ನ್ಯಾ| ಕರ್ಣನ್‌ ವಿರುದ್ಧದ ಕೇಸು 7 ಜಡ್ಜ್ಗಳ ಪೀಠಕ್ಕೆ ವರ್ಗ 

Team Udayavani, Feb 14, 2017, 8:09 AM IST

sc.jpg

ಹೊಸದಿಲ್ಲಿ: ತಮ್ಮದೇ ವರ್ಗಾವಣೆಗೆ ತಾವೇ ತಡೆಯಾಜ್ಞೆ ವಿಧಿಸಿಕೊಂಡ ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿ ಸಿ. ಎಸ್‌. ಕರ್ಣನ್‌ ವಿರುದ್ಧದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಸೋಮವಾರ 7 ಮಂದಿ ನ್ಯಾಯ ಮೂರ್ತಿಗಳ ಪೀಠಕ್ಕೆ ವರ್ಗಾಯಿಸಿದೆ.

ಕರ್ಣನ್‌ ವಿರುದ್ಧ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ 7 ಮಂದಿ ನ್ಯಾಯಮೂರ್ತಿಗಳ ಪೀಠವೇ ಇದನ್ನೂ ವಿಚಾರಣೆ ನಡೆಸಲಿ ಎಂದು ನ್ಯಾ| ಅರುಣ್‌ ಮಿಶ್ರಾ ಮತ್ತು ನ್ಯಾ| ಡಿ.ವೈ.ಚಂದ್ರಚೂಡ್‌ ಅವರಿದ್ದ ಪೀಠ ಹೇಳಿದೆ. ನ್ಯಾ|ಕರ್ಣನ್‌ ವಿರುದ್ಧ ದೂರು ನೀಡಿರುವ ಮದ್ರಾಸ್‌ ಹೈಕೋರ್ಟ್‌ ರಿಜಿಸ್ಟ್ರಾರ್‌ ಪರ ವಾದ ಮಂಡಿಸುತ್ತಿರುವ ನ್ಯಾ| ವೇಣುಗೋಪಾಲ್‌ ಅವರೂ ಇದನ್ನು ಸ್ವಾಗತಿಸಿದ್ದಾರೆ.

 ಪತ್ರ ಬರೆದಿದ್ದ ನ್ಯಾ| ಕರ್ಣನ್‌: 2016ರ ಡಿ.21ರಂದು ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಗೆ ಪತ್ರ ಬರೆದಿದ್ದ ನ್ಯಾ| ಕರ್ಣನ್‌, ನನ್ನ ವಿರುದ್ಧದ ಪ್ರಕರಣದಲ್ಲಿ ನಾನೇ ವಾದ ಮಂಡಿಸುತ್ತೇನೆ. ಇದಕ್ಕೆ ಅವಕಾಶ ಕೊಡಿ ಎಂದು ಕೋರಿದ್ದರು. ಇನ್ನೊಂದೆಡೆ, ಮದ್ರಾಸ್‌ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌, “ಹೈಕೋರ್ಟ್‌ನ ವಿವಿಧ ಕೇಸುಗಳ 12 ಕಡತಗಳು ಇನ್ನೂ ನ್ಯಾ| ಕರ್ಣನ್‌ ಅವರ ಬಳಿಯೇ ಇದ್ದು, ಅದನ್ನು ಅವರು ವಾಪಸ್‌ ನೀಡಿಲ್ಲ. ಜತೆಗೆ, ಅವರು ಮದ್ರಾಸ್‌ ಹೈಕೋರ್ಟ್‌ನಲ್ಲಿದ್ದಾಗ ಚೆನ್ನೈಯಲ್ಲಿ ನೀಡಲಾಗಿದ್ದ ನಿವಾಸವನ್ನು ಅವರಿನ್ನೂ ಖಾಲಿ ಮಾಡಿಲ್ಲ ಎಂದು ಆರೋಪಿಸಿದ್ದರು.  

 ಕೋರ್ಟ್‌ಗೆ ಹಾಜರಾಗಲಿಲ್ಲ: ಕರ್ಣನ್‌ ವಿರುದ್ಧ ಇತ್ತೀಚೆಗಷ್ಟೇ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಕೇಸು ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್‌ ಸೋಮ ವಾರ ಕೋರ್ಟ್‌ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಈ ಕುರಿತು ಶೋಕಾಸ್‌ ನೋಟಿಸ್‌ ಜಾರಿಯಾಗಿದ್ದರೂ, ಹಾಜರಾಗುವಲ್ಲಿ ನ್ಯಾ.ಕರ್ಣನ್‌ ವಿಫ‌ಲರಾಗಿದ್ದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, “ಅವರು ಏಕೆ ಹಾಜರಾಗಿಲ್ಲ ಎಂಬುದಕ್ಕೆ ಕಾರಣಗಳು ನಮಗೆ ತಿಳಿದಿಲ್ಲ. ಅವರು ಅವರ ಪರ ವಕೀಲರನ್ನೂ ನೇಮಿಸಿಲ್ಲ. ಹೀಗಾಗಿ, ವಿಚಾರಣೆ ಯನ್ನು ಮೂರು ವಾರಗಳ ಕಾಲ ಮುಂದೂಡು ತ್ತೇವೆ,’ ಎಂದು ಹೇಳಿತು. ಮದ್ರಾಸ್‌ ಹೈಕೋರ್ಟ್‌ ಸಿಜೆ ವಿರುದ್ಧ ಹಲವು ಆರೋಪಗಳನ್ನು ಮಾಡಿ ಸಿಜೆಐ, ಪ್ರಧಾನಿ ಮೋದಿ ಮತ್ತಿತರರಿಗೆ ಕರ್ಣನ್‌ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ, ಕಳೆದ ವಾರವಷ್ಟೇ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿತ್ತು.

 ಏನಿದು ಪ್ರಕರಣ?:  ನಿಂದನೀಯ ವರ್ತನೆ ಹಿನ್ನೆಲೆಯಲ್ಲಿ ಕಳೆದ ವರ್ಷ ನ್ಯಾ| ಕರ್ಣನ್‌ ಅವರನ್ನು ಮದ್ರಾಸ್‌ ಹೈಕೋರ್ಟ್‌ ನಿಂದ ಕಲ್ಕತ್ತಾ ಹೈಕೋರ್ಟ್‌ಗೆ ವರ್ಗಾಯಿಸಿ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿತ್ತು. ಜತೆಗೆ, ಅವರಿಗೆ ನ್ಯಾಯಾಂಗದ  ಯಾವುದೇ ಕೆಲಸ ಕಾರ್ಯಗಳನ್ನೂ ನೀಡಬಾರದು ಎಂದು ಸೂಚಿಸಿತ್ತು. ಆದರೆ, ಸುಪ್ರೀಂ ಆದೇಶಕ್ಕೇ ಸೆಡ್ಡು ಹೊಡೆದಿದ್ದ ನ್ಯಾ| ಕರ್ಣನ್‌ ಅವರು, 2016ರ ಫೆ.15ರಂದು ತನ್ನ ವರ್ಗಾವಣೆಗೆ ತಾವೇ ತಡೆಯಾಜ್ಞೆ ವಿಧಿಸಿ ಆದೇಶ ಹೊರಡಿಸಿದ್ದರು. ಇದರಿಂದ ಆಕ್ರೋಶಗೊಂಡ ಕೋರ್ಟ್‌, ನ್ಯಾ| ಕರ್ಣನ್‌ರ ಆದೇಶವನ್ನು ರದ್ದು ಮಾಡಿತ್ತು.

ಟಾಪ್ ನ್ಯೂಸ್

ಅಗ್ನಿಶಾಮಕ ಇಲಾಖೆಯಲ್ಲೂ ನೇಮಕಾತಿ ಅಕ್ರಮ:  7 ಮಂದಿ ಮೇಲೆ ಪ್ರಕರಣ ದಾಖಲು

ಅಗ್ನಿಶಾಮಕ ಇಲಾಖೆಯಲ್ಲೂ ನೇಮಕಾತಿ ಅಕ್ರಮ:  7 ಮಂದಿ ಮೇಲೆ ಪ್ರಕರಣ ದಾಖಲು

ಐ ಫೋನ್‌ ಬುಕ್‌ ಮಾಡಿ 66,000 ರೂ. ಕಳೆದುಕೊಂಡರು!

ಐ ಫೋನ್‌ ಬುಕ್‌ ಮಾಡಿ 66,000 ರೂ. ಕಳೆದುಕೊಂಡರು!

ಭಕ್ತಿ, ಮಾರುಕಟ್ಟೆಯಲ್ಲಿ ಖರೀದಿಸುವ ಸರಕಲ್ಲ: ಪೇಜಾವರ ಶ್ರೀ

ಭಕ್ತಿ, ಮಾರುಕಟ್ಟೆಯಲ್ಲಿ ಖರೀದಿಸುವ ಸರಕಲ್ಲ: ಪೇಜಾವರ ಶ್ರೀ

ಸಚಿವ ಸ್ಥಾನ ಕಿತ್ತುಕೊಂಡ ಶೇ.1 ಕಮಿಷನ್‌ ಆಸೆ!

ಸಚಿವ ಸ್ಥಾನ ಕಿತ್ತುಕೊಂಡ ಶೇ.1 ಕಮಿಷನ್‌ ಆಸೆ!

ಆಪ್‌ ಸಿಎಂ ಅಭ್ಯರ್ಥಿ ಅಜಯ್‌ ಕೊಟಿಯಾಲ್‌ ಬಿಜೆಪಿಗೆ!

ಆಪ್‌ ಸಿಎಂ ಅಭ್ಯರ್ಥಿ ಅಜಯ್‌ ಕೊಟಿಯಾಲ್‌ ಬಿಜೆಪಿಗೆ!

ಭುಗಿಲೆದ್ದ ಹಿಂಸಾಚಾರ: ಆಂಧ್ರಪ್ರದೇಶದಲ್ಲಿ ಸಚಿವ, ಶಾಸಕರ ಮನೆಗೆ ಬೆಂಕಿ!

ಭುಗಿಲೆದ್ದ ಹಿಂಸಾಚಾರ: ಆಂಧ್ರಪ್ರದೇಶದಲ್ಲಿ ಸಚಿವ, ಶಾಸಕರ ಮನೆಗೆ ಬೆಂಕಿ!

ಶ್ರೀನಗರ ಗುಂಡಿನ ದಾಳಿ: ಪೊಲೀಸ್‌ ಪೇದೆಯನ್ನು ಕೊಂದ ಉಗ್ರರು

ಶ್ರೀನಗರ ಗುಂಡಿನ ದಾಳಿ: ಪೊಲೀಸ್‌ ಪೇದೆಯನ್ನು ಕೊಂದ ಉಗ್ರರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಚಿವ ಸ್ಥಾನ ಕಿತ್ತುಕೊಂಡ ಶೇ.1 ಕಮಿಷನ್‌ ಆಸೆ!

ಸಚಿವ ಸ್ಥಾನ ಕಿತ್ತುಕೊಂಡ ಶೇ.1 ಕಮಿಷನ್‌ ಆಸೆ!

ಆಪ್‌ ಸಿಎಂ ಅಭ್ಯರ್ಥಿ ಅಜಯ್‌ ಕೊಟಿಯಾಲ್‌ ಬಿಜೆಪಿಗೆ!

ಆಪ್‌ ಸಿಎಂ ಅಭ್ಯರ್ಥಿ ಅಜಯ್‌ ಕೊಟಿಯಾಲ್‌ ಬಿಜೆಪಿಗೆ!

ಭುಗಿಲೆದ್ದ ಹಿಂಸಾಚಾರ: ಆಂಧ್ರಪ್ರದೇಶದಲ್ಲಿ ಸಚಿವ, ಶಾಸಕರ ಮನೆಗೆ ಬೆಂಕಿ!

ಭುಗಿಲೆದ್ದ ಹಿಂಸಾಚಾರ: ಆಂಧ್ರಪ್ರದೇಶದಲ್ಲಿ ಸಚಿವ, ಶಾಸಕರ ಮನೆಗೆ ಬೆಂಕಿ!

ಶ್ರೀನಗರ ಗುಂಡಿನ ದಾಳಿ: ಪೊಲೀಸ್‌ ಪೇದೆಯನ್ನು ಕೊಂದ ಉಗ್ರರು

ಶ್ರೀನಗರ ಗುಂಡಿನ ದಾಳಿ: ಪೊಲೀಸ್‌ ಪೇದೆಯನ್ನು ಕೊಂದ ಉಗ್ರರು

ಕರಾಚಿಯಲ್ಲೇ ಇದ್ದಾನೆ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ

ಕರಾಚಿಯಲ್ಲೇ ಇದ್ದಾನೆ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ

MUST WATCH

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ಉಡುಪಿ : ಹಲವು ಸಂಶಯಗಳನ್ನು ಹುಟ್ಟು ಹಾಕಿದ ಯುವಜೋಡಿ ಸಾವು ಪ್ರಕರಣ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

ಹೊಸ ಸೇರ್ಪಡೆ

ಅಗ್ನಿಶಾಮಕ ಇಲಾಖೆಯಲ್ಲೂ ನೇಮಕಾತಿ ಅಕ್ರಮ:  7 ಮಂದಿ ಮೇಲೆ ಪ್ರಕರಣ ದಾಖಲು

ಅಗ್ನಿಶಾಮಕ ಇಲಾಖೆಯಲ್ಲೂ ನೇಮಕಾತಿ ಅಕ್ರಮ:  7 ಮಂದಿ ಮೇಲೆ ಪ್ರಕರಣ ದಾಖಲು

ಐ ಫೋನ್‌ ಬುಕ್‌ ಮಾಡಿ 66,000 ರೂ. ಕಳೆದುಕೊಂಡರು!

ಐ ಫೋನ್‌ ಬುಕ್‌ ಮಾಡಿ 66,000 ರೂ. ಕಳೆದುಕೊಂಡರು!

ಭಕ್ತಿ, ಮಾರುಕಟ್ಟೆಯಲ್ಲಿ ಖರೀದಿಸುವ ಸರಕಲ್ಲ: ಪೇಜಾವರ ಶ್ರೀ

ಭಕ್ತಿ, ಮಾರುಕಟ್ಟೆಯಲ್ಲಿ ಖರೀದಿಸುವ ಸರಕಲ್ಲ: ಪೇಜಾವರ ಶ್ರೀ

ಸಚಿವ ಸ್ಥಾನ ಕಿತ್ತುಕೊಂಡ ಶೇ.1 ಕಮಿಷನ್‌ ಆಸೆ!

ಸಚಿವ ಸ್ಥಾನ ಕಿತ್ತುಕೊಂಡ ಶೇ.1 ಕಮಿಷನ್‌ ಆಸೆ!

ಆಪ್‌ ಸಿಎಂ ಅಭ್ಯರ್ಥಿ ಅಜಯ್‌ ಕೊಟಿಯಾಲ್‌ ಬಿಜೆಪಿಗೆ!

ಆಪ್‌ ಸಿಎಂ ಅಭ್ಯರ್ಥಿ ಅಜಯ್‌ ಕೊಟಿಯಾಲ್‌ ಬಿಜೆಪಿಗೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.