ಪವಾರ್ ಹೇಳಿಕೆ ಅರ್ಥ ಮಾಡಿಕೊಳ್ಳಲು ನೂರು ಜನ್ಮ ಬೇಕಾಗುತ್ತೆ! ಶಿವಸೇನಾದ ರಾವತ್

Team Udayavani, Nov 19, 2019, 7:04 PM IST

ಮುಂಬೈ/ನವದೆಹಲಿ: ಎನ್ ಸಿಪಿ ವರಿಷ್ಠ ಶರದ್ ಪವಾರ್ ಅವರು ಏನು ಹೇಳುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ ನೂರು ಜನ್ಮ ಬೇಕು ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಮಂಗಳವಾರ ಪ್ರತಿಕ್ರಿಯೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಎನ್ ಸಿಪಿ, ಕಾಂಗ್ರೆಸ್ ಇನ್ನೂ ಮಾತುಕತೆ ನಡೆಸಿಲ್ಲ. ಬಿಜೆಪಿ ಮತ್ತು ಶಿವಸೇನೆ ಅವರ ದಾರಿಯನ್ನು ಕಂಡುಕೊಳ್ಳಲಿ ಎಂದು ಶರದ್ ಪವಾರ್ ಸೋಮವಾರ ಸೋನಿಯಾ ಗಾಂಧಿ ಜತೆ ಚರ್ಚೆ ನಡೆಸಿದ ಬಳಿಕ ತಿಳಿಸಿದ್ದರು.

ಶಿವಸೇನಾ, ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಿದೆ. ಎನ್ ಸಿಪಿ, ಕಾಂಗ್ರೆಸ್ ಕೂಡಾ ಪ್ರತ್ಯೇಕವಾಗಿ ಸ್ಪರ್ಧಿಸಿದೆ. ಹೀಗಿದ್ದ ಮೇಲೆ ಮೂರು ಪಕ್ಷಗಳ ಮೈತ್ರಿ ಬಗ್ಗೆ ಹೇಗೆ ಹೇಳುತ್ತೀರಿ? ಶಿವಸೇನಾ, ಬಿಜೆಪಿ ಅವರ ದಾರಿಯನ್ನು ಕಂಡುಕೊಳ್ಳುತ್ತಾರೆ. ನಾವು ನಮ್ಮ ರಾಜಕೀಯ ನಡೆಯನ್ನು ನಿರ್ಧರಿಸುತ್ತವೆ ಎಂದು ನಿನ್ನೆ ಸುದ್ದಿಗಾರರ ಜತೆ ಮಾತನಾಡು ಪವಾರ್ ತಿರುಗೇಟು ನೀಡಿದ್ದರು.

ನಾವು ಪವಾರ್ ಸಾಹೇಬ್ ಅವರ ಜತೆ ಸೇರಿ ಸರ್ಕಾರ ರಚಿಸುತ್ತೇವೆ ಎಂದು ಶಿವಸೇನಾ ಹೇಳುತ್ತಿದೆಯಲ್ಲ ಎಂಬ ಪ್ರಶ್ನೆಗೆ, ಒಳ್ಳೆಯದು ಎಂದು ಪವಾರ್ ಉತ್ತರ ನೀಡಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ