ಜಿಯೋಪಾರ್ಡಿ ಗೆದ್ದ ಭಾರತೀಯ
Team Udayavani, Jun 30, 2019, 5:16 AM IST
ಹೊಸದಿಲ್ಲಿ: ಅಮೆರಿಕದ ಪ್ರತಿಷ್ಠಿತ ಸ್ಪರ್ಧೆ ಟೀನ್ ಜಿಯೋಪಾರ್ಡಿಯ 2019ನೇ ಆವೃತ್ತಿಯಲ್ಲಿ ಭಾರತ ಮೂಲದ ಯುವಕ ಜಯ ಗಳಿಸಿದ್ದಾರೆ. ಅವರು 69.29 ಲಕ್ಷ ರೂ. ನಗದು ಬಹುಮಾನ ಗೆದ್ದಿದ್ದಾರೆ.
ಅಮೆರಿಕನ್ನರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುವ, ವಿದ್ಯಾರ್ಥಿಗಳ ರಸಪ್ರಶ್ನೆ ಕಾರ್ಯಕ್ರಮವಾದ ಟೀನ್ ಜಿಯೋಪಾರ್ಡಿಯಲ್ಲಿ ಅವಿ ಗುಪ್ತಾ ಗೆಲ್ಲುವ ಮೂಲಕ ಭಾರತೀಯ ಮೂಲದ ವಿದ್ಯಾರ್ಥಿಗಳು ಈ ಸ್ಪರ್ಧೆ ಮೇಲೆ ತಮ್ಮ ಹಿಡಿತವನ್ನು ಮತ್ತಷ್ಟು ಬಲಪಡಿಸಿದಂತಾಗಿದೆ. ಈ ಸ್ಪರ್ಧೆಯ 2018ರ ಆವೃತ್ತಿಯಲ್ಲೂ ಧ್ರುವ ಗೌರ್ ಎಂಬ ಭಾರತೀಯ ಯುವಕ ಜಯ ಸಾಧಿಸಿದ್ದ.