ತನ್ನ ವಿರುದ್ಧದ ಪ್ರಕರಣ ವಿಚಾರಣೆ ನಡೆಸಿದ್ದು ಸರಿಯಲ್ಲ: ವಕೀಲರ ಸಂಘ
Team Udayavani, Apr 23, 2019, 6:00 AM IST
ಹೊಸದಿಲ್ಲಿ: ತನ್ನ ವಿರುದ್ಧವೇ ಸಲ್ಲಿಕೆಯಾದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಗೆ ತಾನೇ ಹಾಜರಾಗಿದ್ದು ಸರಿಯಲ್ಲ ಎಂಬುದಾಗಿ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಕ್ರಮಕ್ಕೆ ಸುಪ್ರೀಂಕೋರ್ಟ್ ವಕೀಲರ ಸಂಘ (ಎಸ್ಸಿಎಒಆರ್ಎ) ಹೇಳಿದೆ. ಗೊಗೋಯ್ ವಿರುದ್ಧದ ಪ್ರಕರಣವನ್ನು ನಿರ್ದಿಷ್ಟ ಮಾನದಂಡಕ್ಕೆ ಅನುಗುಣವಾಗಿ ವಿಚಾರಣೆ ನಡೆಸಬೇಕು. ಎಲ್ಲರಿಗೂ ಕಾನೂನು ಒಂದೇ ರೀತಿಯಲ್ಲಿ ಇರಬೇಕು ಎಂದು ಸೋಮವಾರದ ಸಭೆಯಲ್ಲಿ ನಿಲುವಳಿ ಮಂಡಿಸಿದೆ. ಇನ್ನೊಂದೆಡೆ ಸುಪ್ರೀಂಕೋರ್ಟ್ ಉದ್ಯೋಗಿಗಳ ಕಲ್ಯಾಣ ಸಂಸ್ಥೆಯು ಸಿಜೆಐ ಪರ ನಿಲುವು ತಾಳಿದ್ದು, ಮಹಿಳೆ ಮಾಡಿರುವ ಆರೋಪಗಳು ಸುಳ್ಳು ಎಂದಿದೆ. ಈ ಬಗ್ಗೆ ಸಂಸ್ಥೆ ಪ್ರಕಟಣೆಯನ್ನೂ ಹೊರಡಿಸಿದೆ.
ಸಿಜೆಐ ರಾಜೀನಾಮೆ ಪಡೆಯಲು ಕುತಂತ್ರ: ಸುಪ್ರೀಂಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿರುವ ವಕೀಲ ಉತ್ಸವ್ ಸಿಂಗ್ ಬೇನ್ಸ್ ಪ್ರಕಾರ, ಸಿಜೆಐ ವಿರುದ್ಧ ಲೈಂಗಿಕ ಆರೋಪ ಮಾಡಿದ ಮಹಿಳೆಯ ಪರ ವಾದಿಸಲು 1.5 ಕೋಟಿ ರೂ. ಪ್ರಸ್ತಾವನೆ ನೀಡಿದ್ದರು. ಅಷ್ಟೇ ಅಲ್ಲ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವ ರೊಂ ದಿಗೂ ಮಾತನಾಡಬೇಕು ಎಂದು ತಾಕೀತು ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.