ಸಿಬ್ಬಂದಿಯಿಂದಲೇ ಜೆಟ್ ಖರೀದಿ?
Team Udayavani, Jun 29, 2019, 5:00 AM IST
ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ನಷ್ಟಕ್ಕೆ ಸಿಲುಕಿದ ಕಂಪನಿಯೊಂದನ್ನು, ಅದೇ ಕಂಪನಿಯ ಉದ್ಯೋಗಿಗಳೇ ಒಟ್ಟಾಗಿ ಖರೀದಿ ಮಾಡಲು ನಿರ್ಧರಿಸಿದ್ದಾರೆ. ನಷ್ಟದ ಸುಳಿಗೆ ಸಿಲುಕಿ ದಿವಾಳಿ ಪ್ರಕ್ರಿಯೆಗೆ ಅರ್ಜಿ ಹಾಕಿರುವ ಜೆಟ್ ಏರ್‌ವೇಸ್ ಕಂಪನಿಯನ್ನು ಆದಿ ಗ್ರೂಪ್‌ನ ಸಹಭಾಗಿತ್ವದೊಂದಿಗೆ ಶೇ.75ರಷ್ಟು ಪಾಲುದಾರಿಕೆಯಲ್ಲಿ ಖರೀದಿ ಮಾಡಲು ಜೆಟ್ಏರ್‌ವೇಸ್ ಉದ್ಯೋಗಿಗಳ ಒಕ್ಕೂಟ ನಿರ್ಧರಿಸಿದೆ. ಈ ಸಂಬಂಧ ಒಕ್ಕೂಟ ಪ್ರಕಟಣೆಯನ್ನೂ ಹೊರಡಿಸಿದೆ.
ವಿಮಾನಯಾನ ಸಂಸ್ಥೆಯು ಬ್ಯಾಂಕ್‌ಗಳಿಗೆ 8 ಸಾವಿರ ಕೋಟಿ ರೂ. ಸಾಲ ಮರುಪಾವತಿ ಮಾಡಬೇಕಿದೆ. ಅಲ್ಲದೆ, 25 ಸಾವಿರ ಕೋಟಿ ರೂ. ಅನ್ನು ಇತರ ವೆಂಡರುಗಳು ಹಾಗೂ ಉದ್ಯೋಗಿಗಳ ಸಂಬಳಕ್ಕೆ ಪಾವತಿಸಬೇಕಿದೆ. ದಿವಾಳಿ ಪ್ರಕ್ರಿಯೆಯ ಅಡಿಯಲ್ಲಿ ಶೇ.75ರಷ್ಟು ಪಾಲನ್ನು ಸಂಸ್ಥೆಯಲ್ಲಿ ಖರೀದಿಸಲು ನಿರ್ಧಾರ ಮಾಡಲಾಗಿದೆ. ಒಂದು ವೇಳೆ ಖರೀದಿಯಲ್ಲಿ ಯಶಸ್ವಿಯಾದರೆ, ಜೆಟ್ ಏರ್‌ವೇಸ್‌ನಲ್ಲಿ ಕೆಲಸ ಮಾಡುವ ಎಲ್ಲರೂ ಕಂಪನಿಯ ಮಾಲೀಕರಾಗುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ