ರಾಜ್ಯಸಭೆ ಕಲಾಪದ ಒಂದು ಚರ್ಚೆಗೆ 35 ಸಾವಿರ ರೂ. ಖರ್ಚು ಮಾಡಿದ್ದ ಜೇಟ್ಲಿ!

Team Udayavani, Aug 24, 2019, 3:27 PM IST

ಹೊಸದಿಲ್ಲಿ: ಬಿಜೆಪಿ ನಾಯಕ ಅರುಣ್‌ ಜೇಟ್ಲಿ ಅವರೆಂದರೆ ಪಕ್ಕಾ. ಪ್ರತಿ ಚರ್ಚೆಯಲ್ಲೂ ಸೂಕ್ತ ಸಾಕ್ಷ್ಯಾಧಾರ, ಕಾನೂನು ವಿಚಾರಗಳನ್ನಿಟ್ಟುಕೊಂಡೇ ಮಾತಿಗೆ ನಿಲ್ಲುತ್ತಿದ್ದರು. ಆದ್ದರಿಂದ ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತಿರುವಾಗ ಎದುರು ಮಾತನಾಡಲು ಯಾರೂ ಹೋಗುತ್ತಿರಲಿಲ್ಲ. ಇಂತಹ ಅಭ್ಯಾಸ ಹೊಂದಿದ್ದ ಜೇಟ್ಲಿ ಅವರು ರಾಜ್ಯಸಭೆಯ ಕಲಾಪದ ಒಂದು ಹೊತ್ತಿನ ಚರ್ಚೆಗೆ ತಾವು ಮಾತನಾಡಲೆಂದೇ 35 ಸಾವಿರ ರೂ. ಖರ್ಚು ಮಾಡಿದ್ದರು.

ಜೇಟ್ಲಿ ಅವರು ಮಾಜಿ ನ್ಯಾ|ಸೌಮಿತ್ರ ಸೇನ್‌ ಅವರ ವಾಗ್ಧಂಡನೆ ಕುರಿತಾಗಿ ರಾಜ್ಯಸಭೆಯಲ್ಲಿ ಮಾತನಾಡುವವರಿದ್ದರು. ಬೆಳಗ್ಗೆ ಜೇಟ್ಲಿ ಕಲಾಪಕ್ಕೆ ಬರುತ್ತಲೇ ಎಲ್ಲ ಸದಸ್ಯರಿಗೂ, ಅಧ್ಯಕ್ಷರಿಗೂ ಅಚ್ಚರಿ ಕಾರಣ, ಜೇಟ್ಲಿ ಅವರು ಪುಸ್ತಕಗಳ ದೊಡ್ಡ ಹೊರೆ ಹಿಡಿದುಕೊಂಡು ಬಂದಿದ್ದರು. ಎಲ್ಲವೂ ಹೊಸ ಪುಸ್ತಕಗಳೇ. ಹಾಗೆ ಬಂದವರೇ ಮಾತನಾಡಲು ಶುರುಮಾಡಿ ವಾಗ್ಧಂಡನೆ, ಕಾನೂನು ಹೇಗೆ ಏನು ಎತ್ತ? ಎಂದು ನಿರರ್ಗಳವಾಗಿ ಸಾಕ್ಷ್ಯಾಧಾರ ಸಮೇತ ಮಾತನಾಡಿದ್ದರು.

ಅವರು ಮಾತನಾಡಿ ಹೊರಗೆ ಬರುತ್ತಲೇ ಪತ್ರಕರ್ತರೂ ತಡೆಯಲಾರದೆ ಕೇಳಿಯೇ ಬಿಟ್ಟಿದ್ದರು. ಆಗ ಜೇಟ್ಲಿ ಅವರು ಕಾನೂನು ಕುರಿತಾಗಿ ಮಾತನಾಡಲು ತಾನು 35 ಸಾವಿರ ರೂ. ಮೌಲ್ಯದ ಪುಸ್ತಕ ಖರೀದಿಸಿದ್ದಾಗಿ ಹೇಳಿದ್ದರು. ಇನ್ನು ಸೌಮಿತ್ರ ಸೇನ್‌ ಅವರ ಪ್ರಕರಣದಲ್ಲಿ ರಾಜ್ಯಸಭೆಯಲ್ಲಿ ವಾಗ್ಧಂಡನೆ ಬಗ್ಗೆ ಪಾಸ್‌ ಆದರೂ ಲೋಕಸಭೆಗೆ ಅದು ಹೋಗುವ ಮುನ್ನವೇ ಸೇನ್‌ ಅವರು ರಾಜೀನಾಮೆ ನೀಡಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ