ಈ ನಾಯಿ ಬೆಲೆ 2 ಕೋಟಿ
Team Udayavani, Jun 3, 2018, 6:00 AM IST
ಚೆನ್ನೈ: ಒಂದು ನಾಯಿ ಬೆಲೆ ಹೆಚ್ಚೆಂದರೆ ಎಷ್ಟಿರಬಹುದು? 50 ಲಕ್ಷ ರೂ. ಇರಬಹುದೇ? ಅಲ್ಲವೇ ಅಲ್ಲ. ಈ ಶ್ವಾನಕ್ಕೆ ಕೊಂಚ ಭಿನ್ನತೆ ಇದೆ. ಜೂ.7ರಂದು ಬಿಡುಗಡೆಯಾಗಲಿರುವ ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಜತೆಗೆ ನಟಿಸಿರುವ “ಮಣಿ’ ಎಂಬ ನಾಯಿಯ ಮೌಲ್ಯ ಬರೋಬ್ಬರಿ 2 ಕೋಟಿ ರೂ.! ಹಾಗೆಂದು ಈ ನಾಯಿ ಉತ್ತಮ ತಳಿಯದ್ದೇನೂ ಅಲ್ಲ. ಸಾಮಾನ್ಯ ಬೀದಿ ನಾಯಿ. ಸಿನಿಮಾದ ಪೋಸ್ಟರ್, ಟ್ರೈಲರ್ಗಳನ್ನು ನೋಡಿದ ಹಲವಾರು ಮಂದಿ ಎಷ್ಟು ದುಡ್ಡು ಕೊಡಲೂ ಸಿದ್ಧರಿದ್ದಾರಂತೆ. ಆದರೆ ಅದಕ್ಕೆ ಒಪ್ಪದ ಸೈಮನ್, ಆತ ನಮ್ಮ ಕುಟುಂಬದ ಸದಸ್ಯನಿದ್ದಂತೆ. ಬೆಳಗ್ಗೆ ಎದ್ದ ಕೂಡಲೇ ನಾನು ಆತನ ಮುಖ ನೋಡು ತ್ತೇನೆ. ಹೀಗಾಗಿ ಆ ನಾಯಿಯನ್ನು ಕೊಡಲು ಹೇಗೆ ಸಾಧ್ಯ ಎಂದು ಕೇಳಿದ್ದಾರೆ.
“ಕಾಲಾ’ ಸಿನಿಮಾಕ್ಕಾಗಿ ಶ್ವಾನ ತರಬೇತು ದಾರ ಸೈಮನ್ ಮೂವತ್ತಕ್ಕೂ ಹೆಚ್ಚು ನಾಯಿಗ ಳನ್ನು ಪರೀಕ್ಷೆ ಮಾಡಿದ್ದರಂತೆ. ಅಂತಿಮವಾಗಿ ಈ ನಾಯಿ ಆಯ್ಕೆಯಾಗಿತ್ತು. ಆರಂಭದಲ್ಲಿ ನಾಯಿ ತನಗೆ ಕಚ್ಚಲು ಬಂದಿತ್ತು. ಅದಕ್ಕೆ ತರಬೇತಿ ಕೊಡಲೂ ಕಷ್ಟವಾಗಿತ್ತು ಎಂದು ಸೈಮನ್ ಹೇಳಿಕೊಂಡಿದ್ದಾರೆ. ದಿನ ಕಳೆದಂತೆ ಅದು ತರಬೇತಿಗೆ ಒಗ್ಗಿ, ಸ್ನೇಹಿತ ನಂತಾ ಗಿದೆ. ಬಳಿಕ ಅದಕ್ಕೆ ಮಣಿ ಎಂದು ಹೆಸರಿಡಲಾ ಯಿತು. ರಜನಿ ಸರ್ ಜತೆಗೆ ಅದು ಹೊಂದಿ ಕೊಂಡಿತ್ತು. ಅವರು ಹಾರಿ ಕುಳಿ ತುಕೋ ಎಂದು ಹೇಳುತ್ತಿದ್ದರೆ, ಅದರಂತೆಯೇ ನಡೆದು ಕೊ ಳ್ಳುತ್ತಿತ್ತು. “ಕಾಲಾ’ ಬಳಿಕ ಮೂರು ಸಿನಿಮಾಗಳಲ್ಲಿ ಅದು ನಟಿಸಿದೆ.