- Monday 16 Dec 2019
ಅಯೋಧ್ಯೆ ತೀರ್ಪು: ಸಾಂವಿಧಾನಿಕ ಪೀಠದ ನ್ಯಾಯಮೂರ್ತಿಯೊಬ್ಬರಿಗೆ ಝಡ್ ಸೆಕ್ಯುರಿಟಿ
Team Udayavani, Nov 17, 2019, 8:58 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ಅಯೋಧ್ಯೆ ತೀರ್ಪನ್ನು ನೀಡಿದ್ದ ಐವರು ಸದಸ್ಯರ ಸಾಂವಿಧಾನಿಕ ಪೀಠದಲ್ಲಿದ್ದ ನ್ಯಾಯಮೂರ್ತಿಗಳ ಪೈಕಿ ಒಬ್ಬರಾಗಿರುವ ಕರ್ನಾಟಕದವರೇ ಆದ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರಿಗೆ ಕೇಂದ್ರ ಸರಕಾರ ಝಡ್ ಪ್ಲಸ್ ಭದ್ರತೆಯನ್ನು ಒದಗಿಸಲು ನಿರ್ಧರಿಸಿದೆ. ನ್ಯಾಯಮೂರ್ತಿ ನಝೀರ್ ಅವರ ಕುಟುಂಬ ಸದಸ್ಯರಿಗೂ ಸಹ ಸೂಕ್ತ ಭದ್ರತೆಯನ್ನು ಒದಗಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಈ ಭದ್ರತೆ ತತ್ ಕ್ಷಣದಿಂದಲೇ ಜಾರಿಗೆ ಬರಲಿದೆ.
ನ್ಯಾಯಮೂರ್ತಿ ನಝೀರ್ ಅವರಿಗೆ ಕೆಲವು ಮೂಲಭೂತ ಸಂಘಟನೆಗಳಿಂದ ಪ್ರಾಣಹಾನಿ ಬೆದರಿಕೆ ಇರುವ ಕಾರಣ ಸರಕಾರ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ತಿಳಿದುಬಂದಿದೆ. ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರ ಬೆಂಗಳೂರು ಹಾಗೂ ಮಂಗಳೂರಿನಲ್ಲಿರುವ ಮನೆಗಳಿಗೂ ಸಹ ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳ ಭದ್ರತೆಯನ್ನು ಒದಗಿಸಲಾಗಿದೆ.
ಜಸ್ಟಿಸ್ ಅಬ್ದುಲ್ ನಝೀರ್ ಮತ್ತು ಕರ್ನಾಟಕ ಹಾಗೂ ದೇಶದ ಇನ್ನಿತರ ಭಾಗಗಳಲ್ಲಿ ಇರುವ ಅವರ ಕುಟುಂಬ ಸದಸ್ಯರಿಗೆ ತಕ್ಷಣವೇ ಅನ್ವಯವಾಗುವಂತೆ ‘ಝಡ್’ ಭದ್ರತೆಯನ್ನು ಸಂಬಂಧಿತ ಭದ್ರತಾ ಪಡೆಗಳು ಹಾಗೂ ಸ್ಥಳೀಯ ಪೊಲೀಸರು ಒದಗಿಸಲಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
ನ್ಯಾಯಮೂರ್ತಿ ನಝೀರ್ ಅವರು ಬೆಂಗಳೂರು ಅಥವಾ ಮಂಗಳೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಕರ್ನಾಟಕ ಖೋಟಾದಡಿಯಲ್ಲಿ ಅವರಿಗೆ ಈ ಭದ್ರತೆ ಸಿಗಲಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಝಡ್ ವಿಭಾಗದಡಿಯಲ್ಲಿ ಬರುವ ಭದ್ರತೆಯಲ್ಲಿ ಅರೆಸೇನಾಪಡೆ ಹಾಗೂ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಒಟ್ಟು 22 ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.
ಅಯೋಧ್ಯೆಯಲ್ಲಿನ ರಾಮಜನ್ಮಭೂಮಿ ವಿವಾದದ ತೀರ್ಪು ಮಾತ್ರವಲ್ಲದೇ, ಜಸ್ಟೀಸ್ ಅಬ್ದುಲ್ ನಝೀರ್ ಅವರು ತ್ರಿವಳಿ ತಲಾಖ್ ಅಸಾಂವಿಧಾನಿಕ ಎಂದು ತೀರ್ಪು ನೀಡಿದ್ದ ಪಂಚ ಸದಸ್ಯ ಪೀಠದಲ್ಲಿದ್ದ ನ್ಯಾಮೂರ್ತಿಗಳಲ್ಲಿ ಒಬ್ಬರಾಗಿದ್ದರು.
ಈ ವಿಭಾಗದಿಂದ ಇನ್ನಷ್ಟು
-
ನೋಯ್ಡಾ: ನೋಯ್ಡಾದಲ್ಲಿ ರಸ್ತೆ ಬದಿಯಲ್ಲಿ ಬಿರಿಯಾನಿ ಮಾರುತ್ತಿದ್ದ ಯುವಕನ ಮೇಲೆ ಜಾತಿ ಹೆಸರಿನಲ್ಲಿ ನಿಂದಿಸಿ, ಥಳಿಸಲಾಗಿದೆ. ಈ ಬಗೆಗಿನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ...
-
ಪಾಟ್ನಾ: ‘ನನ್ನ ತಂದೆ ಮತ್ತು ತಾಯಿಯ ತೇಜೋವಧೆ ಮಾಡುವ ರೀತಿಯ ಪೋಸ್ಟರ್ ಗಳನ್ನು ಹಾಕಿರುವ ಕುರಿತಾಗಿ ನನ್ನ ಅತ್ತೆಯ ಬಳಿ ವಿಚಾರಿಸಲು ಹೋದಾಗ ಅವರು ಸಿಟ್ಟುಗೊಂಡು...
-
ಕೋಟಾ: ಸಾಮಾಜಿಕ ಜಾಲತಾಣಗಳಲ್ಲಿ ನೆಹರೂ-ಗಾಂಧಿ ಕುಟುಂಬವನ್ನು ಅವಹೇಳನ ಮಾಡಿದ ಆರೋಪದಲ್ಲಿ ಬಾಲಿವುಡ್ ನಟಿ ಪಾಯಲ್ ರೋಹಟಗಿ ಅವರನ್ನು ರಾಜಸ್ಥಾನ ಪೊಲೀಸರು ರವಿವಾರ...
-
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿಯನ್ನು ವಿರೋಧಿಸಿ ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿರುವ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವ...
-
- ಕೇಂದ್ರ ಗೃಹ ಸಚಿವ ಅಮಿತ್ ಶಾ ಸುಳಿವು - ಜಾರ್ಖಂಡ್ ಚುನಾವಣಾ ರ್ಯಾಲಿಯಲ್ಲಿ ಮಾಹಿತಿ - ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಗೃಹ ಸಚಿವರು ಧನಬಾದ್/ರಾಂಚಿ: ಪೌರತ್ವ...
ಹೊಸ ಸೇರ್ಪಡೆ
-
ಮುಂಬಯಿ: 'ಶೋಲೆ,' 'ಗರಂ ಹವಾ', 'ತ್ರಿಶೂಲ್' ಖ್ಯಾತಿಯ, ಹಿಂದಿ ಸಿನೆಮಾ ಕ್ಷೇತ್ರದ ಹಿರಿಯ ನಟಿ ಗೀತಾ ಸಿದ್ಧಾರ್ಥ್ ನಿಧನ ಹೊಂದಿದ್ದಾರೆ. ಸಿನೆಮಾ ಮತ್ತು ಟಿವಿ ಕಲಾವಿದರ...
-
ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಬೆಳ್ತಂಗಡಿಯ ಮಂಜೊಟ್ಟಿ ಮತ್ತು ಮೂಡುಬಿದಿರೆ ಸಮೀಪದ ಶಿರ್ತಾಡಿಯಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಐವರು ಮೃತಪಟ್ಟಿದ್ದಾರೆ....
-
ನೋಯ್ಡಾ: ನೋಯ್ಡಾದಲ್ಲಿ ರಸ್ತೆ ಬದಿಯಲ್ಲಿ ಬಿರಿಯಾನಿ ಮಾರುತ್ತಿದ್ದ ಯುವಕನ ಮೇಲೆ ಜಾತಿ ಹೆಸರಿನಲ್ಲಿ ನಿಂದಿಸಿ, ಥಳಿಸಲಾಗಿದೆ. ಈ ಬಗೆಗಿನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ...
-
ಕಲ್ಲಡ್ಕ : ದೆಹಲಿಯ ಕೆಂಪು ಕೋಟೆಯಲ್ಲಿ ಜ. 26ರಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ವಿದ್ಯಾರ್ಥಿಗಳ ಇಂತಹ ಕ್ರೀಡಾ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಆಗಬೇಕು....
-
ಪಾಟ್ನಾ: ‘ನನ್ನ ತಂದೆ ಮತ್ತು ತಾಯಿಯ ತೇಜೋವಧೆ ಮಾಡುವ ರೀತಿಯ ಪೋಸ್ಟರ್ ಗಳನ್ನು ಹಾಕಿರುವ ಕುರಿತಾಗಿ ನನ್ನ ಅತ್ತೆಯ ಬಳಿ ವಿಚಾರಿಸಲು ಹೋದಾಗ ಅವರು ಸಿಟ್ಟುಗೊಂಡು...