ಅವರ ಪತ್ನಿ ವಿಚಿತೆರ್ ಲತಾ ಅವರು ‘ಫಲಾನುಭವಿ ಒಡೆತನ’ದಡಿಯಲ್ಲಿ ಹೊಂದಿದ್ದುದು ಬೆಳಕಿಗೆ ಬಂದಿತ್ತು. ಬೇನಾಮಿ ಆಸ್ತಿ ಪರಭಾರೆ ನಿಷೇಧ ಕಾಯ್ದೆ 1998ರ ಸೆಕ್ಷನ್ 24(3)ರ ಅಡಿಯಲ್ಲಿ ಜಪ್ತಿ ಆದೇಶವನ್ನು ನೀಡಲಾಗಿತ್ತು. ವಶಪಡಿಸಿಕೊಂಡ ಈ ಆಸ್ತಿಯ ಮೌಲ್ಯ ಸುಮಾರು 400 ಕೋಟಿ ರೂಪಾಯಿಗಳಷ್ಟಾಗಬಹುದು ಎನ್ನಲಾಗುತ್ತಿದೆ.

ಮಾಯಾವತಿ ಅವರು ಕಳೆದ ಜೂನ್ ತಿಂಗಳಲ್ಲಿ ಆನಂದ್ ಕುಮಾರ್ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದರು. ಆನಂದ್ ಕುಮಾರ್ ಅವರು ಈ ಹಿಂದೆ ನೋಯ್ಡಾ ಪ್ರಾಧಿಕಾರದಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸಿದ್ದರು ಮತ್ತು ಖೊಟ್ಟಿ ಕಂಪೆನಿಯನ್ನು ಪ್ರಾರಂಭಿಸಿ ಅದರ ಮೂಲಕ ಕೋಟ್ಯಂತರ ರೂಪಾಯಿಗಳ ಸಾಲ ಪಡೆದುಕೊಂಡಿರುವ ಆರೋಪವೂ ಆನಂದ್ ಕುಮಾರ್ ಅವರ ಮೇಲಿದೆ.

2007ರಲ್ಲಿ ಮಾಯಾವತಿ ಅವರು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಆನಂದ್ ಕುಮಾರ್ ಅವರು ಸುಮಾರು 49 ಕಂಪೆನಿಗಳನ್ನು ಪ್ರಾರಂಭಿಸಿದ್ದರು ಎಂದು ಹೇಳಲಾಗುತ್ತಿದೆ ಹಾಗೂ 2014ರ ಅಂತ್ಯದಲ್ಲಿ ಅವರ ಆಸ್ತಿ ಮೌಲ್ಯ 1316 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಲಕ್ಷಾಂತರ ರೂಪಾಯಿ ವ್ಯಯಿಸಿ ಅಳವಡಿಸಿರುವ ರಬ್ಬರ್‌ ಕೋನ್‌ಗಳ ಪ್ರಸ್ತುತ ಸ್ಥಿತಿ ಹೇಗಿದೆ ಎಂದು ತಿಳಿಯುವ ನಿಟ್ಟಿನಲ್ಲಿ "ಸುದಿನ' ತಂಡವು ರಿಯಾಲಿಟಿ ಚೆಕ್‌ ನಡೆಸಿದೆ....

  • ಮನೆಯ ಸುತ್ತುಮುತ್ತಲಿನಲ್ಲಿ ಬರುವ ಪ್ರತಿಯೊಂದು ಹಕ್ಕಿಗೂ ಅದರದ್ದೇ ಆದ ಚೆಲುವು, ಬೆಡಗು, ಆಕರ್ಷಣೆ. ಅಶ್ವತ್ಥಮರದ ಎಲೆಗಳ ನಡುವೆ ಕುಳಿತಿರುವ ವಸಂತದ ಹಕ್ಕಿ ಕಣ್ಣಿಟ್ಟು...

  • ಭಾರತದ ಗೋಪರಂಪರೆಯಲ್ಲೂ ಹೈನುಗಾರಿಕೆ ತಳಿಗಳಲ್ಲಿ ಗೀರ್‌ ವಿಶಿಷ್ಟ ಸ್ಥಾನ. ಭಾರತೀಯ ಪರಂಪರೆಯಲ್ಲಿ ಹೆಚ್ಚು ಹಾಲು ಕೊಡುವ ತಳಿಗಳಲ್ಲಿ ಇದು ಎರಡನೆಯದು. ಗುಜರಾತಿನ...

  • ಕಡಬ: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ರಾಮಕುಂಜದಲ್ಲಿ ಶನಿವಾರ ಚರಂಡಿಗೆ ಬಿದ್ದು ಗಾಯಗೊಂಡಿದ್ದ ರಾಮಕುಂಜ ಗ್ರಾಮದ ಶಾರದಾನಗರ ಕಾಲನಿಯ ನಿವಾಸಿ...

  • ಮಡಿಕೇರಿ: ದಕ್ಷಿಣ ಕೊಡಗಿನ ವಿವಿಧಡೆ ಹುಲಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗುತ್ತಿರುವ ವಿಷಯ ಹಸಿರಾಗಿರು ವಾಗಲೇ ಬಿಟ್ಟಂಗಾಲ ಸಮೀಪದ ವಿ.ಬಾಡಗದಲ್ಲಿ ಹುಲಿ ಹೆಜ್ಜೆ...