ತೆಲಂಗಾಣ ಎನ್ ಕೌಂಟರ್, ಗಲ್ಲುಶಿಕ್ಷೆ ಪರ-ವಿರೋಧ ಚರ್ಚೆ; ಸಿಜೆಐ ಬೋಬ್ಡೆ ಮಾತಿನ ಮರ್ಮವೇನು?

Team Udayavani, Dec 7, 2019, 4:38 PM IST

ನವದೆಹಲಿ/ಜೋಧ್ ಪುರ್: ತಕ್ಷಣವೇ ನ್ಯಾಯದಾನ ಮಾಡಲು ಸಾಧ್ಯವಿಲ್ಲ. ಹೀಗೆ ಮಾಡಿದರೆ ನ್ಯಾಯದ ಚಾರಿತ್ರ್ಯ ನಷ್ಟವಾದಂತೆ. ನ್ಯಾಯದ ಹೆಸರಿನಲ್ಲಿ ಪ್ರತೀಕಾರದ ನಡೆ ಸರಿಯಲ್ಲ…ಇದು ಹೈದರಾಬಾದ್ ಎನ್ ಕೌಂಟರ್ ಘಟನೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶಾರದ್ ಅರವಿಂದ್ ಬೋಬ್ಡೆ ಅವರು ಶನಿವಾರ ನೀಡಿರುವ ಪ್ರತಿಕ್ರಿಯೆಯಾಗಿದೆ.

ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ತೆಲಂಗಾಣ ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆಗೈದ ಘಟನೆ ನಂತರ ಸಿಜೆಐ ಬೋಬ್ಡೆ ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಆದರೆ ಸಿಜೆಐ ಅವರು ನಿಖರವಾಗಿ ಇದೇ ಘಟನೆಯನ್ನು ಉಲ್ಲೇಖಿಸಿ ಈ ಹೇಳಿಕೆಯನ್ನು ನೀಡಿಲ್ಲ ಎಂದು ವರದಿ ವಿವರಿಸಿದೆ.

ಅತ್ಯಾಚಾರಿ ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಿದ್ದಕ್ಕೆ ಪೊಲೀಸರ ಕ್ರಮದ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಆದರೆ ದೇಶದ ಬಹುತೇಕರು ಈ ಘಟನೆಯನ್ನು ಸ್ವಾಗತಿಸಿದ್ದರು.

ಸಿಜೆಐ ಬೋಬ್ಡೆ ಮಾತಿನ ಹಿನ್ನಲೆ ಏನು?

ಶನಿವಾರ ರಾಜಸ್ಥಾನದ ನೂತನ ಹೈಕೋರ್ಟ್ ಕಟ್ಟಡವನ್ನು ಉದ್ಘಾಟಿಸಿದ ನಂತರದ ಸಮಾರಂಭದಲ್ಲಿ ಸಿಜೆಐ ಬೋಬ್ಡೆ ಅವರು ದೇಶಾದ್ಯಂತ ನ್ಯಾಯಾಂಗ ಸುಧಾರಣೆ, ಮರಣದಂಡನೆ ಹಾಗೂ ಶೀಘ್ರ ನ್ಯಾಯದ ಬಗ್ಗೆ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಕೂಡಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ನ್ಯಾಯಾಂಗ ಮತ್ತು ದಾವೆ ಕುರಿತ ಬದಲಾವಣೆಯ ಗ್ರಹಿಕೆ ಬಗ್ಗೆ ನಮಗೆ ಅರಿವು ಇದೆ. ಒಂದು ದಾವೆಯನ್ನು ಅಂತಿಮ ಹಂತಕ್ಕೆ ಕೊಂಡೊಯ್ಯಲು ತಗಲುವ ದೀರ್ಘಾವಧಿ ಸಮಯವೇ ದೊಡ್ಡ ಅಡ್ಡಿಯಾಗಿದೆ ಎಂದು ಸಿಜೆಐ ಈ ವೇಳೆ ಅಭಿಪ್ರಾಯವ್ಯಕ್ತಪಡಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ