ಜೈ ಶ್ರೀರಾಂ ಪೋಸ್ಟ್‌ಕಾರ್ಡ್‌ ಅಂಚೆಯಣ್ಣನಿಗೆ ಸುಸ್ತು!

Team Udayavani, Jun 8, 2019, 6:00 AM IST

ಕೋಲ್ಕತಾ: ಪೋಸ್ಟ್‌ ಕಾರ್ಡ್‌ಗಳನ್ನು ಬರೆಯುವವರ ಸಂಖ್ಯೆ ದೇಶದ ಇತರ ಭಾಗಗಳಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಪೋಸ್ಟ್‌ ಕಾರ್ಡ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಇಡೀ ಪೋಸ್ಟ್‌ಕಾರ್ಡ್‌ನಲ್ಲಿ ಇರುವ ಸಂಗತಿ ಕೇವಲ ಜೈ ಶ್ರೀರಾಮ್‌!

ಜೈ ಶ್ರೀರಾಮ್‌ ಎಂದು ಕೂಗಿದವರನ್ನು ಕಂಡರೆ ಕೆಂಡಾಮಂಡಲವಾಗುತ್ತಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಜೈಶ್ರೀರಾಮ್‌ ಎಂದು ಬರೆದ ಪೋಸ್ಟ್‌ಕಾರ್ಡ್‌ ಗಳನ್ನು ಕಳುಹಿಸುವುದಾಗಿ ಹಿಂದೂ ಪರ ಸಂಘಟನೆಗಳು ನಿರ್ಧರಿಸಿದಂದಿನಿಂದ ಪ್ರತಿ ದಿನ 8 ಸಾವಿರಕ್ಕೂ ಹೆಚ್ಚು ಕಾರ್ಡ್‌ಗಳು ಮಮತಾ ನಿವಾಸದ ವ್ಯಾಪ್ತಿಗೆ ಒಳಪಡುವ ಕಾಲೀಘಾಟ್ ಪೋಸ್ಟ್‌ ಆಫೀಸ್‌ಗೆ ಬರುತ್ತಿವೆ.

ಅಲ್ಲಿಯವರೆಗೆ 20-30 ಪೋಸ್ಟ್‌ಕಾರ್ಡ್‌ಗಳು ಬರುತ್ತಿದ್ದರೆ, ಒಂದೇ ಸಮನೆ ಇದರ ಸಂಖ್ಯೆ ಹೆಚ್ಚಿದೆ. ಮಮತಾ ಮನೆಗೆ ನಿತ್ಯ ಅಂಚೆ ತಲುಪಿಸಲು ಒಬ್ಬ ಪೋಸ್ಟ್‌ಮ್ಯಾನ್‌ ನಿಯೋಜಿಸಲಾಗಿದ್ದು, ಈತ ಎಲ್ಲ ಪೋಸ್ಟ್‌ಗಳನ್ನೂ ನಿಗದಿತ ವ್ಯಕ್ತಿಗೆ ಹಸ್ತಾಂತರಿಸುತ್ತಾನೆ. ಆದರೆ ಈ ಪ್ರಮಾಣದ ಜೈಶ್ರೀರಾಮ್‌ ಪೋಸ್ಟ್‌ಕಾರ್ಡ್‌ಗಳಿಂದ ಆತ ಈಗ ಚಿಂತಾಕ್ರಾಂತನಾಗಿದ್ದಾನೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ