8ರಂದು ಸೋನಂ ಮದುವೆ
Team Udayavani, May 2, 2018, 8:00 AM IST
ಹೊಸದಿಲ್ಲಿ: ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಅವರ ವಿವಾಹ ಸುದ್ದಿಗಳಿಗೆ ಇಬ್ಬರ ಕುಟುಂಬಗಳೂ ಅಧಿಕೃತ ಮೊಹರು ಒತ್ತಿವೆ. ಈ ಕುರಿತಂತೆ ಪ್ರಕಟನೆ ನೀಡಿರುವ ಎರಡೂ ಕುಟುಂಬದ ಹಿರಿಯರು, ಮೇ 8ರಂದು ಮುಂಬಯಿಯಲ್ಲೇ ಅವರಿಬ್ಬರ ವಿವಾಹ ನೆರವೇರಿಸುವುದಾಗಿ ತಿಳಿಸಿವೆ. ಸೋನಂ-ಆನಂದ್ ವಿವಾಹದ ಬಗ್ಗೆ ಹಲವಾರು ಮಾಧ್ಯಮಗಳಲ್ಲಿ ಕೆಲವು ತಿಂಗಳುಗಳಿಂದ ಗುಸುಗುಸು ವ್ಯಕ್ತವಾಗುತ್ತಿತ್ತು. ಜಿನಿವಾದಲ್ಲಿ ಇವರು ಸದ್ಯದಲ್ಲೇ ಮದುವೆಯಾಗುತ್ತಾರೆಂಬ ಸುದ್ದಿಗಳೂ ಬಿತ್ತರಗೊಂಡಿದ್ದವು. ಆದರೀಗ, ಆ ಎಲ್ಲಾ ಗಾಳಿ ಸುದ್ದಿಗಳಿಗೆ ಅಧಿಕೃತವಾಗಿ ತೆರೆಬಿದ್ದಿದೆ.