CRPFಕ್ಯಾಂಪ್ ಮೇಲೆ ಉಗ್ರರ ಹೊಂಚು ದಾಳಿ;ಸ್ಫೋಟಗೊಳ್ಳಲಿಲ್ಲ ಗ್ರೆನೇಡ್
Team Udayavani, Sep 18, 2018, 9:43 AM IST
ಶ್ರೀನಗರ : ಪುಲ್ವಾಮಾದ ನೆವಾದಲ್ಲಿ ಉಗ್ರರು ಸಿಆರ್ಪಿಎಫ್ ಕ್ಯಾಂಪ್ ಮೇಲೆ ಮಂಗಳವಾರ ನಸುಕಿನ ವೇಳೆ ಹೊಂಚು ದಾಳಿ ನಡೆಸಿ ಗ್ರೆನೇಡ್ ಎಸೆದಿದ್ದಾರೆ. ಗ್ರೆನೇಡ್ ಸ್ಫೋಟಗೊಳ್ಳದ ಕಾರಣ ಪ್ರಾಣ ಹಾನಿ ತಪ್ಪಿ ಹೋಗಿದೆ.
ನಸುಕಿನ 1.30 ರ ವೇಳೆಗೆ ಉಗ್ರರು ದಾಳಿ ನಡೆಸಿದ್ದು,ಸೇನೆ ತಕ್ಷಣ ಗುಂಡಿನ ದಾಳಿ ನಡೆಸಿದೆ. ದಾಳಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ.
ಸ್ಥಳದಿಂದ ಉಗ್ರರು ಪರಾರಿಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ.