ಅನಂತನಾಗ್ ಲೋಕಸಭಾ ಕ್ಷೇತ್ರ : ಉಗ್ರ ಭೀತಿ, ಬಿಗಿ ಭದ್ರತೆ ನಡುವೆ ಮತದಾನ
Team Udayavani, Apr 29, 2019, 11:59 AM IST
ಶ್ರೀನಗರ : ಅನಂತನಾಗ್ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಜಮ್ಮು ಕಾಶ್ಮೀರದ ಕುಲಗಾಂವ್ ಜಿಲ್ಲೆಯಲ್ಲಿ ಇಂದು ಸೋಮವಾರ ಮೂರು ಹಂತಗಳ ಚುನಾವಣೆಯ ಎರಡನೇ ಹಂತದ ಅಂಗವಾಗಿ ಅತ್ಯಂತ ಬಿಗಿ ಭದ್ರತೆಯಲ್ಲಿ ಆರಂಭಗೊಂಡ ಮತದಾನ ಚುರುಕಿನಿಂದ ನಡೆಯುತ್ತಿದೆ.
ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸೇರಿದಂತೆ ಒಟ್ಟು 18 ಅಭ್ಯರ್ಥಿಗಳ ಭವಿಷ್ಯ ಇಲ್ಲಿ ನಿರ್ಧಾರವಾಗಲಿದೆ.
ಮತದಾನ ಇಂದು ಬೆಳಗ್ಗೆ 7 ಬೆಳಗ್ಗೆ ಆರಂಭವಾಯಿತು. ಸಂಜೆ 4 ಗಂಟೆಗೆ ಮತದಾನ ಪ್ರಕ್ರಿಯೆ ಮುಗಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಂತನಾಗ್ ಲೋಕಸಭಾ ಕ್ಷೇತ್ರವು ದಕ್ಷಿಣ ಕಾಶ್ಮೀರದ ಅತ್ಯಂತ ಪ್ರಕ್ಷುಬ್ಧ ಕ್ಷೇತ್ರವಾಗಿದ್ದು ಉಗ್ರರ ದಾಳಿಗಳನ್ನು ತಡೆಯುವ ಸಕಲ ಪ್ರಯತ್ನಗಳೊಂದಿಗೆ ಬಿಗಿ ಭದ್ರತೆಯನ್ನು ಇಲ್ಲಿ ಏರ್ಪಡಿಸಲಾಗಿದೆ.