ಜಿಗ್ನೇಶ್‌ ಮೇವಾನಿ ರ‍್ಯಾಲಿ ರದ್ದು: ದಿಲ್ಲಿಯಲ್ಲಿ ಭಾರೀ ಪ್ರತಿಭಟನೆ

Team Udayavani, Jan 9, 2018, 12:02 PM IST

ಹೊಸದಿಲ್ಲಿ : ಗುಜರಾತ್‌ ನೂತನ ಶಾಸಕ ಹಾಗೂ ದಲಿತ ನಾಯಕ ಜಿಗ್ನೇಶ್‌ ಮೇವಾನಿ ಪಾಲ್ಗೊಳ್ಳಲಿದ್ದ ಇಂದು ಮಂಗಳವಾರದ  ರ‍್ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿರುವ  ಕಾರಣ ರಾಲಿಯನ್ನು ರದ್ದುಪಡಿಸಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಿಡುವ ಸಲುವಾಗಿ ದಿಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. 

ಮೇವಾನಿ ಅವರ “ಯುವ ಹೂಂಕಾರ್‌ ರ‍್ಯಾಲಿ’ಯನ್ನು ರದ್ದುಪಡಿಸಲಾದುದಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಪ್ರತಿಭಟನೆ ವ್ಯಕ್ತವಾಯಿತು. 

ಎಎನ್‌ಐ ವರದಿಯ ಪ್ರಕಾರ ಗುಜರಾತ್‌ ದಲಿತ ನಾಯಕನ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಪಾರ್ಲಿಮೆಂಟ್‌ ಸ್ಟ್ರೀಟ್‌ನಲ್ಲಿ ಪ್ರಬಲ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. 

ಇದೇ ವೇಳೆ ಮೇವಾನಿಯನ್ನು ಟೀಕಿಸಿ ಹಲವಾರು ಪೋಸ್ಟರ್‌ಗಳು ರಾಷ್ಟ್ರ ರಾಜಧಾನಿಯಲ್ಲಿ ಕಂಡು ಬಂದಿವೆ. ಈ ಪೋಸ್ಟರ್‌ಗಳಲ್ಲಿ ಮೇವಾನಿಯನ್ನು “ಭಗೋಡಾ’ (ತಲೆಮರೆಸಿಕೊಂಡವನು) ಎಂದು ಆರೋಪಿಸಲಾಗಿದೆಯಲ್ಲದೆ ಜಾತಿ ನೆಲೆಯಲ್ಲಿ ಸಮಾಜವನ್ನು ಒಡೆಯುವ ಪ್ರಚೋದನಕಾರಿ ಭಾಷಣ ಮಾಡುವವನೆಂದೂ ಖಂಡಿಸಲಾಗಿದೆ. ಮೇಲಾಗಿ ಮೇವಾನಿಗೆ ನಕ್ಸಲರ ನಂಟು ಕೂಡ ಇದೆ ಎಂದು ಆರೋಪಿಸಲಾಗಿದೆ.

ದಿಲ್ಲಿ ಪೋಲಿಸರು ಸೆ.144ರಡಿ ಮೇವಾನಿ  ರ‍್ಯಾಲಿಗೆ ಅನುಮತಿ ನಿರಾಕರಿಸಿದ್ದರು. ದಿಲ್ಲಿಯು ಗಣರಾಜ್ಯೋತ್ಸವ ದಿನಕ್ಕೆ ಸಜ್ಜಾಗುತ್ತಿರುವ ಕಾರಣವನ್ನೂ ಪೊಲೀಸರು ಮುಂದಿಟ್ಟಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ