ಇಂದು ಸಿಜೆಐ ಯು.ಯು.ಲಲಿತ್‌ ನಿವೃತ್ತಿ; ಧನ್ಯತೆ, ಸಂತೃಪ್ತಿಯ ಭಾವದಿಂದ ವಿದಾಯ ಎಂದ ಸಿಜೆಐ


Team Udayavani, Nov 8, 2022, 7:20 AM IST

ಇಂದು ಸಿಜೆಐ ಯು.ಯು.ಲಲಿತ್‌ ನಿವೃತ್ತಿ; ಧನ್ಯತೆ, ಸಂತೃಪ್ತಿಯ ಭಾವದಿಂದ ವಿದಾಯ ಎಂದ ಸಿಜೆಐ

ನವದೆಹಲಿ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್‌ ಅವರ ಸೇವಾವಧಿ ಪೂರ್ಣಗೊಂಡಿದ್ದು, ಮಂಗಳವಾರ ನಿವೃತ್ತಿಯಾಗಲಿದ್ದಾರೆ.

ದೇಶದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಡಿ.ವೈ.ಚಂದ್ರಚೂಡ್‌ ಅವರು ಮಂಗಳವಾರ ಪದಗ್ರಹಣ ಮಾಡಲಿದ್ದಾರೆ.

ತಮ್ಮ ಉತ್ತರಾಧಿಕಾರಿ ನ್ಯಾ.ಡಿ.ವೈ.ಚಂದ್ರಚೂಡ್‌ ಅವರೊಂದಿಗೆ ಸೋಮವಾರ ಕೊನೆಯದಾಗಿ ಸುಪ್ರೀಂ ಕೋರ್ಟ್‌ನ ಔಪಚಾರಿಕ ಪೀಠವನ್ನು ಅಲಂಕರಿಸಿ ಮಾತನಾಡಿದ ಹಾಲಿ ಸಿಜೆಐ ಲಲಿತ್‌, ತಾವು ಪರಿಪೂರ್ಣತೆಯ ಭಾವದಿಂದ ಮತ್ತು ಸಂತೃಪ್ತಿಯಿಂದ ವಿದಾಯ ಹೇಳುತ್ತಿರುವುದಾಗಿ ತಿಳಿಸಿದರು. ಜತೆಗೆ, ವಕೀಲ ಹಾಗೂ ಜಡ್ಜ್ ಆಗಿ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ 37 ವರ್ಷಗಳ ಪಯಣವನ್ನು ಮೆಲುಕು ಹಾಕಿದರು.

ಸರ್ವೋಚ್ಚ ನ್ಯಾಯಾಲಯಕ್ಕೆ ಜಡ್ಜ್ ಆಗಿ ಬರುವ ಎಲ್ಲರಿಗೂ ತಮ್ಮದೇ ಆದ ಸಾಮರ್ಥ್ಯವಿರುತ್ತದೆ. ಹಾಗಾಗಿ, ಅವರೆಲ್ಲರಿಗೂ ಸಂವಿಧಾನ ಪೀಠಗಳ ಭಾಗವಾಗಲು ಸಮಾನ ಅವಕಾಶ ಸಿಗಬೇಕು. ನಾನು ಇಲ್ಲೇ ಪ್ರಾಕ್ಟೀಸ್‌ ಮಾಡಿದ್ದೆ. ಆದರೆ, ಏಕಕಾಲಕ್ಕೆ ಎರಡು ಸಂವಿಧಾನ ಪೀಠಗಳು ಒಟ್ಟಿಗೆ ಸಿಟ್ಟಿಂಗ್‌ ನಡೆಸಿದ್ದನ್ನು ನೋಡಿಲ್ಲ. ಈಗ 3 ಸಂವಿಧಾನ ಪೀಠಗಳು ಏಕಕಾಲಕ್ಕೆ ಕಾರ್ಯನಿರ್ವಹಿಸುವುದನ್ನು ನೋಡುತ್ತಿರುವುದು ನನಗೆ ಅವಿಸ್ಮರಣೀಯ, ಸಂತೃಪ್ತಿಯ ಭಾವ ಒದಗಿಸಿದೆ ಎಂದೂ ನ್ಯಾ.ಲಲಿತ್‌ ಹೇಳಿದರು.

ಅಲ್ಲದೇ, ಅತ್ಯಂತ ವಿಶಿಷ್ಟ ಹಾಗೂ ಗೌರವಾನ್ವಿತ ವ್ಯಕ್ತಿಯಾದ ನ್ಯಾ.ಡಿ.ವೈ.ಚಂದ್ರಚೂಡ್‌ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದೇನೆ. ಇದೊಂದು ಸುಂದರ ಗಳಿಗೆ. ಇದಕ್ಕಿಂತ ದೊಡ್ಡ ಭಾಗ್ಯ ಬೇರಾವುದೂ ಇಲ್ಲ ಎಂದೂ ಅವರು ನುಡಿದರು.

 

ಟಾಪ್ ನ್ಯೂಸ್

COuncil

Legislative Council: ಮತ್ತೆ ಕಲಾಪ ನುಂಗಿದ ವಾಲ್ಮೀಕಿ ನಿಗಮ ಹಗರಣ

Vidhana-Khader

Legislative Assembly: ಬಿಜೆಪಿ ಗದ್ದಲದ ಮಧ್ಯೆ ಸಿಎಂ ಸಿದ್ದರಾಮಯ್ಯ ಉತ್ತರ

Minister-Krisna

Release of funds; ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರ, ಮನೆ: ಸಚಿವ ಕೃಷ್ಣ ಬೈರೇಗೌಡ

Kiran-kodgi-MLA

KSRTC: ಬೇಡಿಕೆ ಮೇರೆಗೆ ಹೊಸ ರೂಟ್‌: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

Vidhana-Soudha

Congress Government; ವಿಪಕ್ಷದ ಮೇಲೆ ಆರೋಪಗಳ ಸುರಿಮಳೆ!

Ivan-Dsoza

Council; ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಶೀಘ್ರ ಮಂಡಳಿ: ಸಚಿವ ಡಿ. ಸುಧಾಕರ್‌

Dinesh-gundurao

Health: ಗುತ್ತಿಗೆ ಆಧಾರದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳ ನೇಮಕ: ಸಚಿವ ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eqwewqe

Microsoft ತಾಂತ್ರಿಕ ಸಮಸ್ಯೆ: ಸಾಫ್ಟ್ ವೇರ್‌ ಅಪ್‌ಡೇಟ್‌ ಮಾಡಲು ಕೇಂದ್ರ ಸಲಹೆ

1-reccc

Chenab; ಆ.15ಕ್ಕೆ ಅತೀ ಎತ್ತರದ ರೈಲು ಸೇತುವೆ ಲೋಕಾರ್ಪಣೆ: ವಿಶೇಷತೆಗಳೇನು?

1-reasas

ISRO ಅಧ್ಯಕ್ಷರಿಗೆ ನಿವೃತ್ತಿ ಅಂಚಿನಲ್ಲಿ ಪಿಎಚ್‌.ಡಿ.; ಈಡೇರಿದ ಕನಸು

Kedarnath

Uttarakhand; ಚಾರ್‌ಧಾಮ್‌ಗಳ ಹೆಸರು ದುರ್ಬಳಕೆ ತಡೆಗೆ ಕಾಯ್ದೆ

vinay-khwatra

America; ಭಾರತದ ರಾಯಭಾರಿ ಸ್ಥಾನಕ್ಕೆ ವಿನಯ್‌ ಕ್ವಾತ್ರಾ ನೇಮಕ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

COuncil

Legislative Council: ಮತ್ತೆ ಕಲಾಪ ನುಂಗಿದ ವಾಲ್ಮೀಕಿ ನಿಗಮ ಹಗರಣ

Vidhana-Khader

Legislative Assembly: ಬಿಜೆಪಿ ಗದ್ದಲದ ಮಧ್ಯೆ ಸಿಎಂ ಸಿದ್ದರಾಮಯ್ಯ ಉತ್ತರ

Minister-Krisna

Release of funds; ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರ, ಮನೆ: ಸಚಿವ ಕೃಷ್ಣ ಬೈರೇಗೌಡ

Kiran-kodgi-MLA

KSRTC: ಬೇಡಿಕೆ ಮೇರೆಗೆ ಹೊಸ ರೂಟ್‌: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

Vidhana-Soudha

Congress Government; ವಿಪಕ್ಷದ ಮೇಲೆ ಆರೋಪಗಳ ಸುರಿಮಳೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.