ಜಮ್ಮುಕಾಶ್ಮೀರದಲ್ಲಿ ಡ್ರೋನ್ ಹೊಡೆದುರುಳಿಸಿದ ಪೊಲೀಸರು: ಸುಧಾರಿತ ಎಲ್ ಇಡಿ ಸ್ಪೋಟಕ ಪತ್ತೆ
Team Udayavani, Jul 23, 2021, 8:49 AM IST
ಜಮ್ಮುಕಾಶ್ಮೀರ: ಜಮ್ಮು ಜಿಲ್ಲೆಯ ಅಕ್ನೂರ್ ಪ್ರದೇಶದಲ್ಲಿ (ಅಂತರಾಷ್ಟ್ರೀಯ ಗಡಿಯಿಂದ 8 ಕಿ. ಮೀ ಒಳಗೆ) ಸಂಶಯಾತ್ಮಕವಾಗಿ ಹಾರಾಟ ನಡೆಸುತ್ತಿದ್ದ ಡ್ರೋನ್ ಒಂದನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.
ಈ ಡ್ರೋನ್ ನಲ್ಲಿ 5 ಕೆಜಿ ಸುಧಾರಿತ ಎಲ್ ಇಡಿ ಸ್ಪೋಟಕಗಳಿದ್ದವು ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಡ್ರೋನ್ ಚಟುವಟಿಕೆಯ ಹಿಂದೆ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ (ಎಲ್ಇಟಿ) ಕೈವಾಡ ಇದೆಯೇ ಮತ್ತು ಭಯೋತ್ಪಾದಕ ದಾಳಿಗೆ ಸಂಚನ್ನು ರೂಪಿಸುತ್ತಿದೆಯೇ ಎಂದು ಏಜೆನ್ಸಿಗಳು ತನಿಖೆ ನಡೆಸುತ್ತಿವೆ ವರದಿಯಾಗಿದೆ.
ಈ ಹಿಂದೆಯೂ ಹಲವು ಬಾರಿ ಜಮ್ಮು ಕಾಶ್ಮೀರ ಗಡಿಯಲ್ಲಿ ಡ್ರೋನ್ ಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಡಿಜಿಪಿ ದಿಲ್ ಬಾಗ್ ಸಿಂಗ್, ಭಯೋತ್ಪಾದಕ ಸಂಘಟನೆಗಳು ನಿರಂತರವಾಗಿ ಡ್ರೋನ್ಗಳನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲು ಪ್ರಯತ್ನಿಸುತ್ತಿವೆ. ಅದ್ದರಿಂದ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್