ಶಾಲೆಗೆ ಬಣ್ಣ ಬಳಿಯುವ ವಿಚಾರದಲ್ಲಿ ಜೆಎಂಎಂ-ಬಿಜೆಪಿ ವರ್ಣ ಕದನ
Team Udayavani, May 22, 2022, 12:53 AM IST
ರಾಂಚಿ: ಝಾರ್ಖಂಡ್‌ನ ಸುಮಾರು 35 ಸಾವಿರ ಸರಕಾರಿ ಶಾಲೆಗಳಿಗೆ ಬಳಿಯಲಾಗಿರುವ ಬಣ್ಣವನ್ನು ಬದಲಾಯಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಈ ನಿರ್ಧಾರ, ಆಡಳಿತಾರೂಢ ಝಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಹಾಗೂ ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಪ್ರಸ್ತುತ ಎಲ್ಲ ಸರಕಾರಿ ಶಾಲೆಗಳಿಗೆ ನಸುಗೆಂಪು ಬಣ್ಣವನ್ನು ಬಳಿಯಲಾಗಿದ್ದು ಶೌಚಾಲಯಗಳಿಗೆ ನೀಲಿ ಬಣ್ಣ ಬಳಿಯಲಾಗಿದೆ. ಇತ್ತೀಚೆಗೆ ಝಾರ್ಖಂಡ್ ಶಿಕ್ಷಣ ಯೋಜನಾ ಮಂಡಳಿ (ಜಿಇಪಿಸಿ), ಎಲ್ಲ ಶಾಲೆಗಳಿಗೂ ಕಡು ಹಸುರು ಮತ್ತು ಬಿಳಿ ಬಣ್ಣಗಳನ್ನು ಬಳಿಸಬೇಕೆಂದು ರಾಜ್ಯದ ಎಲ್ಲ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ (ಡಿಇಒಗಳು) ಆದೇಶ ನೀಡಿದೆ.
ಇದನ್ನು ಟೀಕಿಸಿರುವ ಬಿಜೆಪಿ, ಕಡು ಹಸುರು ಹಾಗೂ ಬಿಳಿ ಬಣ್ಣಗಳು ಆಡಳಿತಾರೂಢ ಜೆಎಂಎಂ ಧ್ವಜದ ಬಣ್ಣಗಳಾಗಿದೆ. ಎಲ್ಲ ಶಾಲೆಗಳಿಗೂ ರಾಜಕೀಯ ಬಣ್ಣ ಮೆತ್ತಲು ಜೆಎಂಎಂ ನಿರ್ಧರಿಸಿದೆ ಎಂದು ಆರೋಪಿಸಿದೆ.
ಸರಕಾರದ ಸ್ಪಷ್ಟನೆ: ಬಿಜೆಪಿ ಆರೋಪವನ್ನು ನಿರಾಕರಿಸಿರುವ ಶಿಕ್ಷಣ ಸಚಿವ ಜಗರ್ನಾಥ್ ಮಹತೋ, ಹಸುರು ಬಣ್ಣ ಕಣ್ಣಿಗೆ ಮುದ ನೀಡುತ್ತದೆ, ಇನ್ನು ಬಿಳಿಯು ಸ್ವತ್ಛತೆಯ ಸಂಕೇತವಾಗಿದೆ. ಹಾಗಾಗಿ ಅವೆರಡೂ ಬಣ್ಣಗಳನ್ನು ಬಳಿಸುವಂತೆ ತಜ್ಞರ ಸಮಿತಿ ಶಿಫಾರಸು ಮಾಡಿದ್ದು, ಅದನ್ನೇ ಅನುಷ್ಠಾನಗೊಳಿಸಲಾಗುತ್ತಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾಧ್ಯಮದ ಕಣ್ತಪ್ಪಿಸಿ ಬಂದ ಶಿವಸೇನೆಯ ಬಂಡಾಯ ಶಾಸಕರು
ಉದಯಪುರ ಮತ್ತೆ ಉದ್ವಿಗ್ನ: ಶಿರಚ್ಛೇದನ ಘಟನೆ ಖಂಡಿಸಿ ಬೃಹತ್ ಪ್ರತಿಭಟನೆ, ಕಲ್ಲುತೂರಾಟ
ಸರ್ಕಾರ ರಚನೆಗೆ ಸಿದ್ಧತೆ: ಫಡ್ನವೀಸ್ ಮಹಾರಾಷ್ಟ್ರ ಮುಖ್ಯಮಂತ್ರಿ, ಶಿಂಧೆ ಉಪಮುಖ್ಯಮಂತ್ರಿ?
ಕೋವಿಡ್ ಸಂಖ್ಯೆ ಹೆಚ್ಚಳ:24ಗಂಟೆಯಲ್ಲಿ 18,000 ಪ್ರಕರಣ ದೃಢ, ಲಕ್ಷದ ಗಡಿ ದಾಟಿದ ಸಕ್ರಿಯ ಕೇಸ್
ಟೈಲರ್ ಕನ್ಹಯ್ಯಾ ಹತ್ಯೆ ಆರೋಪಿಗೆ ಕರಾಚಿಯ ಉಗ್ರ ಸಂಘಟನೆ ತರಬೇತಿ; ಪಾಕ್ ಹೇಳಿದ್ದೇನು?