ಅನಂತ್‌ನಾಗ್‌:ಕುಖ್ಯಾತ ಕಲ್ಲು ತೂರಾಟಗಾರನ ಹತ್ಯೆ;ಚೀನಾ ಗ್ರೆನೇಡ್‌ ವಶ

Team Udayavani, Aug 4, 2017, 9:21 AM IST

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಕನಿಬಾಲ್‌ ಬಿಜ್‌ ಬೆಹಾರ ಎಂಬಲ್ಲಿ ಗುರುವಾರ ರಾತ್ರಿ ಯಿಂದ ಸೇನಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ  ಹಿಜ್‌ಬುಲ್‌ ಮುಜಾಯಿದೀನ್‌ ಉಗ್ರನೊಬ್ಬನನ್ನು ಹತ್ಯೆಗೈಯಲಾಗಿದೆ.  ಇದೇ ವೇಳೆ ಜೊತೆಯಲ್ಲಿದ್ದ ಇನ್ನಿಬ್ಬರು ಉಗ್ರರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. 

ನಡು ರಾತ್ರಿ ಉಗ್ರರನ್ನು ಗುರಿಯಾಗಿಸಿ ನಡೆಸುತ್ತಿದ್ದ ಗುಂಡಿನ ಚಕಮಕಿಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಅಪರಿಚಿತನೊಬ್ಬ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 

ಹತ್ಯೆಗೀಡಾದ ಉಗ್ರನ ಬಳಿ ಚೀನಾ ಹ್ಯಾಂಡ್‌ ಗ್ರೆನೇಡ್‌ , ಎಸ್‌ಎಲ್‌ಆರ್‌ ಬಂದೂಕು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಗುಂಡಿನ ಚಕಮಕಿಯಲ್ಲಿ ರಾಷ್ಟ್ರೀಯ ರೈಫ‌ಲ್ಸ್‌ನ ಯೋಧನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಹತ್ಯೆಗೀಡಾದ ಉಗ್ರ ಯಾವಾರ್‌ ನಿಸಾರ್‌ ಶೇರ್‌ಗುರಿ ಎಂದು ಗುರುತಿಸಲಾಗಿದ್ದು ಅನಂತ್‌ನಾಗ್‌ನ ನಿವಾಸಿಯಾಗಿದ್ದ. ಈತ ಈ ಪ್ರದೇಶದಲ್ಲಿ ಕುಖ್ಯಾತ ಕಲ್ಲು ತೂರಾಟಗಾರನಾಗಿದ್ದ. ಈತನ ಬಳಿ ಪತ್ತೆಯಾಗಿರುವ ಎಸ್‌ಎಲ್‌ಆರ್‌ ಗನ್‌ ಪೊಲೀಸ್‌ ಸಿಬಂದಿಯಿಂದ ಲೂಟಿಗೈದದ್ದು ಎಂದು ಪೊಲೀಸರು ತಿಳಿಸಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ