ಗುಜರಾತ್ ಆಯ್ತು, ಯುಪಿಯಲ್ಲಿ ಇಬ್ಬರು ಶಾಸಕರು ಎಸ್ಪಿಗೆ ಗುಡ್ ಬೈ
Team Udayavani, Jul 29, 2017, 1:37 PM IST
ಲಕ್ನೋ:ಗುಜರಾತ್ ನಲ್ಲಿ ಆರು ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡ ಬೆಳವಣಿಗೆಯ ಬಳಿಕ ಇದೀಗ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಇಬ್ಬರು ಶಾಸಕರು ಶನಿವಾರ ರಾಜೀನಾಮೆ ನೀಡುವ ಮೂಲಕ ಅಖಿಲೇಶ್ ಯಾದವ್ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಸಮಾಜವಾದಿ ಪಕ್ಷದ ಯಶವಂತ ಸಿಂಗ್ ಮತ್ತು ಬುಕ್ಕಾಲ್ ನವಾಬ್ ಸೇರಿದಂತೆ ಇಬ್ಬರು ವಿಧಾನಪರಿಷತ್ ಸದಸ್ಯರು ರಾಜೀನಾಮೆ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ನವಾಬ್ ಅವರು ರಾಷ್ಟ್ರೀಯ ಶಿಯಾ ಸಮಾಜದ ಸ್ಥಾಪಕರಾಗಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಶ್ಲಾಘಿಸಿದರು.