ಜೆ.ಎನ್‌.ಯು. ದೇಶದ ದುಬಾರಿ ಕೇಂದ್ರೀಯ ವಿಶ್ವವಿದ್ಯಾನಿಲಯ

Team Udayavani, Nov 14, 2019, 9:12 PM IST

ಹೊಸದಿಲ್ಲಿ: ದಿಲ್ಲಿಯಲ್ಲಿರುವ ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಮಕ್ಕಳ ಹಾಸ್ಟೆಲ್‌ ಶುಲ್ಕವನ್ನು ಹೆಚ್ಚಿಸಲಾಗಿದೆ. ಇದು ದೇಶದ ಇತರ ಕೇಂದ್ರೀಯ ವಿಶ್ವ ವಿದ್ಯಾನಿಲಯಗಳಿಗೆ ಹೋಲಿಸಿದರೆ ದುಬಾರಿ ವಿಶ್ವವಿದ್ಯಾನಿಲಯವಾಗಿ ಮಾರ್ಪಟ್ಟಿದೆ. ಮುಂಬರುವ ಶೈಕ್ಷಣಿಕ ವರ್ಷದ ಬಳಿಕ ಇದು ಜಾರಿಯಾಗಲಿದೆ.

ಜೆ.ಎನ್‌.ಯು. ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್‌ ಮತ್ತು ಊಟೋಪಹಾರವೆಚ್ಚಕ್ಕಾಗಿ 27,600 – 32,000 ರೂ. ಖರ್ಚು ಮಾಡುತ್ತಿದ್ದರು. ಈ ವರ್ಷ ಈ ದರ ಪರಿಷ್ಕೃತಗೊಂಡಿದ್ದು, 55,000 -61,000 ರೂ.ಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳಗೊಂಡ ವೆಚ್ಚ ದಿಲ್ಲಿ ಜೆ.ಎನ್‌.ಯು. ಅನ್ನು ದೇಶದ ದುಬಾರಿ ವಿವಿಯನ್ನಾಗಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ನೂತನ ಶುಲ್ಕ ಅನ್ವಯವಾಗಲಿದೆ.

ದೇಶದ ವಿವಿಧ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಶುಲ್ಕಗಳು (ಹಾಸ್ಟೆಲ್‌ ಮತ್ತು ಊಟೋಪಹಾರ) ಯಾವ ರೀತಿಯಾಗಿವೆ ಎಂದು ನೋಡುವುದಾದರೆ:

– ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾನಿಲಯ:
   ಪ್ರಸ್ತುತ ಶುಲ್ಕ – 27,600-32,000

   ಪರಷ್ಕೃತ ಶುಲ್ಕ –  55,000-61,000

– ದಿಲ್ಲಿ ವಿಶ್ವವಿದ್ಯಾನಿಲಯ – 40,000 – 55,000

– ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯ – 35,000

– ವಿಶ್ವ ಭಾರತಿ ವಿಶ್ವವಿದ್ಯಾನಿಲಯ – 21,600-30,400

– ಅಲಹಾಬಾದ್‌ ವಿಶ್ವವಿದ್ಯಾನಿಲಯ – 28,500

– ಬನಾರಸ್‌ ಹಿಂದೂ ವಿಶ್ವವಿದ್ಯಾನಿಲಯ – 27,400

– ಗುರು ಘಾಸಿದಾಸ್‌ ವಿಶ್ವವಿದ್ಯಾನಿಲಯ – 22,000-25,200

– ಪಾಂಡಿಚೇರಿ ವಿಶ್ವವಿದ್ಯಾನಿಲಯ – 12,000-15,200

– ಅಲಿಘರ್‌ ಮುಸ್ಲಿಂ ವಿಶ್ವವಿದ್ಯಾನಿಲಯ – 14,400

– ಹೈದರಾಬಾದ್‌ ವಿಶ್ವವಿದ್ಯಾನಿಲಯ – 14,000


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ